4 ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದ ನೋಕಿಯಾ: 5.3, ಸಿ3, 125, 150

ನವದೆಹಲಿ, ಆಗಸ್ಟ್‌ 25: ನೋಕಿಯಾ ಇಂದು ನಾಲ್ಕು ಹೊಸ ಮೊಬೈಲ್‌ಗಳನ್ನ ಬಿಡುಗಡೆ ಮಾಡಿದೆ. ಈ ನಾಲ್ಕರಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಮತ್ತು ಎರಡು ಫೀಚರ್ ಫೋನ್‌ಗಳಾಗಿವೆ. ನೋಕಿಯಾ 5.3 ಅನ್ನು ಮಧ್ಯ ಶ್ರೇಣಿಯ ವಿಭಾಗದಲ್ಲಿ, ನೋಕಿಯಾ ಸಿ 3 ಬಜೆಟ್ಗೆ ಸ್ವಲ್ಪ ಹತ್ತಿರವಾಗಿದೆ ಮತ್ತು ನೋಕಿಯಾ 125 ಮತ್ತು ನೋಕಿಯಾ 150 ಫೀಚರ್ ಫೋನ್‌ಗಳಾಗಿವೆ.

Recommended Video

      DK Shivakumar, ಕನಕಪುರ ಬಂಡೆನು ಬಿಡಲಿಲ್ಲ ಕೊರೋನ! | Oneindia Kannada

      ನೋಕಿಯಾ 5.3 ಸೆಪ್ಟೆಂಬರ್ 1 ರಿಂದ ಭಾರತದಲ್ಲಿ ಲಭ್ಯವಾಗಲಿದೆ. 4 ಜಿಬಿ RAM ಮತ್ತು 64 ಜಿಬಿ ಇಂಟರ್‌ನಲ್ ಸ್ಟೋರೇಜ್ ಹೊಂದಿದ್ದು ಈ ಮೊಬೈಲ್‌ಗೆ 13,999 ರೂಪಾಯಿ ಬೆಲೆ ನಿಗದಿಯಾಗಿದೆ ಮತ್ತು 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ಮಾಡೆಲ್‌ಗೆ 15,499 ರೂಪಾಯಿ ಬೆಲೆಯಿದೆ.

      ಬಜೆಟ್ ಸಮೀಪದಲ್ಲಿರುವ ನೋಕಿಯಾ ಸಿ 3 ಮೊಬೈಲ್ 2 ಜಿಬಿ RAM ಹೊಂದಿದ್ದು 7,499 ರೂಪಾಯಿ ಮತ್ತು 3 ಜಿಬಿ RAM ರೂಪಾಂತರಕ್ಕೆ, 8,999 ರೂಪಾಯಿ ಬೆಲೆಯಿದೆ. ಎರಡೂ ಮಾಡೆಲ್‌ಗಳು 32 ಜಿಬಿ ಸ್ಟೋರೇಜ್ ಹೊಂದಿವೆ. ನೋಕಿಯಾ ಸಿ 3 ಸೆಪ್ಟೆಂಬರ್ 17 ರಿಂದ ಮಾರಾಟವಾಗಲಿದೆ.

      Nokia Launches 4 New Phones: Nokia 5.3, Nokia C3, Nokia 150, Nokia 125

      ಈ ಸಾಧನವು 5.99 ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 3,040 mAh ಬ್ಯಾಟರಿ ಇದೆ.

      ನೋಕಿಯಾ 150 ಮೊಬೈಲ್ 2,299 ರೂಪಾಯಿ ಆಗಿದ್ದು, ನೋಕಿಯಾ 125 ಬೆಲೆ 1,999 ರೂಪಾಯಿ. ಈಗಾಗಲೇ ಈ ಮೊಬೈಲ್ ಖರೀದಿದಾರರಿಗೆ ಲಭ್ಯವಿದೆ. ನೋಕಿಯಾ 150 ಮೀಡಿಯಾ ಟೆಕ್ ಚಿಪ್‌ನೊಂದಿಗೆ 2.4 ಇಂಚಿನ ಕ್ಯೂವಿಜಿಎ ಡಿಸ್‌ಪ್ಲೇ ಪಡೆಯುತ್ತದೆ. ಎರಡೂ ಸಾಧನಗಳು ಡ್ಯುಯಲ್ ಸಿಮ್ ಸಪೋರ್ಟ್ ಮತ್ತು ವೈರ್‌ಲೆಸ್ ಎಫ್‌ಎಂ ರೇಡಿಯೊವನ್ನು ಹೊಂದಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+