ಸಿದ್ದು ಬಜೆಟ್ ನಲ್ಲಿ ರಿಯಲ್ ಎಸ್ಟೇಟ್ ಗೆ ಸಿಕ್ಕಿದ್ದೇನು?

ಬೆಂಗಳೂರು, ಮಾ.14: ನಮ್ಮ ಸಿಎಂ ಮಂಡಿಸಿದ ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ರಿಯಲ್ ಎಸ್ಟೇಟ್ ಗೆ ಮಹತ್ವ ನೀಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಈ ಬಾರಿಯೂ ಹೆಚ್ಚಿನ ಮಹತ್ವ ನೀಡಿಲ್ಲ.

ಎಂ ಸ್ಯಾಂಡ್ ನ ಮೇಲಿನ ವ್ಯಾಟ್ ನಲ್ಲಿ ಶೇಕಡ 5 ಕಡಿತಗೊಳಿಸಿರುವುದು ಗಮನಾರ್ಹ. ಇನ್ನು ಆನ್ ಲೈನ್ ರಿಜಿಸ್ಟ್ರೇಷನ್ ಗೆ ಪ್ರಾಮುಖ್ಯತೆ ನೀಡಿರುವುದರಿಂದ ಉದ್ಯಮದಲ್ಲಿ ಪಾರದರ್ಶಕತೆ ಉಂಟಾಗುತ್ತದೆ. ಈ ತರದ ಆನ್ ಲೈನ್ ಸಂಬಂಧಿ ಕಾರ್ಯಕ್ರಮಗಳಲ್ಲಿ ನಮ್ಮ ರಾಜ್ಯ ಮುಂದಿದೆ.

Reaction on state budget from Suresh Hari

ಆದ್ದರಿಂದ ಈ ಪರಿಕಲ್ಪನೆಗೆ ಚೆನ್ನಾಗಿ ಪ್ರಚಾರ ನೀಡಬೇಕು. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಎಲ್ಲಾ ವಸ್ತುಗಳ ದರ ಏರಿಕೆಯಾಗುವ ಸಾಧ್ಯತೆ ಇದೆ. ಕೆಲವು ಮುಖ್ಯ ಕಡೆಗಳಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಹಾಕಿರುವ ಯೋಜನೆ ಉತ್ತಮವಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಹೊಂದಬಹುದು.

ಪಿಪಿಪಿ ಮಾಡೆಲ್ ನ ಮೂಲಕ ಸ್ಕೈವಾಕ್ ನಿರ್ಮಾಣದ ಬಗ್ಗೆ ಅಧ್ಯಯನ ಅಗತ್ಯ. ಇದು ಯಾವ ರೀತಿ ಜನರಿಗೆ ಸಹಾಯ ಮಾಡುತ್ತದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಪಿಪಿಪಿ ಮಾಡೆಲ್ ನಲ್ಲಿ ನಿರ್ಮಾಣ ಮಾಡುವ ಕಡೆ ಟೋಲ್ ಅಥವಾ ಉಳಿದ ದರಗಳು ಅನ್ವಯವಾಗುವ ಅವಕಾಶಗಳು ಇರುತ್ತವೆ. 25 ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಉತ್ತಮವಾಗಿದೆ. (ಒನ್ಇಂಡಿಯಾ ಬಿಜಿನೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+