ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ತುಸು ಏರಿಕೆ

ನವದೆಹಲಿ, ಜನವರಿ 01: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ಐದನೇ ಬಾರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಿವೆ. ಹೊಸ ವರ್ಷದ ಆರಂಭ ದಿನದಂದು ಸಬ್ಸಿಡಿ ರಹಿತ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ತುಸು ಏರಿಕೆಯಾಗಿದೆ.

ಜನವರಿ 01ರಂದು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 19 ರು ಪ್ರತಿ ಸಿಲಿಂಡರ್ ನಲ್ಲಿ ಏರಿಕೆ ಮಾಡಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೆಷನ್(ಐಒಸಿ) ಆದೇಶ ನೀಡಿದೆ. 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 695 ರೂಪಾಯಿ ಇದ್ದದ್ದು ಹೊಸ ಬೆಲೆ 714 ರೂಪಾಯಿ ಆಗಲಿದೆ.

ಜುಲೈ ಹಾಗೂ ಆಗಸ್ಟ್ ಎಲ್ ಪಿ ಜಿ ಬೆಲೆ 100 ಹಾಗೂ 62 ರು ಕಡಿತವಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ 14.2 ಕೆ.ಜಿ ಎಲ್ ಪಿಜಿ ಸಿಲಿಂಡರ್ ಸರಾಸರಿ 13.5 ರು ಏರಿಕೆ ಕಂಡಿತ್ತು. ಸೌದಿ ಅರೇಬಿಯಾದ ತೈಲ ಘಟಕದ ಮೇಲೆ ದಾಳಿ, ಯುಎಸ್ಎ ಹಾಗೂ ಚೀನಾ ನಡುವಿನ ವ್ಯಾಪಾರ ವಹಿವಾಟು, ಎಲ್ಲವೂ ತೈಲ ಬೇಡಿಕೆ ಮೇಲೆ ಪರಿಣಾಮ ಬೀರಿತ್ತು.

ಅಕ್ಟೋಬರ್ 01ರಿಂದ ದೆಹಲಿಯಲ್ಲಿ, 14.2 ಕೆ.ಜಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 605 ರೂಪಾಯಿ (590 ರು ಈ ಹಿಂದಿನ ದರ) ಯಾಗಿದೆ.19 ಕೆ.ಜಿ ಸಿಲಿಂಡರ್ ಬೆಲೆ 1085 ರೂಪಾಯಿಯಾಗಿದೆ. ಮುಂಬೈಯಲ್ಲಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 684.50 ರು (ಹಳೆ ದರ665ರು), ಕೋಲ್ಕತ್ತಾದಲ್ಲಿ 747 ರು(725.5 ರು) ಹಾಗೂ ಚೆನ್ನೈನಲ್ಲಿ734 ರು (714ರು).

19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಕೂಡ ಪರಿಷ್ಕರಿಸಲಾಗಿದ್ದು ದೆಹಲಿಯಲ್ಲಿ 1241 ರೂ., ಕೊಲ್ಕತ್ತಾದ 1308. 50 ರೂ., ಮುಂಬೈನಲ್ಲಿ 1190 ರೂ., ಚೆನ್ನೈನಲ್ಲಿ 1363 ರೂಪಾಯಿ ಇದೆ. ಪರಿಷ್ಕೃತ ದರಗಳು ಜನವರಿ 01 ರಿಂದ ಜಾರಿಗೆ ಬರಲಿದೆ.

ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು

ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು

ಸೌದಿ ತೈಲ ಘಟಕದ ಮೇಲೆ ಡ್ರೋನ್ ದಾಳಿ ಬಳಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಭಾರತಕ್ಕೆ ಅಗತ್ಯ ಇಂಧನ ಪೂರೈಸುವ ಭರವಸೆಯನ್ನು ಸೌದಿ ಅರೇಬಿಯಾ ನೀಡಿದೆ. ಈ ನಡುವೆ ಒಎನ್‌ಜಿಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (ಐಒಸಿಎಲ್) ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆ ಇಳಿಕೆಯಾಗಿದೆ. ಹೊಸ ಬೆಲೆಯ ಸರಾಸರಿ ದರ ಅಕ್ಟೋಬರ್ ಒಂದರಿಂದ ಇನ್ನು ಆರು ತಿಂಗಳು ಜಾರಿಯಲ್ಲಿರಲಿದೆ. ನೈಸರ್ಗಿಕ ಅನಿಲ ಬೆಲೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನಿಗದಿಪಡಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ಅನಿಲ ಬೆಲೆಗಳನ್ನು ಬದಲಾಯಿಸಲಾಗುತ್ತದೆ.

ಒಟ್ಟಾರೆ ಐದನೇ ಬಾರಿಗೆ ಏರಿಕೆಯಾಗಿದೆ

ಒಟ್ಟಾರೆ ಐದನೇ ಬಾರಿಗೆ ಏರಿಕೆಯಾಗಿದೆ

ಆಗಸ್ಟ್ 01ರಂದು ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಪ್ರತಿ ಸಿಲಿಂಡರ್ ಬೆಲೆಯಲ್ಲಿ 62.5 ರು ಇಳಿಕೆಯಾಗಿದ್ದು, 637 ರೂ.ನಿಂದ 574.5 ರೂ. ಗೆ ಇಳಿಕೆ ಮಾಡಲಾಗಿತ್ತು. ಜೂನ್ 02ರಂದು ಸಬ್ಸಿಡಿ ರಹಿತ ಗ್ಯಾಸ್ ಬೆಲೆ 25 ರೂ. ಏರಿಕೆಯಾಗಿತ್ತು. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರ್ ಬೆಲೆ 1.23 ರೂ.ಏರಿಕೆಯಾಗಿತ್ತು ಸತತ ನಾಲ್ಕನೇ ಬಾರಿಗೆ ಎಲ್ ಪಿಜಿ ಬೆಲೆ ಏರಿಕೆಯಾಗಿತ್ತು. ಇಗ ಒಟ್ಟಾರೆ ಐದನೇ ಬಾರಿಗೆ ಏರಿಕೆಯಾಗಿದೆ

ಕಳೆದ ವರ್ಷ ಬೆಲೆ ಇಳಿಕೆಯಾಗಿತ್ತು

ಕಳೆದ ವರ್ಷ ಬೆಲೆ ಇಳಿಕೆಯಾಗಿತ್ತು

ಕಳೆದ ವರ್ಷ ಡಿಸೆಂಬರ್ ಅವಧಿಗೆ ಹೋಲಿಸಿದರೆ ದರದಲ್ಲಿ 250ರು ಕಡಿಮೆ ಕಂಡು ಬರುತ್ತದೆ. ನವೆಂಬರ್ 2018ರಲ್ಲಿ ಎಲ್ ಪಿ ಜಿ ಸಿಲಿಂಡರ್ ದರ ದೆಹಲಿಯಲ್ಲಿ 939ರು ತನಕ ಏರಿತ್ತು. ಆದರೆ, ಈಗ ಯುಎಸ್ ಡಾಲರ್ ಹಾಗೂ ರುಪಾಯಿ ನಡುವಿನ ಬೆಲೆ ವ್ಯತ್ಯಾಸ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಆಧಾರವಾಗಿಟ್ಟುಕೊಂಡು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ನಿಗದಿ ಮಾಡಿವೆ. ಸಬ್ಸಿಡಿದಾರರು ವಾರ್ಷಿಕ ಗೃಹಬಳಕೆಯ 12 ಸಿಲಿಂಡರ್(14.2 ಕೆಜಿ ) ನಂತರ ಬಳಸುವ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಮೇಲೆ ಜಿಎಸ್ ಟಿ ಕೂಡಾ ಅನ್ವಯವಾಗಲಿದ್ದು, ಸಿಲಿಂಡರ್ ಬೇಲೆ ಏರಿಳಿತಕ್ಕೆ ಕಾರಣವಾಗಲಿದೆ.

ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ

ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+