ಬೆಂಗಳೂರಿನಿಂದ ಮುಂಬೈಗೆ ನೇರ ವಿಮಾನ ಘೋಷಿಸಿದ ಆಕಾಶ ಏರ್
ಬೆಂಗಳೂರು, ಜುಲೈ 26: ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಒಡೆತನದ ಆಕಾಶ ಏರ್ ಕೊಚ್ಚಿಯಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಬಗ್ಗೆ ಘೋಷಿಸಿದ್ದು, ನೆನಪಿರಬಹುದು. ಆಗಸ್ಟ್ 13, 2022 ರಿಂದ ಬೆಂಗಳೂರು-ಕೊಚ್ಚಿ-ಬೆಂಗಳೂರು ವಲಯದಲ್ಲಿ 28 ಸೇವೆಗಳನ್ನು ನಿರ್ವಹಿಸುವುದಾಗಿ ಸಂಸ್ಥೆ ಘೋಷಿಸಿದೆ.
ಪ್ರತಿದಿನ ಎರಡು ವಿಮಾನಗಳು ಸಂಚರಿಸಲಿವೆ. ಈಗ ಬೆಂಗಳೂರಿನಿಂದ ಮುಂಬೈಗೆ ನೇರ ವಿಮಾನ ಘೋಷಿಸಿದೆ. ಆದರೆ, ಆಗಸ್ಟ್ 7 ರಂದು ಮೊದಲ ವಿಮಾನ ಹಾರಾಟ ಕಾಣಲಿದ್ದು, ಮುಂಬೈ -ಅಹಮದಾಬಾದ್ ಮಾರ್ಗದಲ್ಲಿ ಸಂಚರಿಸಲಿದೆ. ಆಗಸ್ಟ್ 19ರಂದು ಬೆಂಗಳೂರಿನಿಂದ ಮುಂಬೈಗೆ ನೇರ ವಿಮಾನ ಸಂಚರಿಸಲಿದೆ ಎಂದು ಮಂಗಳವಾರ ಸಂಸ್ಥೆ ಪ್ರಕಟಿಸಿದೆ.
"ಇದರೊಂದಿಗೆ, ಅಹಮದಾಬಾದ್, ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ತನ್ನ ನೆಟ್‌ವರ್ಕ್ ಅಭಿವೃದ್ಧಿಯ ಉದ್ಘಾಟನಾ ಹಂತವನ್ನು ಆಕಾಶ ಏರ್ ಪೂರ್ಣಗೊಳಿಸಿದೆ, ಅದರ ಕಾರ್ಯಾಚರಣೆಯ ಮೊದಲ ಕೆಲವು ವಾರಗಳಲ್ಲಿ ಒಟ್ಟು 82 ಸಾಪ್ತಾಹಿಕ ವಿಮಾನಗಳು ಲಭ್ಯವಿರಲಿವೆ'' ಎಂದು ಏರ್‌ಲೈನ್ಸ್ ತಿಳಿಸಿದೆ.

ಮುಂಬೈ-ಅಹಮದಾಬಾದ್ ವಿಮಾನಗಳು ವಾರಕ್ಕೆ 26 ಬಾರಿ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು-ಕೊಚ್ಚಿ ಮಾರ್ಗ ಮತ್ತು ಬೆಂಗಳೂರು-ಮುಂಬೈ ಮಾರ್ಗದ ಸೇವೆಗಳು ವಾರಕ್ಕೆ 28 ಬಾರಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.
ಆಕಾಶ ಏರ್‌ಗೆ ಪರವಾನಗಿ ಪಡೆಯುತ್ತಿರುವ ಭಾರತದ 7ನೇ ವಿಮಾನಯಾನ ಸಂಸ್ಥೆಯಾಗಿದೆ. ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ, ಸ್ಪೈಸ್‌ಜೆಟ್, ಗೋ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶೀಯ ಸಂಸ್ಥೆಗಳಾಗಿವೆ. ಈಗಾಗಲೇ 154 ಪೈಲಟ್‌ಗಳು, 115 ಕ್ಯಾಬಿನ್ ಅಟೆಂಡೆಂಟ್‌ಗಳು ಮತ್ತು 14 ಇಂಜಿನಿಯರ್ ಆಕಾಶ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಕಾಶ ಏರ್ ಕಳೆದ ವರ್ಷ ನವೆಂಬರ್ 26 ರಂದು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದವು ಮಾರ್ಚ್ 2023 ರೊಳಗೆ 18 ವಿಮಾನಗಳ ಆರಂಭಿಕ ವಿತರಣೆಯನ್ನು ಒಳಗೊಂಡಿರುತ್ತದೆ, ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಉಳಿದ 54 ವಿಮಾನಗಳ ವಿತರಣೆಯನ್ನು ಒಳಗೊಂಡಿದೆ.
ವಿಶೇಷ ಡ್ರೆಸ್ ಕೋಡ್: ಇನ್ನು ಸಿಬ್ಬಂದಿಗಳ ಡ್ರೆಸ್ ಕೋಡ್, ಸಮವಸ್ತ್ರ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದ ವಿಮಾನಯಾನ ಸಂಸ್ಥೆ ಇತ್ತೀಚೆಗೆ, ಫೋಟೋಗಳನ್ನು ಹಂಚಿಕೊಂಡಿತ್ತು. ತನ್ನ ಏರ್‌ಲೈನ್‌ನಲ್ಲಿರುವ ವಿಮಾನ ಸಿಬ್ಬಂದಿಗಾಗಿ ಕಸ್ಟಮ್ ಪ್ಯಾಂಟ್, ಜಾಕೆಟ್‌ಗಳು ಮತ್ತು ಸ್ನೀಕರ್‌ಗಳನ್ನು ಪರಿಚಯಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ ಎಂದು ಆಕಾಶ ಏರ್ ಹೇಳಿಕೊಂಡಿದೆ.
"ನಮ್ಮ ತಂಡವು ಬೆಚ್ಚಗಿನ, ಸ್ನೇಹಪರ ಮತ್ತು ಸಮರ್ಥ ಹಾರಾಟವನ್ನು ಖಚಿತಪಡಿಸಿಕೊಳ್ಳಲು ತಮ್ಮ ಶಕ್ತಿಯನ್ನು ನಿರ್ದೇಶಿಸುವ ಮೂಲಕ ಹೆಮ್ಮೆ ಮತ್ತು ಆರಾಮದಾಯಕ ಎರಡನ್ನೂ ಅನುಭವಿಸುತ್ತದೆ" ಎಂದು ಅಕಾಸಾ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಮಾರ್ಕೆಟಿಂಗ್ ಮತ್ತು ಅನುಭವ ಅಧಿಕಾರಿ ಬೆಲ್ಸನ್ ಕುಟಿನ್ಹೋ ಹೇಳಿದರು.

ಆಕಾಶ ಏರ್ ಕಂಪನಿಯು ಒಟ್ಟು 72 ವಿಮಾನಗಳಿಗೆ ಆರ್ಡರ್ ನೀಡಿದ್ದು, ಮಾರ್ಚ್ 2023ರ ವೇಳೆಗೆ 18 ವಿಮಾನಗಳನ್ನು ಪಡೆಯುವ ಗುರಿಯನ್ನು ಹೊಂದಿರುವುದಾಗಿ ಆಕಾಶ ಏರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ಇಂಧನ ದಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ 737 ಮ್ಯಾಕ್ಸ್ ವಿಮಾನ ಪ್ರಯಾಣದಿಂದ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡಲು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಲಾಭದಾಯಕ ಸೇವೆ ಸಲ್ಲಿಸಲು ಆಕಾಶ ಏರ್‌ಗೆ ಅವಕಾಶ ಸಿಗುತ್ತದೆ ಎನ್ನಲಾಗಿದೆ.
ವಿಮಾನಯಾನ ಸಂಸ್ಥೆಯು ತನ್ನ ಮೊದಲ 737 ಮ್ಯಾಕ್ಸ್ ವಿಮಾನವನ್ನು ಕಳೆದ ತಿಂಗಳು ಯುಎಸ್ಎನ ಸಿಯಾಟಲ್‌ನಲ್ಲಿರುವ ಬೋಯಿಂಗ್‌ನಿಂದ ಪಡೆದುಕೊಂಡಿದೆ. ಭಾರತೀಯ ವಿಮಾನಯಾನ ನಿಯಂತ್ರಕ ಡಿಜಿಸಿಎ ಮ್ಯಾಕ್ಸ್ ವಿಮಾನಗಳಿಗೆ ಹಸಿರು ನಿಶಾನೆ ತೋರಿದ ಮೂರು ತಿಂಗಳ ನಂತರ, ಆಕಾಶ ಏರ್ ಕಳೆದ ವರ್ಷ ನವೆಂಬರ್ 26 ರಂದು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದವು ಮಾರ್ಚ್ 2023 ರೊಳಗೆ 18 ವಿಮಾನಗಳ ಆರಂಭಿಕ ವಿತರಣೆಯನ್ನು ಒಳಗೊಂಡಿರುತ್ತದೆ, ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಉಳಿದ 54 ವಿಮಾನಗಳ ವಿತರಣೆಯನ್ನು ಒಳಗೊಂಡಿದೆ. (ಪಿಟಿಐ)












Click it and Unblock the Notifications