ಕರ್ನಾಟಕದ ಕ್ರೆಡಾಯ್‍ ಯುವ ಘಟಕಕ್ಕೆ ಪ್ರತೀಕ್ ಮಂತ್ರಿ

ಬೆಂಗಳೂರು, ಜು.12: ಅಖಿಲ ಭಾರತ ರಿಯಲ್ ಎಸ್ಟೇಟ್ ಡೆವಲಪರ್ ಗಳ ಸಂಘಗಳ ಮಹಾಸಂಸ್ಥೆಯಾದ ಕ್ರೆಡಾಯ್ ಕರ್ನಾಟಕದ ಯುವ ಘಟಕಕ್ಕೆ ನೂತನ ಅಧ್ಯಕ್ಷರನ್ನು ಘೋಷಿಸಲಾಗಿದೆ. ಈ ಘಟಕ ಪ್ರಮುಖವಾಗಿ ತಂತ್ರಜ್ಞಾನ, ಸಂಶೋಧನೆ ಮತ್ತು ಸಿಎಸ್‍ಆರ್ ಚಟುವಟಿಕೆ ಮೇಲೆ ಗಮನಹರಿಸಲಿದೆ.

ಮಂತ್ರಿ ಡೆವಲಪರ್ ನಿರ್ದೇಶಕರಾಗಿರುವ ಪ್ರತೀಕ್ ಮಂತ್ರಿ ಕ್ರೆಡಾಯ್ ಕರ್ನಾಟಕದ ಯುವ ಘಟಕಕ್ಕೆ ನೇಮಕಗೊಂಡಿದ್ದಾರೆ. ಬೆಂಗಳೂರು ಚಾಪ್ಟರ್ ಯುವಘಟಕಕ್ಕೆ ಚಾರ್ಟರ್ಡ್ ಹೌಸಿಂಗ್ ಸಂಸ್ಥೆಯ ನಿರ್ದೇಶಕ ಬಿಮಲ್ ಹೆಗ್ಡೆ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Pratik Mantri is CREDAI Karnataka youth wing President
ನೇಮಕಗೊಂಡ ನಂತರ ಮಾತನಾಡಿದ ಪ್ರತೀಕ್ ಮಂತ್ರಿ, ಯುವ ಘಟಕ ಪ್ರಮುಖವಾಗಿ ತಂತ್ರಜ್ಞಾನ, ಸಂಶೋಧನೆ ಮತ್ತು ಸಿಎಸ್‍ಆರ್ ಚಟುವಟಿಕೆ ಮೇಲೆ ಗಮನಹರಿಸಲಿದೆ. ಈ ನಿಟ್ಟಿನಲ್ಲಿ ನಾವು ಎರಡನೇ ತಲೆಮಾರಿನ ಯುವ ಡೆವಲಪರ್ಸ್ ಕ್ರೆಡಾಯ್ ಯುವ ಘಟಕದ ಸದಸ್ಯರಾಗುವಂತೆ ಆಮಂತ್ರಿಸುತ್ತಿದ್ದೇವೆ. ಈ ಘಟಕ ಯುವಕರು ಇತರೆ ನುರಿತ ಡೆವಲಪರ್ಗಳ ಜತೆ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ತಿಳಿದುಕೊಳ್ಳುವ ವೇದಿಕೆಯನ್ನು ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.

ಪ್ರಸ್ತುತ ಯುವ ಘಟಕದಲ್ಲಿ 69 ಸದಸ್ಯರಿದ್ದಾರೆ. ಈ ಘಟಕಕ್ಕೆ ಸದಸ್ಯರಾಗಲು ಬಯಸುವವರು ತಮ್ಮ ಮನವಿಯನ್ನು [email protected] ಕಳುಹಿಸಿಕೊಡಬಹುದಾಗಿದೆ. ಸಮಾರಂಭವನ್ನು ಕ್ರೆಡಾಯ್ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಅಮರ್ ದೀಪ್ ಹೀರಾ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಕ್ರೆಡಾಯ್ ಕರ್ನಾಟಕದ ಯುವ ಘಟಕದ ಅಧ್ಯಕ್ಷ ಪ್ರತೀಕ್ ಮಂತ್ರಿ ಪಾಲ್ಗೊಂಡಿದ್ದರು.

ಬಿಮಲ್ ಹೆಗ್ಡೆ- ಕ್ರೆಡಾಯ್ ಬೆಂಗಳೂರು ಯುವ ಘಟಕದ ಅಧ್ಯಕ್ಷ, ದೀಪೇಶ್ ಭಾಗ್ತಾನಿ- ಕ್ರೆಡಾಯ್ ಯುವಘಟಕದ ರಾಷ್ಟ್ರೀಯ ಸಂಚಾಲಕ, ಸುರೇಶ್ ಹರಿ-ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ, ಸುಶೀಲ್ ಮಂತ್ರಿ- ರಾಷ್ಟ್ರೀಯ ಘಟಕದ ಉಪಾಧ್ಯಕ್ಷ, ರಮಣಿ ಶಾಸ್ತ್ರಿ- ಬೆಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ, ಸಿ.ಎನ್.ಗೋವಿಂದರಾಜು- ಬೆಂಗಳೂರು ಘಟಕದ ಅಧ್ಯಕ್ಷ.

ಇರ್ಫಾನ್ ರಜಾಕ್- ಬೆಂಗಳೂರು ಘಟಕದ ಮಾಜಿ ಅಧ್ಯಕ್ಷ, ಅಮರ್ ದೀಪ್ ಸಿಂಗ್- ರಾಷ್ಟ್ರೀಯ ಘಟಕದ ಅಧ್ಯಕ್ಷ, ಎ. ಬಾಲಕೃಷ್ಣ ಹೆಗ್ಡೆ- ಬೆಂಗಳೂರು ಘಟಕದ ಮಾಜಿ ಅಧ್ಯಕ್ಷ, ಆರ್. ನಾಗರಾಜ್- ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ, ಬಿ.ಎಂ. ಜಯಶಂಕರ್- ಕ್ರೆಡಾಯ್ ಬೆಂಗಳೂರಿನ ಮಾಜಿ ಅಧ್ಯಕ್ಷ, ಕೆ. ಶ್ರೀರಾಮ್- ಕ್ರೆಡಾಯ್ ಕರ್ನಾಟಕದ ಕಾರ್ಯದರ್ಶಿ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+