ಎಲ್‌ಪಿಜಿ, ಫಾಸ್ಟ್‌ಟ್ಯಾಗ್ ಸೇರಿದಂತೆ ಫೆಬ್ರವರಿ 1 ಭಾನುವಾರದಿಂದ ಹಲವು ಬದಲಾವಣೆ ಜಾರಿ... Regulatory Updates
ಫೆಬ್ರವರಿ 1 ಭಾನುವಾರ ಬಂದಿದ್ದು, ಇಂದೇ ಕೇಂದ್ರ ಬಜೆಟ್ ಕೂಡ ಮಂಡನೆ ಆಗುತ್ತಿದೆ. ಹೀಗೆ ಜಗತ್ತಿನ ಟಾಪ್-5 ಆರ್ಥಿಕತೆಗಳ ಪೈಕಿ ಒಂದಾದ ಭಾರತದಲ್ಲಿ ಬಜೆಟ್ ಮಂಡನೆ ಆಗುತ್ತಿರುವುದು ಇಡೀ ಜಗತ್ತಿನ ಗಮನ ಸೆಳೆದಿದೆ. ಮತ್ತೊಂದಡೆ ಹಲವು ನಿಮಯಗಳು ಫೆಬ್ರವರಿ 1 ಭಾನುವಾರದಿಂದ ಅನ್ವಯ ಆಗುವಂತೆ ಬದಲಾಗುತ್ತಿವೆ. ಈ ಬದಲಾವಣೆಗಳು ಹಣಕಾಸು, ಅಗತ್ಯ ವಸ್ತುಗಳ ಕುರಿತು ಆಗಿದೆ. ಹಾಗಾದರೆ ಇಂದಿನಿಂದ ಬದಲಾಗುತ್ತಿರುವ ಆ ಮಹತ್ವದ ಅಂಶಗಳು ಯಾವುವು? ಬನ್ನಿ ಆ ಬಗ್ಗೆ ತಿಳಿಯೋಣ.
ಫೆಬ್ರವರಿ 1 ಭಾನುವಾರದಿಂದ ಅನ್ವಯ ಆಗುವಂತೆ ಬದಲಾಗುತ್ತಿರುವ ಹಲವು ನಿಯಮಗಳು ನಿಮ್ಮ ಹಣಕಾಸಿನ ನಿರ್ಧಾರ ಹಾಗೂ ದಿನಚರಿಯ ಮೇಲೆ ಪ್ರಭಾವ ಬೀರಲಿವೆ. ಪ್ರಮುಖವಾಗಿ ವಾಹನ ಸವಾರರು ಹಾಗೂ ಗೃಹಿಣಿಯರಿಗೆ ಈ ನಿಯಮ ಬದಲಾವಣೆ ತಿಳಿಯಬೇಕಿದೆ, ಏಕೆಂದರೆ ಕುಟುಂಬ ನಡೆಸಲು ಅಗತ್ಯ ಇರುವ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಆಗಿದೆ. ಪ್ರತಿ ತಿಂಗಳ ಮೊದಲ ದಿನವೇ ಈ ರೀತಿ ನಿಯಮ ಬದಲಾವಣೆ ಆಗುತ್ತದೆ, ಆದರೆ ಈ ಬಾರಿ ಬಜೆಟ್ ತಿಂಗಳಲ್ಲಿ ವ್ಯತ್ಯಾಸ ಆಗುತ್ತಿರುವ ನಿಯಮಗಳು ಗಮನ ಸೆಳೆದಿವೆ. ಫಾಸ್ಟ್‌ಟ್ಯಾಗ್ ಟು ಎಲ್‌ಪಿಜಿ ತನಕ ಇಂದಿನಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ.

ಫಾಸ್ಟ್‌ಟ್ಯಾಗ್ ನಿಯಮ ಭರ್ಜರಿ ಬದಲಾವಣೆ
ಫೆಬ್ರವರಿ 1 ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳ ಅಡಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಸರಳವೂ ಸೇರಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂದಿನಿಂದ ಜಾರಿಗೆ ಬರುವ ರೀತಿ, ಎಲ್ಲಾ ಹೊಸ ಫಾಸ್ಟ್‌ಟ್ಯಾಗ್ ವಿತರಣೆಗಳಿಗೆ ಅಂದರೆ ಕಾರು, ಜೀಪ್, ವ್ಯಾನ್ ವರ್ಗದ ಫಾಸ್ಟ್‌ಟ್ಯಾಗ್‌ಗಳಿಗೆ ನೋ ಯುವರ್ ವೆಹಿಕಲ್ (KYV) ಪ್ರಕ್ರಿಯೆ ನಿಲ್ಲಿಸಲು ನಿರ್ಧಾರ ಮಾಡಿದೆ. ಸೂಕ್ತವಾದ ವಾಹನ ದಾಖಲೆ ಹೊಂದಿದ್ದರೂ ಸಮಸ್ಯೆ ಎದುರಿಸುತ್ತಿದ್ದ ವಾಹನಗಳ ಮಾಲೀಕರಿಗೆ ಈ ನಿರ್ಧಾರದಿಂದ ಇದೀಗ ದೊಡ್ಡ ರಿಲೀಫ್ ಸಿಗಲಿದೆ.
ದುಬಾರಿ ಆಗಲಿದೆ ಸಿಗರೇಟ್ ಬೆಲೆ
ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆ ಜೊತೆಗೆ ಪ್ರಮುಖವಾಗಿ ಫೆಬ್ರವರಿ 1 ರಿಂದ ಫಿಲ್ಟರ್ಸ್ & ಉದ್ದನೆಯ ಸಿಗರೇಟ್ ಬೆಲೆ ಏರಿಕೆ ಕಾಣುತ್ತಿದೆ. ಸಿಗರೇಟ್, ಜರ್ದಾ & ಗುಟ್ಕಾ ಸೇರಿದಂತೆ ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳಿಗೆ ಹೊಸ ಸುಂಕ ದರ ಜಾರಿಗೆ ಬರಲಿದೆ. ಈ ಕುರಿತು ಜನವರಿ ತಿಂಗಳಲ್ಲೇ ಮಾಹಿತಿ ನೀಡಲಾಗಿತ್ತು. ಸೆಸ್ ದರ ಏರಿಕೆ ಹಿನ್ನೆಲೆಯಲ್ಲಿ ಇಂದಿನಿಂದ ಇವುಗಳ ಬೆಲೆ ಏರಿಕೆ ಆಗಲಿದ್ದು, ಪ್ರಮುಖವಾಗಿ ಸಿಗರೇಟ್ ಬೆಲೆ ಕೂಡ ದುಬಾರಿ ಆಗುತ್ತಿದೆ.
ಎಲ್‌ಪಿಜಿ ಬೆಲೆ ಏನಾಯ್ತು?
ಇಂದಿನಿಂದ ಪ್ರಮುಖವಾಗಿ ಎಲ್‌ಪಿಜಿ ಬೆಲೆಯಲ್ಲಿ ಕೂಡ ವ್ಯತ್ಯಾಸ ಆಗಲಿದೆ, 19 ಕೆಜಿ ವಾಣಿಜ್ಯ ಸಂಬಂಧಿ ಎಂದರೆ ಕಮರ್ಷಿಯಲ್ LPG ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ ಕಂಡಿದೆ. ಇದು ಜೀವನ ನಡೆಸಲು ಹೋಟೆಲ್ ಮತ್ತಿತರ ಬ್ಯುಸಿನೆಸ್ ತೆಗೆದಿರುವ ಕುಟುಂಬಗಳಿಗೆ ಹೊರೆಯಾಗಲಿದೆ. ಆದರೆ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications