ವಾಹನ ಸವಾರರೇ ಗಮನಿಸಿ: ಮಾ.24ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಪೆಟ್ರೋಲ್-ಡೀಸೆಲ್ ದರ?
ಬೆಂಗಳೂರು, ಮಾರ್ಚ್ 24: ಭಾರತದಲ್ಲಿ ನಿರಂತರವಾಗಿ ಎರಡು ದಿನ ಏರಿಕೆ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗುರುವಾರ ಸ್ಥಿರತೆ ಕಂಡು ಬಂದಿದೆ. ಮಾರ್ಚ್ 24ರಂದು ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ಭಾರತದ ಪ್ರಮುಖ ನಗರಗಳಲ್ಲಿ 137 ದಿನಗಳ ಬಳಿಕ ಎರಡು ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿತ್ತು. ಮಂಗಳವಾರ ಮತ್ತು ಬುಧವಾರ ಎರಡು ದಿನ 80 ಪೈಸೆ ಏರಿಕೆ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಗುರವಾರ ಸ್ಥಿರವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿದ್ದು, ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರು ಏರಿಕೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ರೀಟೈಲ್ ದರ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ.
ಭಾರತದ ಮೂರು ಸರ್ಕಾರಿ ತೈಲ ಕಂಪನಿಗಳು ಗುರುವಾರ (ಮಾರ್ಚ್, 24) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂದು ಇಂಧನ ದರಗಳು ಹೇಗಿವೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ
ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 114 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ನಿನ್ನೆಯ ಸೆಷನ್‌ಗೆ ಹೋಲಿಸಿದರೆ ಶೇ 0.11ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ರಾಜ್ಯ ರಾಜಧಾನಿ ಸೇರಿ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಮತ್ತೊಮ್ಮೆ 102 ರೂಪಾಯಿ ಗಡಿ ದಾಟಿದೆ. ಕಳೆದ 137 ದಿನಗಳಿಂದ 100.56 ರೂಪಾಯಿಗೆ ಸ್ಥಿರವಾಗಿದ್ದ ಬೆಲೆ ನಿರಂತರ ಎರಡು ದಿನಗಳ ಏರಿಕೆ ನಂತರ ಪೆಟ್ರೋಲ್ ದರ 102.26 ರೂಪಾಯಿ ಹಾಗೂ ಡೀಸೆಲ್ ದರ 86.58 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 102.91 ರೂಪಾಯಿ, ಡೀಸೆಲ್ ದರ 92.95 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 106.34 ರೂಪಾಯಿ, ಡೀಸೆಲ್ ದರ 91.42 ರೂಪಾಯಿ ಆಗಿದೆ. ಭೋಪಾಲ್ ನಗರದಲ್ಲಿ ಪೆಟ್ರೋಲ್ ದರ 108.98 ರೂಪಾಯಿ ಹಾಗೂ ಡೀಸೆಲ್ ದರ 92.52 ರೂಪಾಯಿ ಇದೆ.

ಹೈದ್ರಾಬಾದ್ ಮತ್ತು ಮುಂಬೈನಲ್ಲಿ 11ರ ಗಡಿ ದಾಟಿದ ಪೆಟ್ರೋಲ್
ಮರಹಾರಾಷ್ಟ್ರದ ರಾಜಧಾನಿ ಮುಂಬೈ ಮತ್ತು ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಗರದಲ್ಲಿ ಅತಿಹೆಚ್ಚು ಪೆಟ್ರೋಲ್ ದರ ದಾಖಲಾಗಿದೆ. ಈ ಎರಡೂ ನಗರದಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ದರ 111.67 ರೂಪಾಯಿ ಆಗಿದ್ದರೆ, ಡೀಸೆಲ್ ದರ 95.85 ರೂಪಾಯಿ ಆಗಿದೆ. ಅದರಂದೆ ಹೈದ್ರಾಬಾದ್ ನಗರದಲ್ಲಿ ಪೆಟ್ರೋಲ್ ದರ 110.01 ರೂಪಾಯಿ ಆಗಿದ್ದರೆ, ಡೀಸೆಲ್ ದರ 96.37 ರೂಪಾಯಿ ಆಗಿದೆ.
Recommended Video

100ಕ್ಕಿಂತ ಕಡಿಮೆ ಪೆಟ್ರೋಲ್ ದರವನ್ನು ಹೊಂದಿರುವ ಮಹಾನಗರಗಳು
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 100ಕ್ಕಿಂತ ಕಡಿಮೆಯಾಗಿದ್ದರೆ, ಡೀಸೆಲ್ ದರ 90 ರೂಪಾಯಿಗಿಂತ ಕಡಿಮೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 97.01 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.27 ರೂಪಾಯಿ ಆಗಿದೆ. ಲಕ್ನೋದಲ್ಲಿ ಪೆಟ್ರೋಲ್ ದರ 96.87 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.42 ರೂಪಾಯಿ ಆಗಿದೆ. ಅದೇ ರೀತಿ ಗುವಾಹಟಿಯಲ್ಲಿ ಪೆಟ್ರೋಲ್ ದರ 96.34 ರೂಪಾಯಿ ಇದ್ದು, ಡೀಸೆಲ್ ದರ : 82.67 ರೂಪಾಯಿ ಇದೆ. ಗಾಂಧಿ ನಗರದಲ್ಲಿ ಪೆಟ್ರೋಲ್ ದರ 96.94 ರೂಪಾಯಿಗಳಿದ್ದು, ಡೀಸೆಲ್ ದರ 91 ರೂಪಾಯಿ ಆಗಿದೆ.












Click it and Unblock the Notifications