ಪೆಟ್ರೋಲ್ ದರ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಆಗಸ್ಟ್ 28: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು ದೆಹಲಿಯಲ್ಲಿ ಲೀಟರ್‌ಗೆ 11 ಪೈಸೆಯಂತೆ 81.94 ರೂಪಾಯಿಗೆ ಏರಿಕೆ ಮಾಡಿವೆ. ಆದರೆ, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.
ಸತತ ಆರು ದಿನ ತೈಲ ದರ ಏರಿಕೆ ಬಳಿಕ ಗುರುವಾರ(ಆಗಸ್ಟ್ 27) ಪೆಟ್ರೋಲ್ ದರದಲ್ಲಿ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿತ್ತು. ಆದರೆ ಶುಕ್ರವಾರ ಮತ್ತೆ ಪೆಟ್ರೋಲ್ ಏರುಮುಖದತ್ತ ಸಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ, ಜುಲೈ 30 ರಂದು ದೆಹಲಿ ಸರ್ಕಾರವು ಮೌಲ್ಯವರ್ಧಿತ ತೆರಿಗೆಯನ್ನು ಶೇ 13.25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದಾಗಿನಿಂದ ಡೀಸೆಲ್ ಬೆಲೆ ಸ್ಥಿರವಾಗಿ ಉಳಿದಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 28: 84.60 (11 ಪೈಸೆ ಏರಿಕೆ)
ಆಗಸ್ಟ್ 27: 84.49
ಆಗಸ್ಟ್ 26: 84.39
ಆಗಸ್ಟ್ 25: 84.39
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 77.88 (ಬದಲಾವಣೆ ಇಲ್ಲ)
ಆಗಸ್ಟ್ 27: 77.88
ಆಗಸ್ಟ್ 26: 77.88
ಆಗಸ್ಟ್ 25: 77.88

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 28: 81.94 (11 ಪೈಸೆ ಏರಿಕೆ)
ಆಗಸ್ಟ್ 27: 81.83
ಆಗಸ್ಟ್ 26: 81.73
ಆಗಸ್ಟ್ 25: 81.73
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 73.56 (ಬದಲಾವಣೆ ಇಲ್ಲ)
ಆಗಸ್ಟ್ 27: 73.56
ಆಗಸ್ಟ್ 26: 73.56
ಆಗಸ್ಟ್ 25: 73.56

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 28: 88.58 (10 ಪೈಸೆ ಏರಿಕೆ)
ಆಗಸ್ಟ್ 27: 88.48
ಆಗಸ್ಟ್ 26: 88.39
ಆಗಸ್ಟ್ 25: 88.39
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 80.11 (ಬದಲಾವಣೆ ಇಲ್ಲ)
ಆಗಸ್ಟ್ 27: 80.11
ಆಗಸ್ಟ್ 26: 80.11
ಆಗಸ್ಟ್ 25: 80.11

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 28: 84.91 (09 ಪೈಸೆ ಏರಿಕೆ)
ಆಗಸ್ಟ್ 27: 84.82
ಆಗಸ್ಟ್ 26: 84.73
ಆಗಸ್ಟ್ 25: 84.73
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 78.86 (ಬದಲಾವಣೆ ಇಲ್ಲ)
ಆಗಸ್ಟ್ 27: 78.86
ಆಗಸ್ಟ್ 26: 78.86
ಆಗಸ್ಟ್ 25: 78.86

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಆಗಸ್ಟ್ 28: 85.15 (11 ಪೈಸೆ ಏರಿಕೆ)
ಆಗಸ್ಟ್ 27: 85.04
ಆಗಸ್ಟ್ 26: 84.94
ಆಗಸ್ಟ್ 25: 84.94
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 80.17 (ಬದಲಾವಣೆ ಇಲ್ಲ)
ಆಗಸ್ಟ್ 27: 80.17
ಆಗಸ್ಟ್ 26: 80.17
ಆಗಸ್ಟ್ 25: 80.17

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications