ಕೊರೊನಾ ವೈರಸ್ ಭೀತಿ ನಡುವೆ 6 ತಿಂಗಳು Anti- ವೈರಸ್ ಉಚಿತ

ಬೆಂಗಳೂರು, ಏಪ್ರಿಲ್ 14: ಪ್ರಮುಖ ಗ್ರಾಹಕ ಸೈಬರ್ ಸೆಕ್ಯೂರಿಟಿ ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ನೊರ್ಟನ್ ಲೈಫ್ ಲಾಕ್ ನೊರ್ಟನ್ ಫ್ಯಾಮಿಲಿ ಸಾಫ್ಟ್ ವೇರ್ ಗೆ ಆರು ತಿಂಗಳ ಚಂದಾದಾರಿಕೆಯ ಕೊಡುಗೆಯನ್ನು ಪ್ರಕಟಿಸಿದೆ. ಕೊವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಇದು ಮಕ್ಕಳು ಆನ್ ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೋಷಕರಿಗೆ ನೆರವಾಗಲಿದೆ.

ಗ್ರಾಹಕರು family.norton.com ನಲ್ಲಿ ಯಾವುದೇ ಹಣಕಾಸು ಬದ್ಧತೆ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳ ನೆರವಿಲ್ಲದೇ ನೋಂದಣಿ ಮಾಡಿಕೊಂಡು ನೊರ್ಟನ್ ಫ್ಯಾಮಿಲಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಫರ್ ಮೇ 31, 2020 ರವರೆಗೆ ಜಾರಿಯಲ್ಲಿರುತ್ತದೆ.

ಕೊವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿದ್ದಾರೆ. ಮಕ್ಕಳು ಹೆಚ್ಚು ಹೆಚ್ಚು ಇಂಟರ್ನೆಟ್ ಆಧಾರಿತ ಸಾಧನಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳು ಆಟ, ಮನರಂಜನೆ ಮತ್ತು ಅಧ್ಯಯನಕ್ಕೆ ಈ ಸಾಧನಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಸೈಬರ್ ದಾಳಿಗಳು ಮತ್ತು ಇತರೆ ಆನ್ ಲೈನ್ ಬೆದರಿಕೆಗಳಿಗೆ ಕಾರಣವಾಗುತ್ತದೆ. ಇತ್ತೀಚಿಗೆ ಬಿಡುಗಡೆಯಾದ NortonLifeLock Cyber Safety Insights Report ಪ್ರಕಾರ ಭಾರತದಲ್ಲಿ ಪ್ರತಿ 10 ಮಂದಿ ಪ್ರತಿಕ್ರಿಯೆ ನೀಡಿದವರಲ್ಲಿ ನಾಲ್ವರು ಐಡೆಂಟಿಟಿ ಬೆದರಿಕೆಯ ಅನುಭವವನ್ನು ಹೊಂದಿದ್ದಾರೆ. ಇನ್ನು ಶೇ.10 ರಷ್ಟು ಜನರು ಫಲಿತಾಂಶ ನಷ್ಟವನ್ನು ಅನುಭವಿಸಿದ್ದಾರೆ.

Norton LifeLock offers 6-month free antivirus to protect kids online

ನೊರ್ಟನ್ ಲೈಫ್ ಲಾಕ್, ಇಂಡಿಯಾದ ಕಂಟ್ರಿ ಡೈರೆಕ್ಟರ್ ರಿತೇಶ್ ಚೋಪ್ರಾ ಅವರು ಮಾತನಾಡಿ, "ಆನ್ ಲೈನ್ ಬಳಕೆಯ ಸಮಯವು ಅಧಿಕವಾಗುತ್ತಿರುವಂತೆಯೇ ಸೈಬರ್ ಬೆದರಿಕೆಗಳ ಅಪಾಯವೂ ಹೆಚ್ಚಾಗುತ್ತದೆ. ವಿಶೇಷವಾಗಿ ಇದು ಮಕ್ಕಳ ವಿಚಾರದಲ್ಲಿ ಹೆಚ್ಚು ಆತಂಕಕಾರಿಯಾಗಿದೆ. ಈ ಆನ್ ಲೈನ್ ಜಗತ್ತಿನಲ್ಲಿ ಒಬ್ಬರ ಐಡೆಂಟಿಟಿಯನ್ನು ರಕ್ಷಣೆ ಮಾಡುವುದು ತಕ್ಷಣದ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಗ್ರಾಹಕರನ್ನು ಇಂತಹ ಬೆದರಿಕೆಗಳಿಂದ ರಕ್ಷಣೆ ನೀಡಲು ಬದ್ಧರಾಗಿದ್ದೇವೆ. ಈ ಮೂಲಕ ಕುಟುಂಬಗಳು ಮತ್ತು ಮಕ್ಕಳಿಗೆ ರಕ್ಷಣೆ ನೀಡಲಿದ್ದೇವೆ. ಈ ನಿಟ್ಟಿನಲ್ಲಿ ನಾವು ನೀಡುತ್ತಿರುವ ಆಫರ್ ಗಳನ್ನು ಗ್ರಾಹಕರು ಸದುಪಯೋಗ ಮಾಡಿಕೊಳ್ಳುತ್ತಾರೆ ಮತ್ತು ಈ ಮೂಲಕ ಸಂಭವನೀಯ ಸೈಬರ್ ಬೆದರಿಕೆಗಳಿಂದ ರಕ್ಷಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ" ಎಂದು ತಿಳಿಸಿದರು.

ನೊರ್ಟನ್ ಫ್ಯಾಮಿಲಿಯು ಪೋಷಕರಿಗೆ ಸುಲಭವಾಗಿ ಬಳಸಬಹುದಾದ ಟೂಲ್ಸ್ ಅನ್ನು ನೀಡುವ ಮೂಲಕ ಮಕ್ಕಳನ್ನು ಆನ್ ಲೈನ್ ಬೆದರಿಕೆಗಳಿಂದ ರಕ್ಷಿಸಲು ನೆರವಾಗುತ್ತದೆ. ಈ ಟೂಲ್ ಗಳು ಮಕ್ಕಳ ಆನ್ ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ ಮತ್ತು ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಅಪಾಯ ಸಂಭವಿಸುವ ಮುನ್ನವೇ ಅವುಗಳನ್ನು ಸರಿಪಡಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+