ಜೂನ್ 7: ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಕರೆನ್ಸಿ ಮೌಲ್ಯ ಏರಿಕೆ
ಬೆಂಗಳೂರು, ಜೂನ್ 7: ಕೊರೊನಾವೈರಸ್ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತ್ತು. ಆದರೆ, ಇತ್ತೀಚೆಗೆ ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಸೇರಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಸತತ ಕುಸಿತಗೊಂಡಿದ್ದು, ಹೂಡಿಕೆದಾರರು ಒಂದು ಹೆಜ್ಜೆ ಹಿಂದೆ ಇಡುವಂತೆ ಮಾಡಿತ್ತು. ಇದರ ಪರಿಣಾಮ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಸೇರಿದಂತೆ ಎಲ್ಲಾ ಡಿಜಿಟಲ್ ದುಡ್ಡು ಮೌಲ್ಯ ಕಳೆದುಕೊಂಡಿದ್ದವು.
ಆದರೆ, ಸೋಮವಾರ ಜೂನ್ 7ರಂದು ಬಿಟ್ ಕಾಯಿನ್, ಇಥೆರಿಯಂ, ಡೋಜ್ ಕಾಯಿನ್ ಸೇರಿದಂತೆ ಎಲ್ಲಾ ಕ್ರಿಪ್ಟೋಕರೆನ್ಸಿ ಸುಸ್ಥಿತಿಯಲ್ಲಿದ್ದು, ಒಟ್ಟಾರೆ ಮಾರುಕಟ್ಟೆ ಶೇ 1.54ರಷ್ಟು ಏರಿಕೆ ಕಂಡಿದೆ.
ಗೂಗಲ್ ಕೂಡಾ ಕ್ರಿಪ್ಟೋಕರೆನ್ಸಿ ಪರವಾದ ಸುದ್ದಿ ಕೊಟ್ಟಿದ್ದು, ತನ್ನ ಅಲ್ಗಾರಿದಂ ಬದಲಾಯಿಸಿಕೊಂಡು ಬಿಟ್ ಕಾಯಿನ್ ಸೇರಿದಂತೆ ಡಿಜಿಟಲ್ ದುಡ್ಡು ಬಳಸಿ ಪೇಮೆಂಟ್ ಮಾಡುವ ವ್ಯವಸ್ಥೆಯ ಆಡ್, ಸುದ್ದಿಯನ್ನು ಸೂಕ್ತವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಲು ಸಿದ್ಧ, ಮೊದಲಿಗೆ ಯುಎಸ್ ನಲ್ಲಿ ಆಗಸ್ಟ್ ತಿಂಗಳಲ್ಲಿ ಈ ನೀತಿ ನಿಯಮ ಜಾರಿಗೆ ಬರಲಿದೆ ಎಂದಿದೆ.

ಒಟ್ಟಾರೆ ಮಾರುಕಟ್ಟೆ ಮೌಲ್ಯ:
$2 ಟ್ರಿಲಿಯನ್‌ಗೆ ಏರಿಕೆಯಾಗಿದ್ದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಈಗ 1,656,165,787,792 ಡಾಲರ್ ಗೆ ಕುಸಿದಿದೆ. ಬಿಟ್ ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು. ಈಗ 36 ಸಾವಿರ ಡಾಲರ್ ಗಳಿಗೆ ಕುಸಿದಿದೆ.
ಜೂನ್ 7ರಂದು ಈ ಸಮಯ(14.10)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $36,162.48
ಒಟ್ಟಾರೆ ಮಾರುಕಟ್ಟೆ ಮೌಲ್ಯ: $677,281,973,018
ಒಂದು ಬಿಟ್ ಕಾಯಿನ್ ಬೆಲೆ = 26,28,271.34 ರು
(1 USD=72.85 ರುಪಾಯಿ)
ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 0.03ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 0.61ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 2.87ರಷ್ಟು ಏರಿಕೆ ಕಂಡು 2,767.00 ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 2.78 ಏರಿಕೆಯಾಗಿ ಒಟ್ಟಾರೆ $321,497,644,489ಮೌಲ್ಯ ಹೊಂದಿದೆ. ಇದೆ ವೇಳೆ ಡೋಜ್ ಕಾಯಿನ್ 24 ಗಂಟೆಗಳಲ್ಲಿ 0.16% ಏರಿಕೆ ಕಂಡು $48,438,314,930ಮೌಲ್ಯ ಪಡೆದುಕೊಂಡಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications