ಕಾರ್ಡ್ ಬಳಸಿ ಪೆಟ್ರೋಲ್, ಡೀಸೆಲ್ ತುಂಬಿಸಿ, ರಿಯಾಯಿತಿ ಗಳಿಸಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳುವವರಿಗೆ ಶುಭ ಸುದ್ದಿ ಸಿಕ್ಕಿದೆ. ಡಿಜಿಟಲ್ ರೂಪದಲ್ಲಿ ಹೆಚ್ಚು ಹಣ ಪಾವತಿ ಮಾಡುವ ಗ್ರಾಹಕರಿಗೆ ಮಂಗಳವಾರ (ಡಿಸೆಂಬರ್ 13) ದಿಂದ ಶೇಕಡಾ 0.75ರಷ್ಟು ರಿಯಾಯಿತಿ ಲಭಿಸಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಇಂಧನ ಖರೀದಿ ವೇಳೆ ಗ್ರಾಹಕರು ಸಂಪೂರ್ಣ ಮೊತ್ತವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್, ಇ-ವ್ಯಾಲೆಟ್, ಪ್ರಿ-ಪೇಯ್ಡ್ ಲಾಯಲ್ಟಿ ಕಾರ್ಡ್ ಮೂಲಕ ಪಾವತಿಸಬಹುದು. ನಂತರ ಗ್ರಾಹಕರ ಖಾತೆಗೆ ದರ ಕಡಿತದ ಮೊತ್ತ ಮೂರು ದಿನಗಳ ಒಳಗೆ ಸಂದಾಯವಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಹೇಳಿದೆ.

Petrol, diesel payment using cards to get discount from midnight: IOC

1 ಲೀಟರ್ ಪೆಟ್ರೋಲ್ ಅನ್ನು ಡಿಜಿಟಲ್ ಪಾವತಿ ಮೂಲಕ ಖರೀದಿಸಿದರೆ, ದೆಹಲಿ ದರದ ಅನ್ವಯ ಗ್ರಾಹಕರಿಗೆ ಇಂಧನ ಲಭಿಸಲಿದೆ. ಪೆಟ್ರೋಲ್ ಗೆ 49 ಪೈಸೆ ಮತ್ತು ಡಿಸೇಲ್ ಗೆ 41 ಪೈಸೆ ರಿಯಾಯಿತಿ ದೊರೆಯಲಿದ್ದು, ರಿಯಾಯಿತಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 66.10ರು ನಷ್ಟಿದ್ದರೆ, ಡೀಸೆಲ್ ದರ 54.57ರು ನಷ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A discount of 0.75 per cent on petrol and diesel will kick-in from midnight tonight on fuel purchases made using card payments.
Please Wait while comments are loading...