ವಿ ಪ್ರಿಪೇಯ್ಡ್ : ರಾತ್ರಿಯಿಡಿ ಹೆಚ್ಚು ವೆಚ್ಚವಿಲ್ಲದೆ ನೆಟ್ ಬಳಕೆ ಸೌಲಭ್ಯ
ಮುಂಬೈ, ಫೆಬ್ರವರಿ 16: ಗ್ರಾಹಕರ ಹೆಚ್ಚುವರಿ ಬೇಡಿಕೆ ಈಡೇರಿಸುವ ಸಲುವಾಗಿ ವಿ ಯಾವುದೇ ನಿರ್ಬಂಧ, ಹೆಚ್ಚುವರಿ ವೆಚ್ಚವಿಲ್ಲದೇ ಅಪರಿಮಿತ ಹೈಸ್ಪೀಡ್ ರಾತ್ರಿ ವೇಳೆಯ ದಾಟಾ ಯೋಜನೆಯನ್ನು ಘೋಷಿಸಿದೆ. ಇದು ವಿ ಪ್ರಿ ಪೇಯ್ಡ್ ಗ್ರಾಹಕರಿಗೆ ಮಧ್ಯರಾತ್ರಿ 12.00ರಿಂದ ಮುಂಜಾನೆ 6.00ರವರೆಗೆ ಲಭ್ಯವಿದ್ದು, 249 ರೂಪಾಯಿ ಮತ್ತು ಹೆಚ್ಚಿನ ಮೌಲ್ಯದ ಎಲ್ಲ ಅನ್‍ಲಿಮಿಟೆಡ್ ರೀಚಾರ್ಜ್‍ಗಳಿಗೆ ಇದು ಅನ್ವಯವಾಗುತ್ತದೆ.
ಕೋವಿಡ್ 19 ಸಾಂಕ್ರಾಮಿಕದಿಂದ ವಿಶ್ವದಲ್ಲಿ ಇಂಟರ್ನೆಟ್ ಜನತೆಯ ಆಮ್ಲಜನಕ ಎನಿಸಿದ್ದು, ಬೋನಸ್ ಅಪರಿಮಿತ ಹೈಸ್ಪೀಡ್ ರಾತ್ರಿ ಡಾಟಾ ಇದೀಗ ವಿ ಗ್ರಾಹಕರಿಗೆ ಜೀವನದಲ್ಲಿ ಇನ್ನಷ್ಟು ಹೆಚ್ಚಿನದನ್ನು ಪಡೆಯಲು ಅವಕಾಶ ಕಲ್ಪಿಸಿದೆ. ವಿ ಪ್ರಿ ಪೇಯ್ಡ್ ಗ್ರಾಹಕರು ಇದೀಗ ಅಪರಿಮಿತ ಇನ್ಫೋಟೈನ್‍ಮೆಂಟ್‍ನೊಂದಿಗೆ, ಪ್ರೀತಿಪಾತ್ರರ ಜತೆ ಸುದೀರ್ಘ ವಿಡಿಯೊ ಕರೆಗಳ ಸಂಪರ್ಕವನ್ನು ಸಾಧಿಸಲು ಅಥವಾ ತಮ್ಮ ದೈನಂದಿನ ಡಾಟಾ ಕೋಟಾ ಮುಗಿಯುವ ಯಾವುದೇ ಭೀತಿ ಇಲ್ಲದೇ ನಿಗದಿತ ಡೌನ್‍ಲೋಡ್‍ಗಳನ್ನು ಮಾಡಿಕೊಳ್ಳಹುದಾಗಿದೆ.
ವಿ ಗ್ರಾಹಕರು ವಾರಾಂತ್ಯದ ಡಾಟಾ ಮುಂದುವರಿಸುವ ಪ್ರಯೋಜನಗಳನ್ನು ಎಲ್ಲ ಹಾಲಿ ಇರುವ ಅಪರಿಮಿತ ದೈನಿಕ ಡಾಟಾ ಕೋಟಾ ಪ್ಯಾಕ್‍ಗಳ ಮೇಲೆ ಅಂದರೆ 249 ರೂಪಾಯಿ ಅಥವಾ ಹೆಚ್ಚಿನ ಮೌಲ್ಯದ ರೀಚಾರ್ಜ್ ಪ್ಯಾಕ್‍ಗಳ ಮೇಲೆ ಪಡೆಯಬಹುದು. ಈ ಮೂಲಕ ಬಳಕೆದಾರರು ರಾತ್ರಿಯ ವೇಳೆ ಇಂಟರ್ನೆಟ್ ಬಳಸಲು ಅವಕಾಶವಾಗಲಿದ್ದು, ಇದರ ಜತೆಗೆ ತಮ್ಮ ದೈನಿಕ ಡಾಟಾ ಕೋಟಾದ ಉಳಿಕೆ ಡಾಟಾವನ್ನು ವಾರಾಂತ್ಯದಲ್ಲಿ ಬಳಸಿಕೊಳ್ಳಬಹುದು.

ಅಪರಿಮಿತ ಹೈಸ್ಪೀಡ್ ರಾತ್ರಿ ವೇಳೆಯ ಡಾಟಾ ಸೌಲಭ್ಯವನ್ನು ವಿ ಗ್ರಾಹಕರು ವಿವಿಧ ಓಟಿಟಿ ಅನ್ವಯಿಕೆಗಳ ಬ್ರೌಸಿಂಗ್ ಮತ್ತು ಡೌನ್‍ಲೋಡ್‍ಗಳಿಗೆ ಬಳಸಿಕೊಳ್ಳಬಹುದು. ಜತೆಗೆ ಸಿನಿಮಾ ಮತ್ತು ಎಲ್ಲ ಮನೋರಂಜನೆಯನ್ನು ಒಂದೇ ಕಡೆ ಪಡೆಯಲು ಅವಕಾಶವಿರುವ ವಿ ಮೂವಿಸ್ ಮತ್ತು ಟಿವಿ ಆ್ಯಪ್ ಮೂಲಕ ಟಿವಿ ಕಾರ್ಯಕ್ರಮ, ಇತ್ತೀಚಿನ ಚಲನಚಿತ್ರಗಳು ಮತ್ತು ಮೂಲಕ ಅಂಶಗಳನ್ನು ವೀಕ್ಷಿಸಲು ಕೂಡಾ ಬಳಸಿಕೊಳ್ಳಬಹುದು.
10 ದಶಲಕ್ಷಕ್ಕೂ ಅಧಿಕ ವಿ ಗ್ರಾಹಕರಿಂದ ಡೌನ್‍ಲೋಡ್ ಮಾಡಲ್ಪಟ್ಟಿರುವ ವಿ ಮೂವೀಸ್ ಅಂಡ್ ಟಿವಿ ಆ್ಯಪ್, 13 ಭಿನ್ನ ಭಾಷೆಗಳಿಗೆ ಸಂಬಂಧಿಸಿದ 9500ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹೊಂದಿದೆ. 400ಕ್ಕೂ ಹೆಚ್ಚು ಲೈವ್ ಟಿವಿ ಚಾನಲ್‍ಗಳು ಮತ್ತು ಮೂಲ ವೆಬ್‍ಸರಣಿಯ ದೊಡ್ಡ ಕೆಟಲಾಗ್‍ಗಳೂ, ಅಂತರರಾಷ್ಟ್ರೀಯ ಟಿವಿ ಕಾರ್ಯಕ್ರಮಗಳು ಎಲ್ಲ ವಯೋಮಿತಿಯವರಿಗಾಗಿ ಇವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications