ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, ನಿಮ್ಮ ನಗರದಲ್ಲಿ ಎಷ್ಟು ದರ?
ಬೆಂಗಳೂರು, ಜನವರಿ 18: ಸತತ ಎರಡು ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಒಟ್ಟಾರೆ 9 ದಿನಗಳಿಂದ ಏರಿಳಿತ ಹೆಚ್ಚಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿಲ್ಲ. ಶುಕ್ರವಾರವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ಪೈಸೆ ಹಾಗೂ ಡಿಸೇಲ್ ಬೆಲೆ 19 ಪೈಸೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.55 ರೂಪಾಯಿಯಾಗಿದೆ. ಡಿಸೇಲ್ ಬೆಲೆ ಲೀಟರ್ ಗೆ 64.97 ರೂಪಾಯಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆ 5 ಪೈಸೆ ಹೆಚ್ಚಳ ಕಂಡಿದ್ದು, ಲೀಟರ್ ಗೆ 72 ರೂಪಾಯಿ 87 ಪೈಸೆಯಾಗಿದೆ. ಇನ್ನು ಡಿಸೇಲ್ ಬೆಲೆ 17 ಪೈಸೆ ಹೆಚ್ಚಳ ಕಂಡು ಲೀಟರ್ ಗೆ 67 ರೂಪಾಯಿ 10 ಪೈಸೆಯಾಗಿದೆ.
ಗುರುವಾರ ಕೂಡ ಪೆಟ್ರೋಲ್ 14 ಪೈಸೆ ಹಾಗೂ ಡಿಸೇಲ್ 19 ಪೈಸೆ ಹೆಚ್ಚಳವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದೆ. ಜೊತೆಗೆ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ ಹೀಗಾಗಿ, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.
ಯೂರೋಪ್ ಒಕ್ಕೂಟದಿಂದ ಹೊರಬರುವ 'ಬ್ರೆಕ್ಸಿಟ್ ಒಪ್ಪಂದ' ಕುರಿತ ಇಂಗ್ಲೆಂಡ್ ನಿಲುವು, ತೆರೆಸಾ ಮೇ ಸರ್ಕಾರದ ಪರಿಸ್ಥಿತಿ ಬಗ್ಗೆ ಆತಂಕಗೊಂಡಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ, ಕಚ್ಚಾತೈಲ ಬೆಲೆ ಏರಿಳಿತದ ನಿರೀಕ್ಷೆಯಿತ್ತು. ತೆರೆಸಾ ಮೇ ಸರ್ಕಾರ ಬಹುಮತ ಗಳಿಸಿದ್ದು, ಇಂಧನ ಬೆಲೆ ಕುಸಿತ ತಪ್ಪಿಸಿದೆ.

ಬೆಂಗಳೂರಿನಲ್ಲಿ ಇಂಧನ ಬೆಲೆ
ಪೆಟ್ರೋಲ್
ಶುಕ್ರವಾರ (ಜನವರಿ 18) : 72.87 ರು ಪ್ರತಿ ಲೀಟರ್ (05 ಪೈಸೆ ಏರಿಕೆ)
ಜನವರಿ 17 : 72.74 ರು ಪ್ರತಿ ಲೀಟರ್ (10 ಪೈಸೆ ಏರಿಕೆ)
ಜನವರಿ 16: 72.64 ರು ಪ್ರತಿ ಲೀಟರ್ (0.09 ಪೈಸೆ ಇಳಿಕೆ)
ಜನವರಿ 15: 72.73 ರು (29 ಪೈಸೆ ಏರಿಕೆ)
ಡೀಸೆಲ್
ಶುಕ್ರವಾರ (ಜನವರಿ 18) : 67.10 ಪ್ರತಿ ಲೀಟರ್ (17ಪೈಸೆ ಏರಿಕೆ)
ಜನವರಿ 17 : 66.93 ಪ್ರತಿ ಲೀಟರ್ (22 ಪೈಸೆ ಏರಿಕೆ)
ಜನವರಿ 16 : 66.71 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 66.59 ರು (30 ಪೈಸೆ ಏರಿಕೆ)

ಮುಂಬೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಶುಕ್ರವಾರ (ಜನವರಿ 18) : 76.18 ಪ್ರತಿ ಲೀಟರ್ (07 ಪೈಸೆ ಏರಿಕೆ)
ಜನವರಿ 17: 16.11 ರು ಪ್ರತಿ ಲೀಟರ್ (14 ಪೈಸೆ ಏರಿಕೆ)
ಜನವರಿ 16: 75.97 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 76.05 ರು (28 ಪೈಸೆ ಏರಿಕೆ)
ಡೀಸೆಲ್
ಶುಕ್ರವಾರ (ಜನವರಿ 18) : 68.02 ಪ್ರತಿ ಲೀಟರ್ (20 ಪೈಸೆ ಏರಿಕೆ)
ಜನವರಿ 17 : 67.82 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ಜನವರಿ 16 : 67.62 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 67.49 ರು (31 ಪೈಸೆ ಏರಿಕೆ)

ಚೆನ್ನೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಶುಕ್ರವಾರ (ಜನವರಿ 18) : 73.23 ಪ್ರತಿ ಲೀಟರ್ (08 ಪೈಸೆ ಏರಿಕೆ)
ಜನವರಿ 17 : 73.15 ರು ಪ್ರತಿ ಲೀಟರ್ (15 ಪೈಸೆ ಇಳಿಕೆ)
ಜನವರಿ 16: 73.00 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 73.08 ರು (28 ಪೈಸೆ ಏರಿಕೆ)
ಡೀಸೆಲ್
ಶುಕ್ರವಾರ (ಜನವರಿ 18) : 68.62 ಪ್ರತಿ ಲೀಟರ್ (19 ಪೈಸೆ ಏರಿಕೆ)
ಜನವರಿ 17 : 68.42 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ಜನವರಿ 16 : 68.22 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 68.09 ರು (30 ಪೈಸೆ ಏರಿಕೆ)

ನವದೆಹಲಿಯಲ್ಲಿ ಇಂಧನ ಬೆಲೆ
ಪೆಟ್ರೋಲ್
ಶುಕ್ರವಾರ (ಜನವರಿ 18) : 70.55 ಪ್ರತಿ ಲೀಟರ್ (08 ಪೈಸೆ ಏರಿಕೆ)
ಜನವರಿ 17: 70.47 ರು ಪ್ರತಿ ಲೀಟರ್ (0.14 ಪೈಸೆ ಇಳಿಕೆ)
ಜನವರಿ 16: 70.33 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 70.41 ರು (28 ಪೈಸೆ ಏರಿಕೆ)
ಡೀಸೆಲ್
ಶುಕ್ರವಾರ (ಜನವರಿ 18) : 64.97 ಪ್ರತಿ ಲೀಟರ್ (19 ಪೈಸೆ ಏರಿಕೆ)
ಜನವರಿ 17 : 64.78 ರು ಪ್ರತಿ ಲೀಟರ್ (19 ಪೈಸೆ ಏರಿಕೆ)
ಜನವರಿ 16 : 64.59 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 64.47 ರು (29 ಪೈಸೆ ಏರಿಕೆ)












Click it and Unblock the Notifications