ಸ್ವಿಗ್ಗಿ, ಜೋಮ್ಯಾಟೋ ಆರ್ಡರ್ ಮೇಲಿನ ಜಿಎಸ್‌ಟಿ ಭಾರ ಗ್ರಾಹಕರಿಗಿಲ್ಲ

ನವದೆಹಲಿ, ಸೆಪ್ಟೆಂಬರ್ 17: ಭಾರತದಲ್ಲಿ ಸ್ವಿಗ್ಗಿ ಮತ್ತು ಜೋಮ್ಯಾಟೋ ರೀತಿಯ ಕಂಪನಿಗಳು ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ 45ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ. ಪ್ರಸ್ತುತ ಸ್ವಿಗ್ಗಿ ಮತ್ತು ಜೋಮ್ಯಾಟೋ ಅಪ್ಲಿಕೇಷನ್ ಕಂಪನಿಗಳು ತೆರಿಗೆ ಸಂಗ್ರಹಣೆ ಕೇಂದ್ರಗಳಿಂದ ಜಿಎಸ್‌ಟಿ ಪಡೆದುಕೊಳ್ಳುತ್ತಿವೆ.

ಜಿಎಸ್‌ಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, "ಹೆಚ್ಚುವರಿಯಾಗಿ ಯಾವುದೇ ಹೊಸ ತೆರಿಗೆಗಳನ್ನು ಘೋಷಿಸಿಲ್ಲ. ಕೇವಲ ಜಿಎಸ್‌ಟಿ ಸಂಗ್ರಹಣಾ ಕೇಂದ್ರವನ್ನು ವರ್ಗಾಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

New GST Rules Impacted on Swiggy, Zomato. But Customers Wont need to Pay More

ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿಲ್ಲ ಎಂದು ಸ್ಪಷ್ಟನೆ:

"ನೀವು ಸಂಗ್ರಾಹಕರಿಂದ ಆಹಾರವನ್ನು ಆರ್ಡರ್ ಮಾಡಿದ್ದೀರಿ ಎಂದು ತಿಳಿದುಕೊಳ್ಳೋಣ. ಪ್ರಸ್ತುತದಲ್ಲಿ ರೆಸ್ಟೋರೆಂಟ್ ತೆರಿಗೆ ಪಾವತಿಸುತ್ತಿದೆ. ಆದರೆ ಕೆಲವು ರೆಸ್ಟೋರೆಂಟ್‌ಗಳು ತೆರಿಗೆ ಪಾವತಿಸುತ್ತಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈಗ ನೀವು ಸಂಗ್ರಹಾಕಾರರಿಗೆ ಆರ್ಡರ್ ಮಾಡಿದರೆ, ಗ್ರಾಹಕರಿಂದ ಸಂಗ್ರಹಿಸಿ ನೇರವಾಗಿ ಅಧಿಕಾರಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ. ಈ ಮೊದಲು ರೆಸ್ಟೋರೆಂಟ್ ಈ ಕಾರ್ಯವನ್ನು ಮಾಡುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿ ಹೆಚ್ಚುವರಿ ತೆರಿಗೆ ಹೇರುವುದಿಲ್ಲ," ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಕೆಲವು ಆದಾಯಗಳ ವಿಶ್ಲೇಷಣೆಯಲ್ಲಿ ಕೆಲವು ರೆಸ್ಟೋರೆಂಟ್‌ಗಳ ಕಡೆಯಿಂದ ತೆರಿಗೆ ವಂಚನೆ ಆಗುತ್ತಿರುವುದ ಬಗ್ಗೆ ಅವರು ವಿವರಿಸಿದರು. ವಿಶ್ಲೇಷಣೆ - ಡೆಲಿವರಿ ಆಪ್‌ಗಳು ಮತ್ತು ಕೆಲವು ಹರಿಯಾಣ ರೆಸ್ಟೋರೆಂಟ್ ಸೇವೆಗಳು ಸಲ್ಲಿಸಿದ ರಿಟರ್ನ್ಸ್ - ಪೂರೈಕೆದಾರರಿಗೆ ತೆರಿಗೆಯ ವಹಿವಾಟಿನ ಅಂತರವನ್ನು ತೋರಿಸಿದೆ, ಅಲ್ಲಿ ಟಿಸಿಎಸ್ ಅನ್ನು ವಿತರಣಾ ಅಪ್ಲಿಕೇಶನ್‌ನಿಂದ ಕಡಿತಗೊಳಿಸಲಾಗುತ್ತದೆ, ಅಂತಹ ಪೂರೈಕೆದಾರರು ಘೋಷಿಸಿದ ವಹಿವಾಟುಗಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+