ಪೆಟ್ರೋಲ್, ಡೀಸೆಲ್: ಯಾವ ನಗರದಲ್ಲಿ ಎಷ್ಟಿದೆ ದರ?
ಬೆಂಗಳೂರು, ಸೆ.4: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಪೆಟ್ರೋಲ್ ದರದಲ್ಲಿ ಇಂದು(ಸೆ. 4) ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.08ರು ಹಾಗೂ ಡೀಸೆಲ್ ದರ ಬಹುದಿನಗಳಿಂದ 73.40ರು ನಂತೆ ಮುಂದುವರೆದಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
Recommended Video
ದೆಹಲಿಯಲ್ಲಿ ಒಟ್ಟಾರೆ ಕಳೆದ 18 ದಿನಗಳಲ್ಲಿ 15 ದಿನಗಳ ಕಾಲ ಪೆಟ್ರೋಲ್ ಏರಿಕೆ ಕಂಡು ಸುಮಾರು 1.64 ರು ಏರಿಕೆಯಾಗಿತ್ತು ಒಟ್ಟಾರೆ, ಸೆಪ್ಟೆಂಬರ್ 01ರಂದು ಪ್ರಮುಖ ನಗರಗಳಲ್ಲಿ 4 ರಿಂದ 5 ಪೈಸೆ ಏರಿಕೆಯಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 43.82 ಯುಎಸ್ ಡಾಲರ್ ನಷ್ಟಿದೆ.

ಸೆಪ್ಟೆಂಬರ್ 04ರ ದರ ಪಟ್ಟಿ ಪೆಟ್ರೋಲ್ ಹಾಗೂ ಡೀಸೆಲ್ (ಪ್ರತಿ ಲೀಟರ್, ಬೆಲೆ ರು ಗಳಲ್ಲಿ)
ನಗರ-ಪೆಟ್ರೋಲ್-ಡೀಸೆಲ್
ದೆಹಲಿ-82.08-73.40
ಕೋಲ್ಕತಾ-83.57-76.90
ಮುಂಬೈ-88.73-79.94
ಚೆನ್ನೈ-85.04-78.71
ಬೆಂಗಳೂರು-84.75-77.71
ಡೀಸೆಲ್ ಬೆಲೆ ಬದಲಾಗಿಲ್ಲ:
ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಬೆಂಗಳೂರಲ್ಲಿ ಸೋಮವಾರದಂದು 28 ಪೈಸೆ ಇಳಿಕೆಯಾಗಿ 77.88 ರು ಆಗಿತ್ತು. ಮಂಗಳವಾರ ಯಾವುದೇ ಬದಲಾವಣೆಯಾಗಿಲ್ಲ. ಸೆ. 3ರಂದು 17 ಪೈಸೆ ಇಳಿಕೆಯಾಗಿತ್ತು.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿನ ಇಂಧನ ದರ ಎಷ್ಟಿದೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ












Click it and Unblock the Notifications