ಜ. 02: ಹೊಸ ವರ್ಷದ ದಿನದಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ನವದೆಹಲಿ, ಜನವರಿ 2: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು (ಜನವರಿ 02, ಭಾನುವಾರ) ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎರಡು ತಿಂಗಳ ನಂತರವೂ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಹೊಸ ವರ್ಷದ ದಿನವಾದ ಭಾನುವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಕಳೆದ ತಿಂಗಳ ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು.

ದೆಹಲಿ ಸರ್ಕಾರವು ಕಳೆದ ವಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಶೇ.30ರಿಂದ ಶೇ.19.4ಕ್ಕೆ ಕಡಿಮೆ ಮಾಡಲು ನಿರ್ಧರಿಸಿದ್ದು, ನಗರದಲ್ಲಿ ಇಂಧನದ ಬೆಲೆಯನ್ನು ಲೀಟರ್‌ಗೆ ಸುಮಾರು 8 ರೂಪಾಯಿಗಳಷ್ಟು ಕಡಿಮೆ ಮಾಡಿದೆ.

ಜಾರ್ಖಂಡ್​ ಸರ್ಕಾರ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ಬೆಲೆಯಲ್ಲಿ 25 ರೂ. ಕಡಿತಗೊಳಿಸುವುದಾಗಿ ಕಳೆದ ಬುಧವಾರ ಘೋಷಿಸಿದೆ. ಇದು ಜನವರಿ 26ರಿಂದ ಜಾರಿಗೆ ಬರಲಿದೆ. ಉಳಿದಂತೆ ಎಲ್ಲೆಡೆ ಇಂಧನ ದರ ಸ್ಥಿರವಾಗಿದ್ದು, ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಂದು ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಜ.2 ರಂದು ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಜ.2 ರಂದು ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನವರಿ 02ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 77.78 ಯುಎಸ್ ಡಾಲರ್(1 USD=75.51 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 80-85 ಪ್ಲಸ್ ಡಾಲರ್‌ನಂತೆ ಮುಂದುವರೆದಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ

ನವದೆಹಲಿ: ಪೆಟ್ರೋಲ್ 95.41ರೂ- ಡೀಸೆಲ್ 86.67 ರೂ
ಕೋಲ್ಕತಾ: ಪೆಟ್ರೋಲ್ 104.67 ರೂ- ಡೀಸೆಲ್ 89.79 ರೂ
ಮುಂಬೈ: ಪೆಟ್ರೋಲ್ 109.98 ರೂ- ಡೀಸೆಲ್ 94.14 ರೂ
ಚೆನ್ನೈ: ಪೆಟ್ರೋಲ್ 101.40 ರೂ- ಡೀಸೆಲ್ 91.43 ರೂ
ಬೆಂಗಳೂರು: ಪೆಟ್ರೋಲ್ 100.58 ರೂ- ಡೀಸೆಲ್ 85.01 ರೂ
ತಿರುವನಂತಪುರಂ: ಪೆಟ್ರೋಲ್ 106.36ರೂ- ಡೀಸೆಲ್ 93.47ರೂ
ಪಾಟ್ನಾ: ಪೆಟ್ರೋಲ್ 106.48 ರೂ- ಡೀಸೆಲ್ 91.63ರೂ
ಹೈದರಾಬಾದ್: ಪೆಟ್ರೋಲ್ 108.20 ರೂ- ಡೀಸೆಲ್ 94.62 ರೂ
ನೋಯ್ಡಾ: ಪೆಟ್ರೋಲ್ 95.36ರೂ- ಡೀಸೆಲ್ 86.87 ರೂ
ಜೈಪುರ: ಪೆಟ್ರೋಲ್ 107.09 ರೂ- ಡೀಸೆಲ್ 90.73ರೂ
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್ .ಇನ್)

ವ್ಯಾಟ್, ಸೆಸ್ ಇಳಿಸಿರುವ ರಾಜ್ಯಗಳು

ವ್ಯಾಟ್, ಸೆಸ್ ಇಳಿಸಿರುವ ರಾಜ್ಯಗಳು

ಕೇಂದ್ರ ಸರ್ಕಾರ ನವೆಂಬರ್ 05ರಂದು ಪೆಟ್ರೋಲ್ ಬೆಲೆ 5 ರು ಹಾಗೂ ಡೀಸೆಲ್ ಬೆಲೆ 10 ರು ಪ್ರತಿ ಲೀಟರ್ ತಗ್ಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 111.58 ರೂ ನಷ್ಟಿದೆ, ಡೀಸೆಲ್ ಬೆಲೆ 94.79 ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 107ರೂ ಗಡಿ ದಾಟಿದೆ.

ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ

ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿ ತಿಂಗಳು ಕಳೆದರೂ ಭಾರತದಲ್ಲಿ ಇಂಧನ ದರದಲ್ಲಿ ಬದಲಾವಣೆ ಕಂಡಿಲ್ಲ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

Recommended Video

      ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+