ಪೆಪ್ಸಿಕೋ ಇಂಡಿಯಾ ಸಿಇಒ ಡಿ ಶಿವಕುಮಾರ್ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: ಪೆಪ್ಸಿಕೋ ಇಂಡಿಯಾದ ಚೇರ್ಮನ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪೆಪ್ಸಿಕೋ ತೊರೆದ ಬಳಿಕ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಬಿರ್ಲಾ ಸಂಸ್ಥೆ ಮುಖ್ಯಸ್ಥ ಕುಮಾರಮಂಗಲಂ ಬಿರ್ಲಾಗೆ ನೇರವಾಗಿ ಶಿವಕುಮಾರ್ ಅವರು ವರದಿ ಮಾಡಲಿದ್ದಾರೆ.

PepsiCo India CEO D Shivakumar resigns

ಸುಮಾರು 36 ದೇಶಗಳಲ್ಲಿ ಬಿರ್ಲಾ ಸಂಸ್ಥೆಯು ಟೆಲಿಕಮ್ಯೂನಿಕೇಷನ್, ಸಿಮೆಂಟ್, ಕೆಮಿಕಲ್ಸ್, ಗಣಿಗಾರಿಕೆ, ಜವಳಿ, ರೀಟೈಲ್, ಇ ಕಾಮರ್ಸ್ ಮುಂತಾದ ಕ್ಷೇತ್ರಗಳಲ್ಲಿ ತನ್ನ ವ್ಯವಹಾರವನ್ನು ಹೊಂದಿದೆ.

ಡಿ ಶಿವಕುಮಾರ್ ಸ್ಥಾನಕ್ಕೆ ಪೆಪ್ಸಿಕೋ ಸಂಸ್ಥೆಯ ಈಜಿಪ್ಟ್ ಹಾಗೂ ಜೋರ್ಡಾನ್ ನ ಪ್ರಧಾನ ವ್ಯವಸ್ಥಾಪಕರಾಗಿರುವ ಅಹ್ಮದ್ ಎಲ್ ಶೇಖ್ ಅವರನ್ನು ಕರೆ ತರಲಾಗಿದೆ. ಪೆಪ್ಸಿಕೋನ ಬ್ರಾಂಡ್ ಗಳಾದ ಕ್ವಾಕರ್, ಟ್ರೊಪಿಕಾನಾಗೆ ಮಾರುಕಟ್ಟೆಯಲ್ಲಿ ಬೆಲೆ ತರುವಂತೆ ಮಾಡುವಲ್ಲಿ ಶಿವಕುಮಾರ್ ಶ್ರಮ ವಹಿಸಿದ್ದರು.

2020ರ ವೇಳೆಗೆ ಭಾರತದಲ್ಲಿ 33,000 ಕೋಟಿ ಹೂಡಿಕೆ ಮಾಡಲಿರುವ ಪೆಪ್ಸಿಕೋ 38 ಬಾಟ್ಲಿಂಗ್ ಪ್ಲಾಂಟ್ಸ್ ಹಾಗೂ ಮೂರು ಆಹಾರ ಸಂಸ್ಕರಣಾ ಕಾರ್ಖಾನೆಗಳನ್ನು ಸ್ಥಾಪಿಸಲು ಶಿವಕುಮಾರ್ ಕಾರಣರಾಗಿದ್ದಾರೆ. ನೋಕಿಯಾ, ಹಿಂದೂಸ್ತಾನ್ ಲಿವರ್, ಫಿಲಿಫ್ಸ್ ಸೇರಿದಂತೆ ದೊಡ್ಡ ಸಂಸ್ಥೆಗಳ ಬೆಳವಣಿಗೆಗಳಿಗೆ ಶಿವಕುಮಾರ್ ಶ್ರಮಿಸಿದ್ದರು.

ಇತ್ತೀಚೆಗೆ ಕೋಕಾ ಕೋಲಾ ಇಂಡಿಯಾದ ಅಧ್ಯಕ್ಷ ವೆಂಕಟೇಶ್ ಕಿಣಿ ಅವರು ಸಂಸ್ಥೆ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
D. Shivakumar, currently chairman and chief executive of PepsiCo India Holdings Pvt. Ltd, has resigned and will be joining Aditya Birla Group as the Group’s executive vice president (corporate strategy and business development).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ