ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಮೇಲೆ 100 ಕೋಟಿ ಹೊರೆ ಹೊರಿಸಲಿದೆ 100ರ ಹೊಸ ನೋಟು

|
Google Oneindia Kannada News

ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ 100 ಮುಖಬೆಲೆಯ ಚಿಕ್ಕಗಾತ್ರದ ಹೊಸ ಬೂದು ಬಣ್ಣದ ನೋಟುಗಳನ್ನು ಪರಿಚಯಿಸುತ್ತಿದೆ. ನೋಡಲು ಆಕರ್ಷಕವಾಗಿ ಕಾಣುವ ಈ ನೋಟುಗಳು ಬ್ಯಾಂಕುಗಳ ಮೇಲೆ ಸುಮಾರು ಒಟ್ಟಾರೆ 100 ಕೋಟಿ ರೂ. ಹೊರೆ ಹೊರಿಸಲಿವೆ.

ದೇಶದಲ್ಲಿ ಸುಮಾರು 2.4 ಲಕ್ಷ ಎಟಿಎಂ ಯಂತ್ರಗಳಿದ್ದು, ಈ ಎಲ್ಲ ಯಂತ್ರಗಳಲ್ಲಿಯೂ ನೂರರ ಹೊಸ ನೋಟುಗಳು ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನವನ್ನು ಬದಲಿಸಬೇಕಾದ ಅಗತ್ಯವಿದೆ. ಇವುಗಳಿಗೆ 100 ಕೋಟಿಯಷ್ಟು ಹಣ ವೆಚ್ಚವಾಗಬಹುದು ಎನ್ನುತ್ತಾರೆ ಎಟಿಎಂ ಆಪರೇಷನ್ ಉದ್ದಿಮೆಯ ತಂತ್ರಜ್ಞರು.

ಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆ

200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವನ್ನು ಇನ್ನೂ ಮುಗಿಸುವ ಹಂತದಲ್ಲಿರುವ ತಂತ್ರಜ್ಞರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ.

new 100 rs note atm recalibrate operators

'ನಾವು 100 ಮುಖಬೆಲೆಯ ಹೊಸ ನೋಟುಗಳು ಲಭ್ಯವಾಗುವಂತೆ ಮಾಡಲು ಎಟಿಎಂ ತಂತ್ರಜ್ಞಾನದಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ.

ದೇಶದಾದ್ಯಂತ ಸುಮಾರು 2.4 ಲಕ್ಷ ಯಂತ್ರಗಳಿದ್ದು, ಈ ಎಲ್ಲ ಯಂತ್ರಗಳಲ್ಲಿಯೂ ಬದಲಾವಣೆ ಮಾಡಬೇಕಿರುವುದರಿಂದ ಈ ಕಾರ್ಯಕ್ಕೆ ಅಂದಾಜು 100 ಕೋಟಿ ರೂ. ವೆಚ್ಚ ತಗಲಬಹುದು' ಎಂದು ಎಫ್‌ಎಸ್‌ಎಸ್ ಸಂಸ್ಥೆಯ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ತಿಳಿಸಿದ್ದಾರೆ.

ನೂರರ ಮುಖಬೆಲೆಯ ಹಳೆಯ ಮತ್ತು ಹೊಸ ಎರಡೂ ಬಗೆಯ ನೋಟುಗಳು ಲಭ್ಯವಾಗಲಿವೆ. ಇವೆರಡನ್ನೂ ಎಟಿಎಂನಲ್ಲಿ ಲಭಿಸುವಂತೆ ಮಾಡುವುದು ದೊಡ್ಡ ಸವಾಲು.

ಎಟಿಎಂಗಳಲ್ಲಿ ಹಳೆಯ ನೋಟುಗಳ ಮುಂದುವರಿಕೆ, ಹೊಸ ನೋಟುಗಳ ಬಿಡುಗಡೆ ಹಾಗೂ ಅವುಗಳ ಲಭ್ಯತೆಯು ಎಟಿಎಂ ತಂತ್ರಜ್ಞಾನದ ಮರುಜೋಡಣೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದರು.

ನೂರರ ಹಳೆಯ ನೋಟುಗಳ ವಿತ್‌ಡ್ರಾದಿಂದ ಉಂಟಾಗುವ ಅಂತರವನ್ನು ಹೊಸ ನೋಟುಗಳು ತುಂಬಲು ವಿಫಲವಾದರೆ, ಈ ಅಸಮತೋಲನ ನಿವಾರಣೆಯಾಗುವವರೆಗೂ ಎಟಿಎಂಗಳಲ್ಲಿ ನೂರರ ನೋಟುಗಳ ಹಂಚಿಕೆಗೆ ಹೊಡೆತ ಬೀಳುತ್ತದೆ.

200 ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ. ವ್ಯವಸ್ಥಿತ ಯೋಜನೆ ಮಾಡಿಕೊಳ್ಳದೆ ಇದ್ದರೆ 100ರ ಮುಖಬೆಲೆಯ ನೋಟುಗಳನ್ನು ಅಳವಡಿಸುವ ಕೆಲಸವೂ ವಿಳಂಬವಾಗುತ್ತದೆ ಎಂದು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

English summary
The ATM operators said the introduction of a new 100 Rs note create many challenges and an investment of 100 crores will required to recalibrate he machines. ಎಟಿಎಂ ಮೇಲೆ 100 ಕೋಟಿ ಹೊರೆ ಹೊರಿಸಲಿದೆ 100ರ ಹೊಸ ನೋಟು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X