ಕರ್ನಾಟಕದ "ಆ" ಒಂದು ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದುಪಡಿಸಿದ ಆರ್‌ಬಿಐ: ಯಾಕೆ ಈ ನಿಲುವು?, ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್, 20: ಪ್ರಮುಖವಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಈ ಸುದ್ದಿಯನ್ನು ಗಮನಿಸಲೇಬೇಕಿದೆ. ಹಲವು ವರ್ಷಗಳಿಂದ ಕೆಲವು ಬ್ಯಾಂಕ್‌ಗಳು ಆರ್‌ಬಿಐನ ಕಠಿಣ ಕ್ರಮಗಳನ್ನು ಎದುರಿಸುತ್ತಲೇ ಬಂದಿದ್ದು, ಇದೀಗ ಕೆಲವು ಬ್ಯಾಂಕ್‌ಗಳ ಪರವಾನಗಿ ರದ್ದುಗೊಳಿಸಿ ಆದೇಶಹೊರಡಿದಿದೆ. ಅಲ್ಲದೆ ಕೇಂದ್ರ ಬ್ಯಾಂಕ್ ಕೆಲವು ದೊಡ್ಡ ಬ್ಯಾಂಕ್‌ಗಳ ಮೇಲೆ ಭಾರಿ ಮೊತ್ತದ ದಂಡವನ್ನು ಹಾಕಿದೆ. ಹಾಗಾದರೆ ಯಾವೆಲ್ಲ ಬ್ಯಾಂಕ್‌ಗಳು ಸಂಕಷ್ಟಕ್ಕೊಳಗಾಗಿವೆ ಎಂದು ಇಲ್ಲಿ ತಿಳಿಯಿರಿ.
ದಂಡ ವಿಧಿಸಿದ್ದು ಎಷ್ಟು ಬಾರಿ?
ಮಾರ್ಚ್ 31ರಂದು ಕೊನೆಗೊಳ್ಳುವ 2022-23ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನ ಆರ್‌ಬಿಐ ರದ್ದುಪಡಿಸಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳಿಗೆ ಆರ್‌ಬಿಐ 114 ಬಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವೇಗವಾಗಿ ವಿಸ್ತರಿಸಿದೆ. ಆದರೆ ಈ ಬ್ಯಾಂಕ್‌ಗಳಲ್ಲಿ ಇದೀಗ ಅಕ್ರಮಗಳು ಬೆಳಕಿಗೆ ಬಂದಿದ್ದು, ಇದರ ಪರಿಣಾಮ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದೀಗ ಸಂಕಷ್ಟಕ್ಕೆ ಒಳಗಾಗಿರುವ ಈ ಬ್ಯಾಂಕ್‌ಗಳ ದ್ವಂದ್ವ ನಿಲುವು, ಮತ್ತು ದುರ್ಬಲ ಹಣಕಾಸು ವ್ಯವಹಾರವನ್ನು ನಡೆಸುವುದು ಬೆಳಕಿದೆ ಬಂದಿದೆ. ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ ಹೊಂದಿರುವ ಮೂಲಕ ಸಹಕಾರಿ ಬ್ಯಾಂಕ್‌ಗಳು ಕೂಡ ಸಮಸ್ಯೆಗೆ ಗುರಿಯಾಗಿವೆ. ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆ ಹ ಕಾರಿ ಬ್ಯಾಂಕ್‌ಗಳ ವಿರುದ್ದ ಆರ್‌ಬಿಐ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಹೀಗೆ ಅಕ್ರಮದ ಜಾಲಕ್ಕೆ ಸಿಲುಕಿದ 8 ಬ್ಯಾಂಕ್‌ಗಳ ಲೈಸನ್ಸ್ ಅನ್ನು ರದ್ದುಗೊಳಿಸಲಾಗಿದೆ.
ರದ್ದಾದ ಬ್ಯಾಂಕ್‌ಗಳ ವಿವರ
1) ಮುಧೋಳ ಸಹಕಾರಿ ಬ್ಯಾಂಕ್
2) ಮಿಲತ್ ಕೋ-ಆಪರೇಟಿವ್ ಬ್ಯಾಂಕ್
3) ಶ್ರೀ ಆನಂದ್ ಕೋ-ಆಪರೇಟಿವ್ ಬ್ಯಾಂಕ್
4) ರೂಪಾಯಿ ಸಹಕಾರಿ ಬ್ಯಾಂಕ್
5) ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
6) ಲಕ್ಷ್ಮಿ ಸಹಕಾರಿ ಬ್ಯಾಂಕ್
7) ಸೇವಾ ವಿಕಾಸ ಸಹಕಾರಿ ಬ್ಯಾಂಕ್
8) ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್
ಬಂಡವಾಳದ ಕೊರತೆ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ನಿಯಮಗಳನ್ನು ಪಾಲಿಸದ ಕಾರಣ ಈ 8 ಬ್ಯಾಂಕ್‌ಗಳ ಲೈಸನ್ಸ್ ಅನ್ನು ಆರ್‌ಬಿಐ ರದ್ದು ಮಾಡಿದೆ. ಭವಿಷ್ಯದಲ್ಲಿ ಆದಾಯದಲ್ಲಿ ಕೊರತೆ ಆಗುವ ಸಾಧ್ಯತೆಗಳಿದ್ದ ಕಾರಣಗಳಿಂದ ಈ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್‌ಬಿಐ ಹದ್ದಿನ ಕಣ್ಣಿಟ್ಟಿದೆ. ಕೇಂದ್ರೀಯ ಬ್ಯಾಂಕ್ 2021-22ರಲ್ಲಿ 12 ಸಹಕಾರಿ ಬ್ಯಾಂಕ್‌ಗಳು, 2020-21ರಲ್ಲಿ 3 ಸಹಕಾರಿ ಬ್ಯಾಂಕ್‌ಗಳು ಮತ್ತು 2019-20ರಲ್ಲಿ ಎರಡು ಸಹಕಾರಿ ಬ್ಯಾಂಕ್‌ಗಳ ಲೈಸನ್ಸ್ ಅನ್ನು ಕೂಡ ರದ್ದುಪಡಿಸಿತ್ತು.

ಸಾಮಾನ್ಯವಾಗಿ ಆರ್‌ಬಿಐನಿಂದ ಕೆಲವೊಂದು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದನ್ನು ಎಲ್ಲಾ ಬ್ಯಾಂಕ್‌ಗಳು ಪಾಲಿಸಬೇಕಾಗುತ್ತದೆ. ಒಂದು ವೇಳೆ ಈ ನಿಯಮವನ್ನು ಮೀರಿದರೆ ಪರವಾನಗಿ ರದ್ದು ಮಾಡುವ ಹಾಗೂ ಕ್ರಮ ಕೈಗೊಳ್ಳುವ ಅಧಿಕಾರವೂ ಕೂಡ ಆರ್‌ಬಿಐಗೆ ಇರುತ್ತದೆ. ಇದೇ ರೀತಿ ಈಗಾಗಲೇ ಆರ್ಥಿಕ ಹೊರೆ, ಮುಂದೆ ಆಗುವ ನಷ್ಟಗಳನ್ನು ತಡೆಯಲು 8 ಬ್ಯಾಂಕ್‌ಗಳ ವಿರುದ್ಧ ಪರವಾನಗಿ ರದ್ದು ಮಾಡುವ ಮೂಲಕ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.












Click it and Unblock the Notifications