ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ, ದೇಶದ ಪ್ರಮುಖ ನಗರಗಳಲ್ಲಿ ಬೆಲೆ?

ನವದೆಹಲಿ, ಏಪ್ರಿಲ್ 1: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಗುರುವಾರ (ಏಪ್ರಿಲ್ 1)ದಂದು ಯಾವುದೇ ಬದಲಾವಣೆಯಾಗಿಲ್ಲ. ಮಂಗಳವಾರದಂದು ದೇಶದೆಲ್ಲೆಡೆ ಪೆಟ್ರೋಲ್ ಬೆಲೆ 19 ರಿಂದ 22 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 21 ರಿಂದ 23 ಪ್ರತಿ ಲೀಟರ್ ಇಳಿಕೆಯಾಗಿತ್ತು.

ಇದೇ ವೇಳೆ ಜೆಟ್ ಇಂಧನ ದರ ಶೇ 3ರಷ್ಟು ತಗ್ಗಿಸಲಾಗಿದೆ. ಎಟಿಎಫ್ 1,887 ರು ಪ್ರತಿ ಕಿಲೋಲೀಟರ್‌ನಂತೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ಎಟಿಎಫ್ ದರ 58,374.16 ರು ಪ್ರತಿ ಕಿಲೋಲೀಟರ್‌ನಷ್ಟಿದೆ.

ಫೆಬ್ರವರಿ 27ರ ಬಳಿಕ ಮತ್ತೆ ಇಂಧನ ದರ ಪರಿಷ್ಕರಣೆಗೊಂಡಿರಲಿಲ್ಲ. ಮಾರ್ಚ್ 25ರಂದು ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 20 ಪೈಸೆ ತಗ್ಗಿಸಲಾಗಿತ್ತು.

Petrol and Diesel Prices unchanged On April 01: Check Latest Rate Here

ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.56 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 23 80.87 ರೂಪಾಯಿ ಆಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 24 ದಿನಗಳ ಕಾಲ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಕಚ್ಚಾತೈಲ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಈಗ ಮಾರ್ಚ್ 27ರಿಂದ ಕೆಲ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ.

ಒಟ್ಟಾರೆ, ಈ ವರ್ಷದಲ್ಲಿ ಇಂಧನ ದರ 26 ಬಾರಿ ಪರಿಷ್ಕರಣೆಗೊಂಡಿದ್ದು, ಪೆಟ್ರೋಲ್ ಒಟ್ಟು 7.46 ಪ್ರತಿ ಲೀಟರ್ ಹಾಗೂ ಡೀಸೆಲ್ 7.60 ಪ್ರತಿ ಲೀಟರ್ ನಷ್ಟು ಏರಿಕೆಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 63.11 ಯುಎಸ್ ಡಾಲರ್( 1 USD=73.42 ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ಪ್ರಮುಖ ನಗರಗಳಲ್ಲಿ ಮಾರ್ಚ್ 31ರ ಇಂಧನ ದರ

ನಗರ - ಪೆಟ್ರೋಲ್- ಡೀಸೆಲ್
ದೆಹಲಿ: 90.56ರೂ- 80.87ರೂ
ಮುಂಬೈ: 96.98 ರೂ - 87.96 ರೂ
ಚೆನ್ನೈ: 92.58 ರೂ- 85.88 ರೂ
ಬೆಂಗಳೂರು: 93.59ರೂ - 85.75 ರೂ
ಕೋಲ್ಕತ್ತಾ: 90.77 ರೂ-83.75 ರೂ
ಹೈದರಾಬಾದ್: 94.16 ರು -88.20 ರು
ನೋಯ್ಡಾ: 88.91 ರೂ-81.33 ರೂ
ಪಾಟ್ನ: 92.89 ರು -86.12 ರು
ಲಕ್ನೋ: 88.85 ರು -81.27 ರು

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ನಿಮ್ಮ ನಗರ, ಪಟ್ಟಣಗಳಲ್ಲಿನ ಇಂಧನ ದರವನ್ನು ತಿಳಿಯಲು ಕ್ಲಿಕ್ ಮಾಡಿ

Recommended Video

      ಇವರ ಕೆಟ್ಟ ಆಡಳಿತದ ವಿರುದ್ಧ ನಾವು ಹೋರಾಟ ಮಾಡ್ತೀವಿ ! | DK Shivakumar | Oneindia Kannada

      ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+