ಆನ್ ಲೈನ್ ನಲ್ಲಿ ರು.1 ರು ಸೇಲ್ ಆಗ್ತಾ ಇದೆ!
ಬೆಂಗಳೂರು, ನ.22: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಒಂದು ರುಪಾಯಿ ಮುಖಬೆಲೆಯ ನೋಟುಗಳನ್ನು ಚಾಲನೆಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿರುವ ಬೆನ್ನಲ್ಲೇ ರು.1 ನೋಟುಗಳು ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯವಿರುವ ಸುದ್ದಿ ಬಂದಿದೆ.
ವಿವಾದದ ನಡುವೆಯೂ ಆರ್ ಬಿಐ ಮತ್ತೊಮ್ಮೆ ರು 1 ನೋಟುಗಳ ಮುದ್ರಣ ಹಾಗೂ ಪ್ರಚಾರಕ್ಕೆ ಮುಂದಾಗಿತ್ತು. ಅದರೆ, ಇದು ಎಷ್ಟರಮಟ್ಟಿಗೆ ಸಫಲವಾಯಿತೋ ಗೊತ್ತಿಲ್ಲ. ಅದರೆ, ಜನಪ್ರಿಯ ಇ ಕಾಮರ್ಸ್ ತಾಣ ಇಬೇ ಈಗ ಕರೆನ್ಸಿ ನೋಟುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದೆ.
1 ರು ಮುಖಬೆಲೆಯ 1,000 ನೋಟುಗಳು 9,499 ರು ನಂತೆ ಮಾರಾಟಕ್ಕೆ ಬಿಡಲಾಗಿದೆ.ಈ ಬಗ್ಗೆ ಕೆಲ ಬ್ಯಾಂಕರ್ಸ್ ಪ್ರಶ್ನಿಸಿದ್ದಾರೆ. ಕರೆನ್ಸಿ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವೇ? ಅದರಲ್ಲೂ ಆನ್ ಲೈನ್ ನಲ್ಲಿ ಮಾರಾಟ ಎಷ್ಟು ಸರಿ? ಎಂದು ಆರ್ ಬಿಐಗೆ ಪ್ರಶ್ನೆಗಳನ್ನು ಎಸೆದಿದ್ದಾರೆ.

ಆದರೆ, ಆನ್ ಲೈನ್ ಮೂಲಕ ಈ ನೋಟುಗಳನ್ನು ಖರೀದಿಸುವ ವ್ಯಕ್ತಿ ಅದನ್ನು ವ್ಯವಹಾರಿಕವಾಗಿ ಬಳಸದೆ ಸಂಗ್ರಹಕ್ಕಾಗಿ ಉಪಯೋಗಿಸಬಹುದು. ಹೀಗಾಗಿ ಆನ್ ಲೈನ್ ನಲ್ಲಿ ನೋಟುಗಳ ಮಾರಾಟಕ್ಕೆ ಕಡಿವಾಣ ಸ್ವಲ್ಪ ಕಷ್ಟ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್ ಎಂಆರ್ ಕೃಷ್ಣಮೂರ್ತಿ ಹೇಳಿದ್ದಾರೆ.
ಯಾವುದೇ ಮುಖಬೆಲೆಯ ಕರೆನ್ಸಿ ನೋಟ್ ಆಗಲಿ ಸರ್ಕಾರ ಅಥವಾ ಆರ್ ಬಿಐ ಒಮ್ಮೆ ಆ ಮುಖಬೆಲೆಯ ನೋಟುಗಳನ್ನು ಚಾಲನೆಯಿಂದ ಹಿಂಪಡೆದರೆ ಮಾತ್ರ ಅದನ್ನು ಸಂಗ್ರಹ ಯೋಗ್ಯ ಎಂದು ಪರಿಗಣಿಸಲಾಗುತ್ತದೆ.
ಈಗ ರು .1 ಇನ್ನೂ ಚಾಲನೆಯಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ 2015ರ ನಂತರ ರು. 1 ಮುಖಬೆಲೆ ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಆರ್ ಬಿಐ ಹೇಳಿದೆ. ಹೀಗಾಗಿ ರು.1 ನೋಟುಗಳನ್ನು ಸಂಗ್ರಹಯೋಗ್ಯವಾಗಿ ಎಲ್ಲಿಂದ ಬೇಕಾದರೂ ಖರೀದಿಸುವ ಅವಕಾಶ ಮುಕ್ತಗೊಳಿಸಬಹುದಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications