ಇನ್ಫೋಸಿಸ್ ತೊರೆದ ಬನ್ಸಾಲ್ ಈಗ ಓಲಾ ಸಿಎಫ್ಒ
ಬೆಂಗಳೂರು, ನ.27: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನಲ್ಲಿದ್ದ ಸಿಎಫ್ ಒ ಸ್ಥಾನವನ್ನು ತೊರೆದ ಒಂದು ತಿಂಗಳಲ್ಲೇ ರಾಜೀವ್ ಬನ್ಸಾಲ್ ರನ್ನು ಓಲಾ ಕ್ಯಾಬ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.ರಾಜೀವ್ ಬನ್ಸಾಲ್ ಅವರು ಓಲಾ ಸಂಸ್ಥೆ ಸಿಎಫ್ಒ ಆಗಿ ನೇಮಕಗೊಂಡಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಇನ್ಫೋಸಿಸ್ ಸಂಸ್ಥೆ ತೊರೆದಿದ್ದ ಮುಖ್ಯ ವಾಣಿಜ್ಯ ಅಧಿಕಾರಿ (ಸಿಎಫ್ ಒ) ರಾಜೀವ್ ಬನ್ಸಾಲ್ ಅವರಿಗೆ ವಾಣಿಜ್ಯ ವಿಭಾಗದಲ್ಲಿ ಸುಮಾರು 21 ವರ್ಷಗಳ ಅನುಭವವಿದೆ. ಇನ್ಫೋಸಿಸ್ ನಲ್ಲೇ ವಿವಿಧ ಹುದ್ದೆಗಳಲ್ಲಿ 16 ವರ್ಷ ಗಳ ಕಾರ್ಯ ನಿರ್ವಹಿಸಿದ್ದಾರೆ.

ರಾಜೀವ್ ಅವರು ಮಿತೇಶ್ ಶಾ ಅವರ ಬದಲಿಗೆ ಸಿಎಫ್ ಒ ಆಗಿ ಓಲಾ ಸಂಸ್ಥೆ ಸೇರುತ್ತಿರುವುದು ನಮಗೆ ಬಲ ತಂದಿದೆ ಎಂದು ಓಲಾ ಸಹ ಸ್ಥಾಪಕ ಸಿಇಒ ಭವಿಶ್ ಅಗರವಾಲ್ ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಕಂಪನಿ ಓಲಾ ಸಂಸ್ಥೆ. ವರ್ಷಾರಂಭದಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಸೇವೆ ಆರಂಭಿಸಿತ್ತು. 'ಓಲಾ ಪಿಂಕ್' ಹೆಸರಿನಲ್ಲಿ ಆಪ್ ಬಿಡುಗಡೆ ಮಾಡಿತ್ತು. ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಪುಣೆ ಹಾಗೂ ಅಹಮದಾಬಾದ್‌ನಲ್ಲಿ ಬೀಟಾ ವರ್ಷನ್ ಚಾಲನೆಯಲ್ಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications