India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನಾಚರಣೆ: 5ಜಿ ಜಾರಿಗೆ ಮುಂದಾದ ರಿಲಯನ್ಸ್ ಜಿಯೋ!

|
Google Oneindia Kannada News

ಮುಂಬೈ, ಆಗಸ್ಟ್ 4: ಭಾರತದಲ್ಲಿ 5G ತಂತ್ರಜ್ಞಾನ ಅಳವಡಿಕೆಗೆ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ ತಮಗೆ ಲಭ್ಯವಾದ ಸ್ಪೆಕ್ಟ್ರಂನಂತೆ ತ್ವರಿತಗತಿ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸಲು ಪ್ರಮುಖ ಸಂಸ್ಥೆಗಳು ಮುಂದಾಗಿವೆ. ಭಾರ್ತಿ ಏರ್ ಟೆಲ್ ಬಳಿಕ ರಿಲಯನ್ಸ್ ಜಿಯೋ 5ಜಿ ಜಾರಿಗೊಳಿಸುವ ಬಗ್ಗೆ ಘೋಷಿಸಿಕೊಂಡಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಆಗಸ್ಟ್ 15ರಂದೇ ಗ್ರಾಹಕರಿಗೆ 5ಜಿ ಸೌಲಭ್ಯ ನೀಡಲು ಜಿಯೋ ಮುಂದಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. ಆಗಸ್ಟ್ ತಿಂಗಳಲ್ಲೇ 5ಜಿ ಸೇವೆ ಆರಂಭಿಸುವುದಾಗಿ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಟೆಲಿಕಾಂ ಸಮರ: 5ಜಿ ಸೇವೆ ಆರಂಭ ಘೋಷಿಸಿದ ಏರ್‌ಟೆಲ್!ಟೆಲಿಕಾಂ ಸಮರ: 5ಜಿ ಸೇವೆ ಆರಂಭ ಘೋಷಿಸಿದ ಏರ್‌ಟೆಲ್!

ಇತ್ತೀಚೆಗೆ ನಡೆದ 5ಜಿ ತರಂಗಗುಚ್ಛ ಹರಾಜಿನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್, ವೋಡಾಫೋನ್- ಐಡಿಯಾ(ವಿ) ಅಲ್ಲದೆ ಅದಾನಿ ಸಮೂಹದ ಟೆಲಿಕಾಂ ಸಂಸ್ಥೆ ಅಂತಿಮವಾಗಿ ತಮ್ಮ ಆಯ್ಕೆಯ ಸ್ಪೆಕ್ಟ್ರಮ್ ಪಡೆದುಕೊಂಡಿವೆ.

ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಪುಣೆ, ಚೆನ್ನೈ, ಲಕ್ನೋ, ಚಂಡೀಗಢ, ಜಾಮ್ ನಗರ್ ಹಾಗೂ ಗಾಂಧಿನಗರದಲ್ಲಿ ಮೊದಲಿಗೆ ಈ ತಂತ್ರಜ್ಞಾನದ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಯಾವ ಯಾವ ಬ್ಯಾಂಡ್‌ ಜಿಯೋಗೆ ಲಭ್ಯ

ಯಾವ ಯಾವ ಬ್ಯಾಂಡ್‌ ಜಿಯೋಗೆ ಲಭ್ಯ

5G ಗೆ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ಪ್ರೀಮಿಯಂ 700 MHz ಬ್ಯಾಂಡ್‌ನಲ್ಲಿ 5G ಸ್ಪೆಕ್ಟ್ರಮ್ ಖರೀದಿಸಲು ಎಲ್ಲಾ 22 ಟೆಲಿಕಾಂ ವಲಯಗಳಲ್ಲಿ ಜಿಯೋ ಏಕೈಕ ಆಪರೇಟರ್ ಆಗಿದೆ. ಇದಲ್ಲದೆ, 800MHz, 1800MHz, 3300MHz ಹಾಗೂ 26GHz ಬ್ಯಾಂಡ್‌ನಲ್ಲೂ 5ಜಿ ಸೇವೆ ಒದಗಿಸಲು ಜಿಯೋಗೆ ಟೆಲಿಕಾಂ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಸುಮಾರು 20 ವರ್ಷಗಳ ಅವಧಿಗೆ ಸುಮಾರು 88, 078 ಕೋಟಿ ರು ವ್ಯಯಿಸಿ ಈ ಉನ್ನತ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸಲು ಜಿಯೋ ಮುಂದಾಗಿದೆ

700 MHz ಬ್ಯಾಂಡ್

700 MHz ಬ್ಯಾಂಡ್

700 MHz ಬ್ಯಾಂಡ್ ಅನ್ನು ಜನನಿಬಿಡ ಪ್ರದೇಶಗಳು ಮತ್ತು ಭಾರೀ ಡೇಟಾ ಬಳಕೆಯ ಪ್ರದೇಶಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಹಳ್ಳಿಗಳಲ್ಲಿ ವಾಸಿಸುವ ಭಾರತದಂತಹ ದೇಶದಲ್ಲಿ, 700 MHz ಬ್ಯಾಂಡ್‌ನ ವಿಶಾಲ ವ್ಯಾಪ್ತಿಯು ಗ್ರಾಮೀಣ ಭಾರತವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಂದರೆ, 5G ನಗರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದರ ಪ್ರಯೋಜನ ಹಳ್ಳಿಗಳಿಗೂ ತಲುಪುವುದು ಖಚಿತ. ದೂರದ ಗ್ರಾಮೀಣ/ದಟ್ಟಣೆಯ ಪ್ರದೇಶಗಳಲ್ಲಿ ಸಂಪರ್ಕವನ್ನು ಒದಗಿಸಲು 700 MHz ಬ್ಯಾಂಡ್ ಸಹಾಯ ಮಾಡುತ್ತದೆ ಎಂದು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

5G: ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?
ಸ್ಥಳೀಯ ತಂತ್ರಜ್ಞಾನದ ವೇದಿಕೆ

ಸ್ಥಳೀಯ ತಂತ್ರಜ್ಞಾನದ ವೇದಿಕೆ

ಜಿಯೋ ಕಡಿಮೆ-ಬ್ಯಾಂಡ್, ಮಿಡ್-ಬ್ಯಾಂಡ್ ಮತ್ತು ಎಂಎಂವೇವ್ ಸ್ಪೆಕ್ಟ್ರಮ್‌ನ ವಿಶಿಷ್ಟ ಸಂಯೋಜನೆಯನ್ನು ಪಡೆದುಕೊಂಡಿದೆ, ಇದು ಕಂಪನಿಯ ಡೀಪ್ ಫೈಬರ್ ನೆಟ್‌ವರ್ಕ್ ಮತ್ತು ಸ್ಥಳೀಯ ತಂತ್ರಜ್ಞಾನದ ವೇದಿಕೆಗಳೊಂದಿಗೆ ಸೇರಿಕೊಂಡು, ಎಲ್ಲೆಡೆ 5G ಒದಗಿಸಲು ಸಾಧ್ಯವಾಗಿಸುತ್ತದೆ. 700 MHz ಸ್ಪೆಕ್ಟ್ರಮ್ ಲಭ್ಯತೆಯೊಂದಿಗೆ, ಅತ್ಯಂತ ವೇಗ, ಕಡಿಮೆ ಸುಪ್ತತೆ ಮತ್ತು ಬೃಹತ್ ಸಂಪರ್ಕದೊಂದಿಗೆ ಪ್ಯಾನ್-ಇಂಡಿಯಾ 5G ಸೇವೆಗಳನ್ನು ಒದಗಿಸುವ ಏಕೈಕ ಆಪರೇಟರ್ ಜಿಯೋ ಎಂದು ಹೇಳಲಾಗುತ್ತದೆ.

ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ ಅಧ್ಯಕ್ಷ ಆಕಾಶ್

ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ ಅಧ್ಯಕ್ಷ ಆಕಾಶ್

ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, ''ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ ಸ್ಥಾಪಿಸಿದ್ದೇವೆ. ಜಿಯೋ 4ಜಿ ಮೂಲಕ ಹೊರಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ'' ಎಂದರು. ''ಜಿಯೋ ತನ್ನ ರಾಷ್ಟ್ರವ್ಯಾಪಿ ಫೈಬರ್ ಉಪಸ್ಥಿತಿ, ಯಾವುದೇ ಮೂಲಸೌಕರ್ಯವಿಲ್ಲದ ಆಲ್-ಐಪಿ ನೆಟ್‌ವರ್ಕ್, ಸ್ಥಳೀಯ 5G ಸ್ಟಾಕ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಾದ್ಯಂತ ಬಲವಾದ ಜಾಗತಿಕ ಪಾಲುದಾರಿಕೆಯಿಂದಾಗಿ ಕಡಿಮೆ ಅವಧಿಯಲ್ಲಿ 5G ರೋಲ್‌ಔಟ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಕಂಪನಿ ತಿಳಿಸಿದೆ.

ಆಜಾದಿ ಕಾ ಅಮೃತ್ ಮಹೋತ್ಸವ

ಆಜಾದಿ ಕಾ ಅಮೃತ್ ಮಹೋತ್ಸವ

'ಆಜಾದಿ ಕಾ ಅಮೃತ್ ಮಹೋತ್ಸವ' ದೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು 2022 ರ ವೇಳೆಗೆ ಹೊಸ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. 75 ವರ್ಷಗಳ ಸ್ವಾತಂತ್ರ್ಯ ಮತ್ತು ಜನರು, ಸಂಸ್ಕೃತಿ ಮತ್ತು ಸಾಧನೆಗಳ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಈ ಉಪಕ್ರಮವಾಗಿದೆ. 'ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಪ್ರಯಾಣವು ಮಾರ್ಚ್ 12 2021 ರಂದು ಪ್ರಾರಂಭವಾಯಿತು, ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸಿತು ಮತ್ತು ಪ್ಯಾನ್-ಇಂಡಿಯಾ 5G ರೋಲ್‌ಔಟ್ ಅನ್ನು ಘೋಷಿಸುವ ದಿನವಾದ ಆಗಸ್ಟ್ 15 ರಂದು ಕೊನೆಗೊಳ್ಳುತ್ತದೆ

English summary
Reliance Jio may launch its 5G services on August 15. As India is celebrating the 'Azadi ka Amrit Mahotsav' to mark the 75th Independence Day on 15th August
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X