ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ನವದೆಹಲಿ, ಜನವರಿ 06: ಕಳೆದ ಎರಡು ದಿನಗಳ ಇಳಿಕೆ ಕಂಡ ಬಳಿಕ ದೇಶಾದ್ಯಂತ ಪೆಟ್ರೋಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರದಂದು ಡೀಸೆಲ್ ಬೆಲೆ ಮಾತ್ರ 10-11 ಪೈಸೆಗಳಷ್ಟು ಇಳಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದ ಬೆನ್ನಲ್ಲೇ ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಕಡಿಮೆ ಮಟ್ಟಕ್ಕೆ ಪೆಟ್ರೋಲ್ ಬೆಲೆ ಇಳಿದಿದೆ.
ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 69.21 ರೂ.ನಿಂದ 70.84 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರವು 63.01 ನಿಂದ 64.66ರಷ್ಟು ತುಟ್ಟಿಯಾಗಿದೆ. ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.

ಪೆಟ್ರೋಲ್ ಮೇಲಿನ ತೆರಿಗೆಯನ್ನು 3.25% ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 3.27% ರಷ್ಟು ಹೆಚ್ಚಳ ಮಾಡಿ ಕುಮಾರಸ್ವಾಮಿ ಸೂಚನೆ ಹೊರಡಿಸಿದ್ದರು.
ಬೆಂಗಳೂರಿನಲ್ಲಿ ಜನವರಿ 03ರದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 70.53ರು ನಷ್ಟಿದೆ. ಜನವರಿ 05ರಂದು 1.52ರು ಏರಿಕೆ ಕಂಡು 70.53ರುಗೆ ಏರಿಕೆಯಾಗಿತ್ತು. ಜನವರಿ 04ರಂದು 20ಪೈಸೆ ಏರಿಕೆಯಾಗಿ 69.01ರು ಆಗಿತ್ತು.
ಇದೇ ರೀತಿ ಡೀಸೆಲ್ ಬೆಲೆ 11 ರು ಇಳಿಕೆ ಕಂಡು ಪ್ರತಿ ಲೀಟರ್ ಬೆಲೆ 64.19ರು ಆಗಿದೆ. ಜನವರಿ 05ರಂದು 1.50 ರು ಏರಿಕೆ ಕಂಡು 64.30ರಿ ಆಗಿತ್ತು. ಜನವರಿ 04ರಂದು 21ಪೈಸೆ ಇಳಿಕೆಯಾಗಿ 62.80ರು ನಷ್ಟಿತ್ತು.












Click it and Unblock the Notifications