ಭಾರತೀಯ ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್, ನಿಫ್ಟಿ ಮತ್ತಷ್ಟು ಎತ್ತರಕ್ಕೆ ಜಿಗಿತ

ಮುಂಬೈ, ಜನವರಿ 12: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ಮತ್ತಷ್ಟು ಎತ್ತರಕ್ಕೆ ಜಿಗಿತ ಸಾಧಿಸಿದೆ. ಸೋಮವಾರವಷ್ಟೇ 49,000 ಗಡಿದಾಟಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 247 ಪಾಯಿಂಟ್ಸ್‌ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಏರಿಕೆ ಕಂಡಿದ್ದು, 78 ಪಾಯಿಂಟ್ಸ್‌ ಹೆಚ್ಚಳಗೊಂಡು 14,500ರ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 247.79 ಪಾಯಿಂಟ್ಸ್‌ ಅಥವಾ ಶೇಕಡಾ 0.50ರಷ್ಟು ಏರಿಕೆಗೊಂಡು 49,517.11 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 78.7 ಪಾಯಿಂಟ್ಸ್‌ ಹೆಚ್ಚಳಗೊಂಡು 14,563.45 ಪಾಯಿಂಟ್ಸ್‌ ತಲುಪಿದೆ.

ಇಂದು ಸುಮಾರು 1647 ಷೇರುಗಳು ಏರಿಕೆ ಸಾಧಿಸಿದ್ದು, 1387 ಷೇರುಗಳು ಕುಸಿತ ಕಂಡಿವೆ, ಮತ್ತು 158 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Nifty Ends Above 14,450: Sensex Gains 247 Points Led By Auto

ಟಾಟಾ ಮೋಟಾರ್ಸ್, ಗೇಲ್, ಈಚರ್ ಮೋಟಾರ್ಸ್, ಎಸ್‌ಬಿಐ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ, ನೆಸ್ಲೆ, ಎಚ್‌ಯುಎಲ್ ಮತ್ತು ಸನ್ ಫಾರ್ಮಾ ನಷ್ಟ ಅನುಭವಿಸಿದ ಷೇರುಗಳಾಗಿವೆ.

ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ನಿಫ್ಟಿ ಬ್ಯಾಂಕ್‌ನೊಂದಿಗೆ 6 ಪ್ರತಿಶತದಷ್ಟು ಏರಿಕೆಯಾದರೆ, ಆಟೋ, ಇನ್ಫ್ರಾ ಮತ್ತು ಎನರ್ಜಿ ತಲಾ 1 ರಷ್ಟು ಏರಿಕೆಯಾಗಿದೆ. ಆದರೆ, ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 1 ಮತ್ತು ಎಫ್‌ಎಂಸಿಜಿ ಸೂಚ್ಯಂಕ ಶೇ 0.5 ರಷ್ಟು ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+