ದೇಶದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ಜುಲೈ 10: ದೇಶದಲ್ಲಿ ಇಂದು (ಶನಿವಾರ) ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 34 ರಿಂದ 43 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 28 ರಿಂದ 36 ಪೈಸೆಯಷ್ಟು ಹೆಚ್ಚಳ ಕಂಡಿದೆ.
ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಶನಿವಾರ (ಜುಲೈ 10) ದಂದು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದ್ದು. ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಸೆಂಚುರಿ ಪ್ಲಸ್ ದರ ಹೊಂದಿವೆ.
ನಿನ್ನೆ (ಶುಕ್ರವಾರ) ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡಿದ್ದಿಲ್ಲ. ಆದರೆ ಇಂದು (ಶನಿವಾರ) ಮತ್ತೆ ತೈಲ್ ದರ ಏರಿಕೆ ಕಂಡಿದೆ.

ಮೇ 4ರಿಂದ ಇಂದಿನ ತನಕ ಒಟ್ಟು 34 ಬಾರಿ ಹಾಗೂ ಜೂನ್ ತಿಂಗಳಲ್ಲೇ 19 ಬಾರಿ ಬೆಲೆ ಏರಿಕೆ ಮಾಡಲಾಗಿತ್ತು. ಜುಲೈ 08ರಂದು ಪೆಟ್ರೋಲ್ ಬೆಲೆ ಸರಾಸರಿ 34 ಪೈಸೆ ಪ್ರತಿ ಲೀಟರ್ ಏರಿಕೆ, ಡೀಸೆಲ್ ಬೆಲೆ 9 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿತ್ತು.
ದೇಶದ ಪ್ರಮುಖ ನಗರಗಳ ತೈಲ ದರ ಪಟ್ಟಿ ಇಲ್ಲಿದೆ.
ದೆಹಲಿ: ಲೀಟರ್ ಪೆಟ್ರೋಲ್ ದರ 100.91 ರೂ. ಆಗಿದ್ದು, ಡೀಸೆಲ್ ದರ 89.88 ರೂ. ತಲುಪಿದೆ.
ಮುಂಬೈ: ಲೀಟರ್ ಪೆಟ್ರೋಲ್ ದರ 106.93 ರೂ. ಆಗಿದ್ದು, ಡೀಸೆಲ್ ದರ 97.46 ತಲುಪಿದೆ.
ಬೆಂಗಳೂರು: ಲೀಟರ್ ಪೆಟ್ರೋಲ್ ದರ 104.29 ರೂ. ಆಗಿದ್ದು, ಡೀಸೆಲ್ ದರ 95.26 ರೂ. ತಲುಪಿದೆ.

ಕೋಲ್ಕತಾ: ಲೀಟರ್ ಪೆಟ್ರೋಲ್ ದರ 101.01 ರೂ. ಆಗಿದ್ದು, ಡೀಸೆಲ್ ದರ 92.37 ರೂ. ತಲುಪಿದೆ.
ಭೂಪಾಲ್: ಲೀಟರ್ ಪೆಟ್ರೋಲ್ ದರ 109.24 ರೂ. ಆಗಿದ್ದು, ಡೀಸೆಲ್ ದರ 92.97 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್- ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ.
ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications