ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

ಮಾರ್ಚ್ 31, 2017ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ಉದ್ದಿಮೆಯ ತೈಲ ಕಂಪೆನಿಗಳು ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬೆಲೆ ಲೀಟರ್ ಗೆ ರು. 3.77 ಡೀಸೆಲ್ ಬೆಲೆ ಲೀಟರ್ ಗೆ ರು. 2.91 ಇಳಿಕೆಯಾಗಿದೆ.

ಬೆಂಗಳೂರು, ಮಾರ್ಚ್ 31: ಸಾರ್ವಜನಿಕ ಉದ್ದಿಮೆಯ ತೈಲ ಕಂಪೆನಿಗಳು ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ದರದಲ್ಲಿ ಭಾರೀ ಇಳಿಕೆಯಾಗಿದೆ. ಮಾರ್ಚ್ 31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆ ಲೀಟರ್ ಗೆ ರು. 3.77 ಡೀಸೆಲ್ ಬೆಲೆ ಲೀಟರ್ ಗೆ ರು. 2.91 ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ಡಾಲರ್ ವಿರುದ್ಧದ ರುಪಾಯಿ ಮೌಲ್ಯವನ್ನು ಪರಿಗಣಿಸಿ ಪೆಟ್ರೋಲ್, ಡೀಸೆಲ್ ಮಾರಾಟ ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ತೈಲ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೈಲ ಕಂಪೆನಿಗಳು ಸಾಮಾನ್ಯವಾಗಿ ಹದಿನೈದು ದಿನಕ್ಕೊಮ್ಮೆ ಬೆಲೆಯನ್ನು ನಿರ್ಧರಿಸುತ್ತವೆ.[1.5 ಕೋಟಿ ಬೆಲೆಯ ಪೆಟ್ರೋಲ್ ಕಾರಿಗೆ ಡೀಸೆಲ್ ಹುಯ್ದರು ಮಾರಾಯ್ರೆ!]

Petrol

ಆದರೆ, ಬೆಲೆಯಲ್ಲಿ ಏರಿಳಿಕೆ ಮಾಡದೆ ತಿಂಗಳಿಗಿಂತ ಹೆಚ್ಚು ಸಮಯವಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗದ ಕಾರಣದಿಂದಲೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿಕೆ ಆಗದಿರುವುದಕ್ಕೆ ಕಾರಣ ಇರಬಹುದು ಎನ್ನಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ಭಾರತದ ರಿಫೈನರೀಸ್ ನಿಂದ ಖರೀದಿಸುವ ಕಚ್ಚಾ ತೈಲದಲ್ಲೂ ಇಳಿಕೆ ಆಗಿರುವುದರಿಂದ ಪೆಟ್ರೋಲ್-ಡೀಸೆಲ್ ಬೆಲೆ ಇಳಿಸಲಾಗಿದೆ. ಮಾರ್ಚ್ 1ರ ದರಕ್ಕೆ ಹೋಲಿಸಿದರೆ ಸದ್ಯಕ್ಕೆ ಬ್ಯಾರೆಲ್ ತೈಲದ ಬೆಲೆ ಐದು ಅಮೆರಿಕ ಡಾಲರ್ ನಷ್ಟು ಇಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+