ಡಿಸೆಂಬರ್ ಅಂತ್ಯಕ್ಕೆ ಚಿನ್ನದ ಬೆಲೆ ಏರಿಕೆ, ಹೂಡಿಕೆಗೆ ಇದುವೇ ಸಕಾಲ

ಬೆಂಗಳೂರು, ಅಕ್ಟೋಬರ್ 29: ಚಿನ್ನದ ಬೆಲೆ ಏರಿಳಿತವಿದ್ದರೂ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲ ಎಂದು ಮಾರುಕಟ್ಟೆ ತಜ್ಞರು ಮತ್ತೊಮ್ಮೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ವರ್ಷಾಂತ್ಯಕ್ಕೆ 10 ಗ್ರಾಂಗೆ 42,000 ರು ಬೆಲೆಗೇರಲಿದೆ ಎಂದು ವಿಶ್ಲೇಷಿಸಿದ್ದರು.

ಚಿನ್ನದ ಬೆಲೆ 10 ಗ್ರಾಂಗೆ 40,000 ರು ದಾಟಿದ್ದ ಸಮಯದಲ್ಲಿ ನೀಡಿದ ಅಭಿಪ್ರಾಯ ಮತ್ತೊಮ್ಮೆ ನಿಜವಾಗುವಂಥ ಪರಿಸ್ಥಿತಿ ಡಿಸೆಂಬರ್ ಅಂತ್ಯಕ್ಕೆ ಬರಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ದೇಶದಲ್ಲಿ ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿದ್ದರು.

"ದಿಢೀರ್ ಏರಿಳಿತದ ನಡುವೆಯೂ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 42,000 ರುಗೇರುವ ಮುನ್ಸೂಚನೆ ಸಿಕ್ಕಿದೆ" ಎಂದು ಏಂಜೆಲ್ ಬ್ರೋಕಿಂಗ್ ನ ಉಪಾಧ್ಯಕ್ಷ ಅನುಜ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

Price may surge to Rs 42,000 by Dec-end, say analysts

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮುಂದುವರೆಯಲಿದ್ದು, ಕಾಮೆಕ್ಸ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸಿಗೆ 1,650 ಡಾಲರ್ ಹಾಗೂ ಎಂಸಿಎಕ್ಸ್ ನಲ್ಲಿ ಫ್ಯೂಚರ್ ಚಿನ್ನ 42,000 ರು ತನಕ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞ ಜ್ಞಾನಶೇಖರ್ ತ್ಯಾಗರಾಜನ್ ಹೇಳಿದ್ದಾರೆ.

ಎಂಸಿಎಕ್ಸ್ ನಲ್ಲಿ 36,800 ರಿಂದ 39,400 ರು ನಂತೆ, ಜಾಗತಿಕವಾಗಿ 1,460 ಯುಎಸ್ ಡಾಲರ್ ನಿಂದ 1,530 ಡಾಲರ್ ನಂತೆ ಜಾಗತಿಕವಾಗಿ ಚಿನ್ನದ ಬೆಲೆ ಟ್ರೆಂಡ್ ಆಗಲಿದೆ ಎಂದು ಕೋಟಕ್ ಸೆಕ್ಯುರಿಟೀಸ್ ನ ರವೀಂದ್ರ ರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ಮಂಗಳವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ 548ರು ಇಳಿಕೆ ಕಂಡು 10 ಗ್ರಾಂಗೆ 38,857ರು ನಷ್ಟಿದ್ದರೆ, ಬೆಳ್ಳಿ ಬೆಲೆ 1,190 ರು ಇಳಿಕೆ ಕಂಡು 1 ಕೆಜಿಗೆ 47,090 ರು ನಷ್ಟಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಜಾಗತಿಕವಾಗಿ ಸಿಂಗಪುರದಲ್ಲಿ ಪ್ರತಿ ಔನ್ಸಿಗೆ 1,491.87 ಡಾಲರ್ ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+