ಕೊರೊನಾ ಎಫೆಕ್ಟ್: 68 ವರ್ಷಗಳಲ್ಲಿ ಪಾಕಿಸ್ತಾನದ ಜಿಡಿಪಿ ಮೊದಲ ಬಾರಿಗೆ ಕುಸಿತ
ಇಸ್ಲಮಾಬಾದ್, ಜೂನ್ 12: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು ದೊಡ್ಡ ಹಿನ್ನಡೆ ಅನುಭವಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು 68 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿದಿದೆ. ಹಣದ ಕೊರತೆ ಮತ್ತು ಆರ್ಥಿಕ ಹಿಂಜರಿತದಿಂದಾಗಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
Recommended Video
ಪಾಕಿಸ್ತಾನದ ಜಿಡಿಪಿ 2019-20ನೇ ಹಣಕಾಸು ವರ್ಷದಲ್ಲಿ 0.38 ಪರ್ಸೆಂಟ್‌ರಷ್ಟು ಕುಸಿತ ದಾಖಲಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯು ವ್ಯಾಪಕವಾಗಿ ನಷ್ಟ ಅನುಭವಿಸಿದೆ ಎಂದು ಹಣಕಾಸು ವ್ಯವಹಾರಗಳ ಸಲಹೆಗಾರ ಅಬ್ದುಲ್ ಹಫೀಜ್ ಶೇಖ್ ಆರ್ಥಿಕ ವಿಮರ್ಶೆ ಹೊರಡಿಸಿದ್ದಾರೆ.
ಪಾಕ್‌ನಲ್ಲಿಯೂ ಮಾರ್ಚ್‌ನಿಂದ ಹಲವಾರು ವಾರಗಳವರೆಗೆ ಲಾಕ್‌ಡೌನ್ ಜಾರಿಗೆ ತರಲಾಗಿತ್ತು. 68 ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕತೆಯ ಮೊದಲ ಕುಸಿತ ಇದಾಗಿದೆ. ಪಾಕಿಸ್ತಾನದಲ್ಲಿ ಹಣಕಾಸು ವರ್ಷ ಜುಲೈ 1 ರಿಂದ ಜೂನ್ 30 ರವರೆಗೆ.

ಪಾಕಿಸ್ತಾನದಲ್ಲಿ ಕೊರೊನಾವೈರಸ್‌ನಿಂದ ಇದುವರೆಗೆ ಸುಮಾರು 1,20,000 ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಎಕನಾಮಿಕ್ ರಿವ್ಯೂ ಪ್ರಕಾರ, ಕೊರೊನಾ ವೈರಸ್‌ನ ದುಷ್ಪರಿಣಾಮದಿಂದಾಗಿ ಆರ್ಥಿಕತೆಯು 2019-20ರ ಆರ್ಥಿಕ ವರ್ಷದಲ್ಲಿ 0.38 ಪರ್ಸೆಂಟ್‌ರಷ್ಟು ಕುಸಿತವನ್ನು ದಾಖಲಿಸಿದೆ. ಪರಿಶೀಲನಾ ವರದಿಯ ಪ್ರಕಾರ, ಕೃಷಿ ಕ್ಷೇತ್ರವು 2.7 ಪರ್ಸೆಂಟ್‌ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಇದರ ಹೊರತಾಗಿ, ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳು ಕುಸಿತ ಕಂಡಿವೆ.
ಐಎಂಎಫ್ ಮತ್ತು ವಿಶ್ವಬ್ಯಾಂಕ್ ಪ್ರಕಾರ, ಕೊರೊನಾವೈರಸ್ ಕಾರಣದಿಂದಾಗಿ ಪಾಕಿಸ್ತಾನದ ಆರ್ಥಿಕತೆಯು 2.6 ಪರ್ಸೆಂಟ್‌ರಷ್ಟು ಕುಸಿಯುತ್ತದೆ.












Click it and Unblock the Notifications