ತೀವ್ರ ನಷ್ಟದಲ್ಲಿ ರಿಲಯನ್ಸ್: ಕೆಲವೇ ದಿನಗಳಲ್ಲಿ ಸೇವೆ ಸ್ಥಗಿತ

Posted By:
Subscribe to Oneindia Kannada

ನವದೆಹಲಿ, ನ 5: ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ 2G ಕರೆಸೇವೆಯನ್ನು, ಕರ್ನಾಟಕವೂ ಸೇರಿದಂತೆ ಇದೇ ಡಿಸೆಂಬರ್ ಒಂದರಿಂದ ಅನ್ವಯವಾಗುವಂತೆ ಸ್ಥಗಿತಗೊಳಿಸಲಿದೆ.

ಟ್ರಾಯ್(ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಈ ಸಂಬಂಧ ಎಲ್ಲಾ ಮೊಬೈಲ್ ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗಿಗೆ ಅರ್ಜಿ ಹಾಕಿದರೆ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿದೆ.

ಸಹೋದರನ ಮೊಬೈಲ್ ಸಾಮ್ರಾಜ್ಯವನ್ನು ಅಲುಗಾಡಿಸಿದ ಮುಕೇಶ್

Reliance communications to shut voice calls from December 1st

ರಿಲಯನ್ಸ್ ತನ್ನ 2G ಸೇವೆಯನ್ನು ಮಾತ್ರ ಸ್ಥಗಿತಗೊಳಿಸಲಿದ್ದು, 4G ಸೇವೆ ಅಬಾಧಿತವಾಗಲಿದೆ ಎಂದು ರಿಲಯನ್ಸ್ ತನ್ನ ಪ್ರಕಟಣೆಯನ್ನು ತಿಳಿಸಿದೆ. 46 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿರುವ ರಿಲಯನ್ಸ್ ಕಮ್ಯೂನಿಕೇಶನ್, ಇತ್ತೀಚೆಗೆ ಏರ್‍ಸೆಲ್ ಸಂಸ್ಥೆಯನ್ನು ಖರೀದಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರಲಿಲ್ಲ.

ಸದ್ಯ, ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ (ಪಶ್ಚಿಮ ಮತ್ತು ಪೂರ್ವ), ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಎಂಟು ಟೆಲಿಕಾಂ ಸರ್ಕಲ್ ಗಳಲ್ಲಿ 2G ಮತ್ತು 4G ಎರಡೂ ಸೇವೆಯನ್ನು ನೀಡುತ್ತಿರುವುದಾಗಿ ಟ್ರಾಯ್ ಗೆ ಲಿಖಿತರೂಪದಲ್ಲಿ ತಿಳಿಸಿದ್ದು, ಈ ಎಲ್ಲಾ ಸರ್ಕಲ್ ಗಳಲ್ಲಿ 2G ಸೇವೆ, ಡಿಸೆಂಬರ್ ಒಂದರಿಂದ ಸ್ಥಗಿತಗೊಳ್ಳಲಿದೆ.

ದೆಹಲಿ, ರಾಜಸ್ಥಾನ, ಉತ್ತರಪ್ರದೇಶ (ಪಶ್ಚಿಮ), ತಮಿಳುನಾಡು, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಕೊಲ್ಕತ್ತಾ ನಗರಗಳಲ್ಲಿ ಸಿಡಿಎಂಎ ಟೆಕ್ನಾಲಜಿ ಮೂಲಕ 4G ಸೇವೆಯನ್ನು ಮೇಲ್ದದರ್ಜೇಗೇರಿಸಲು ಕ್ರಮ ತೆಗೆದುಕೊಳ್ಳುವುದಾಗಿ ರಿಲಯನ್ಸ್, ಟ್ರಾಯ್ ಗೆ ತಿಳಿಸಿದೆ.

ರಿಲಯನ್ಸ್ ಗ್ರಾಹಕರು ಡಿಸೆಂಬರ್ 31ರ ತನಕ ತಮ್ಮ ನಂಬರುಗಳನ್ನು ಪೊರ್ಟಬಿಲಿಟಿ ಮಾಡಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Communications to shut voice calls from Dec 1, subscribers can port till Dec 31. RCom, reeling under debt of around Rs 46,000 crore, decided to shut down its 2G voice call services after it failed to close its wireless business merger deal with Aircel.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ