7ನೇ ದಿನ ಸತತ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ನವದೆಹಲಿ, ನವೆಂಬರ್ 03: ಜಾಗತಿಕವಾಗಿ ಕಚ್ಚಾತೈಲ ಬೆಲೆ ಸರಾಸರಿ 83-85 ಡಾಲರ್ ದಾಟಿದ್ದು, ಡಾಲರ್ ಚೇತರಿಕೆ ಕಾಣದಿದ್ದರೂ ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಇಂಧನ ದರ ಏರಿಕೆ ಮಾಡಲಾಗಿತ್ತು. ಸತತವಾಗಿ ಸರಾಸರಿ 35-40 ಪೈಸೆ ಪ್ರತಿ ಲೀಟರ್‌ನಂತೆ ಇಂಧನ ದರ ಏರಿಕೆ ಕಂಡಿತ್ತು.
ಮೆಟ್ರೋ ನಗರಗಳಲ್ಲಿ ಇಂದು (ನ.3) ದಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಮಂಗಳವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 36 ಪೈಸೆ ಹೆಚ್ಚಳವಾಗಿದೆ.
ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರು ತಗ್ಗಿತ್ತು. ಹೀಗಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಕಡಿಮೆಯಿದೆ. ಡೀಸೆಲ್ ಬೆಲೆ ಮಾತ್ರ ಏರಿಕೆಯಾಗಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೆಯೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ನಂತರ ಚೇತರಿಸಿಕೊಂಡು 85 ಪ್ಲಸ್ ಡಾಲರ್ ಮೇಲಕ್ಕೇರಿದೆ. ತಮಿಳುನಾಡಿನ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿದ್ದು ಬಿಟ್ಟರೆ, ಉಳಿದೆಡೆ ಇಂಧನ ದರ ಪ್ರತಿ ಲೀಟರ್ ಮೇಲೆ 100 ರು ಬೆಲೆ ಇದ್ದೇ ಇದೆ.

ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕ
ಉಳಿದಂತೆ, ಉಳಿದ ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 100 ರು ಗಿಂತ ತಗ್ಗಿಲ್ಲ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.
ದೆಹಲಿಯಲ್ಲಿ ದರ ಬುಧವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 110.04ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 98.42ರು ಆಗಿದೆ. ದೇಶದ ವಿವಿಧ ನಗರಗಳ ದರ ಪಟ್ಟಿ ವಿವರ ಮುಂದಿದೆ...

ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 03ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 83.08 ಯುಎಸ್ ಡಾಲರ್(1 USD=74.63ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 80-85 ಪ್ಲಸ್ ಡಾಲರ್‌ನಂತೆ ಮುಂದುವರೆದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ
ನವದೆಹಲಿ: ಪೆಟ್ರೋಲ್ 110.04ರೂ- ಡೀಸೆಲ್ 98.42 ರೂ
ಕೋಲ್ಕತಾ: ಪೆಟ್ರೋಲ್ 110.49 ರೂ- ಡೀಸೆಲ್ 101.56ರೂ
ಮುಂಬೈ: ಪೆಟ್ರೋಲ್ 115.85 ರೂ- ಡೀಸೆಲ್ 106.62 ರೂ
ಚೆನ್ನೈ: ಪೆಟ್ರೋಲ್ 106.66 ರೂ- ಡೀಸೆಲ್ 102.59 ರೂ
ಬೆಂಗಳೂರು: ಪೆಟ್ರೋಲ್ 113.93ರೂ- ಡೀಸೆಲ್ 104.50 ರೂ
ತಿರುವನಂತಪುರಂ: ಪೆಟ್ರೋಲ್ 112.43ರೂ- ಡೀಸೆಲ್ 105.85ರೂ
ಪಾಟ್ನಾ: ಪೆಟ್ರೋಲ್ 113.79 ರೂ- ಡೀಸೆಲ್ 105.07ರೂ
ಹೈದರಾಬಾದ್: ಪೆಟ್ರೋಲ್ 114.49ರೂ- ಡೀಸೆಲ್ 107.40 ರೂ
ನೋಯ್ಡಾ: ಪೆಟ್ರೋಲ್ 107.20ರೂ- ಡೀಸೆಲ್ 99.12ರೂ
ಜೈಪುರ: ಪೆಟ್ರೋಲ್ 117.45 ರೂ- ಡೀಸೆಲ್ 108.39 ರೂ
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್ .ಇನ್)

ಇಂಧನ ಬೆಲೆ 110 ರೂ ಬೆಲೆ ದಾಟಿದ ರಾಜ್ಯಗಳು
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಖ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರೂ ದಾಟಿದೆ. ನೋಯ್ಡಾದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ 110 ರು ಗಡಿ ದಾಟಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಕೂಡಾ 110 ರು ಪ್ಲಸ್ ಇದೆ.

ಹೆಚ್ಚು ವ್ಯಾಟ್, ಸೆಸ್ ವಿಧಿಸಿರುವ ರಾಜ್ಯಗಳು
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 122.59 ರೂ ನಷ್ಟಿದೆ, ಡೀಸೆಲ್ ಬೆಲೆ 113.11 ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 115 ರೂ ಗಡಿ ದಾಟಿದೆ.












Click it and Unblock the Notifications