ಮನರಂಜನಾ ಉದ್ಯಮಕ್ಕೂ ಕಾಲಿರಿಸಿದ ರತನ್ ಟಾಟಾ
ನವದೆಹಲಿ, ಮಾರ್ಚ್ 16: ಮಹತ್ವದ ಬೆಳವಣಿಗೆಯೊಂದರಲ್ಲಿ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಪ್ರೀತೀಶ್ ನಂದಿ ಕಮ್ಯುನಿಕೇಷನ್‌ನ ಷೇರುಗಳನ್ನು ಖರೀದಿಸಿದ್ದಾರೆ. ಈ ಮೂಲಕ ರತನ್ ಟಾಟಾ ಅವರು ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಪ್ರವೇಶಿಸಿದ್ದಾರೆ.
'ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ಮತ್ತು ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಖರೀದಿ ಮೂಲಕ ಕಳೆದ ವಾರ ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್‌ನಲ್ಲಿ ಷೇರನ್ನು ಪಡೆದುಕೊಂಡಿದ್ದಾರೆ' ಎಂದು ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್ ಹೇಳಿಕೆ ನೀಡಿದೆ.
ಹಿರಿಯ ಉದ್ಯಮಿ ರತನ್ ಟಾಟಾ ಅವರು ಸ್ಟಾರ್ಟ್‌ಅಪ್‌ಗಳು ಮತ್ತು ತಾಂತ್ರಿಕ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಂಪೆನಿ ಮಾಹಿತಿ ನೀಡಿದೆ. ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್‌ನ ಪಿಎನ್‌ಸಿ ಷೇರುಗಳು ಬಿಎಸ್‌ಇಯಲ್ಲಿ ಹತ್ತು ಪಟ್ಟು ಹೆಚ್ಚು 25.85ರಂತೆ ವಹಿವಾಟು ನಡೆಸುತ್ತಿದೆ.

ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್ ಸಿನಿಮಾ ಹಾಗೂ ಮನರಂಜನಾ ಕಂಪೆನಿಯಾಗಿದ್ದು, ಬಿಎಸ್‌ಇಯಲ್ಲಿ 'ಬಿ' ಗ್ರೂಪ್ ಕಂಪೆನಿಯಾಗಿ ಪಟ್ಟಿಯಲ್ಲಿದೆ. ಖ್ಯಾತ ಅಂಕಣಕಾರ ಮತ್ತು ಪತ್ರಕರ್ತ ಪ್ರೀತೀಶ್ ನಂದಿ ಅವರು 2000ರಲ್ಲಿ ಈ ಕಂಪೆನಿ ಆರಂಭಿಸಿದ್ದರು. 2020ರ ಡಿಸೆಂಬರ್‌ನಲ್ಲಿ ಕಂಪೆನಿಯ ಷೇರುಗಳು ಕುಸಿತ ಕಂಡಿದ್ದವು. ಆದರೆ ರತನ್ ಟಾಟಾ ಅವರು ಷೇರುಗಳನ್ನು ಖರೀದಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಕಂಪೆನಿ ಚೇತರಿಕೆ ಕಂಡಿದೆ.












Click it and Unblock the Notifications