ಅಂಬಾನಿ ದೇಶದ ದೈತ್ಯ ನೆಟ್ವರ್ಕ್ ಜಿಯೋ ಲಾಂಚ್ ಮಾಡಿರುವುದರ ಹಿಂದಿನ ಅಸಲಿ ರಹಸ್ಯವೇನು?-ಇಲ್ಲಿದೆ ಮಾಹಿತಿ
ಸದ್ಯ ಇದೀಗ ದೇಶದಲ್ಲೇ ದೊಡ್ಡ ನೆಟ್‌ವರ್ಕ್ ಆಗಿ ಗುರುತಿಸಿಕೊಂಡಿರುವುದು ಜಿಯೋ ಆಗಿದೆ. ಆದರೆ ಅಂಬಾನಿಯವರು ಈ ನೆಟ್‌ವರ್ಕ್ ಆರಂಭ ಮಾಡಲು ಪ್ರಮುಖ ಕಾರಣ ಏನು. ಇದರ ಹಿಂದಿರುವ ರಹಸ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಿಯೋ ನೆಟ್‌ವರ್ಕ್‌ನ ಸಿಮ್‌ಗಳನ್ನಯ ಆರಂಭದಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಮ್ ನೀಡಲಾಗಿತ್ತು. ಆಗ ಬೇರೆ ಬೇರೆ ನೆಟ್‌ವರ್ಕ್‌ಗಳ ಗ್ರಾಹಕರೆಲ್ಲ ಜಿಯೋದತ್ತ ಮುಖ ಮಾಡಲು ಆರಂಭಿಸಿದರು. ಸ್ವಲ್ಪ ದಿನಗಳ ಬಳಿಕ ಹಣಕ್ಕೆ ಮಾರಾಟ ಮಾಡಲಾಯಿತು. ಕಡಿಮೆ ದರದಲ್ಲಿ ಅನ್‌ಲಿಮಿಟ್ ಇಂಟರ್‌ನೆಟ್, ಕಾಲಿಂಗ್, ಮೆಸೆಜ್‌ಗಳಿಗೂ ಸಿಗುವಂತೆ ಕೂಡ ಮಾಡಲಾಯಿತು. ಆಗಿನಿಂದ ಜಿಯೇ ಒಂದು ದೊಡ್ಡ ಬ್ರಾಂಡ್ ಆಗಿ ಬೆಳೆಯುತ್ತಾ ಬಂದಿತು. ಆದರೆ ಈ ನೆಟ್‌ವರ್ಕ್ ಆರಂಭಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಭಾರತದಲ್ಲಿ ಜಿಯೋ ಕ್ರಾಂತಿ ಮಾಡಿದೆ. ಮೊದಲು ಫೋನ್ ಮಾಡಬೇಕೆಂದರೆ ದೂರದ ಎತ್ತರದ ಟವರ್ ಇರುವ ಪ್ರದೇಶಕ್ಕೆ ಹೋಗಬೇಕಿತ್ತು. ಆದರೆ ಇದೀಗ ಜಿಯೋ ಹಳ್ಳಿಗಳ ಮೂಲೆ ಮೂಲೆಯನ್ನೂ ತಲುಪಿದೆ. ಈಗ ಕುಗ್ರಾಮದ ಯುವಕನೂ ಸಹ ಯೂಟ್ಯೂಬ್‌ನಲ್ಲಿ ಚಾನೆಲ್ ತೆರೆದುಕೊಂಡು ದುಡಿಮೆಯತ್ತ ವಾಲಿದ್ದಾನೆ.
ಈ ನೆಟ್‌ವರ್ಕ್ ಇಲ್ಲದಿದ್ದರೆ ಮಹಾಮಾರಿ ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ಹಲವರಿಗೆ ಸಮಸ್ಯೆ ಆಗುತ್ತಿತ್ತು. ಆದರೆ ಜಿಯೋ ತುಂಬಾ ಜನರ ಬದುಕನ್ನು ಬದಲಾಯಿಸಿದೆ. ಇಂತಹ ಈ ಜಿಯೋ ಅನ್ನು ರಿಲಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಆರಂಭ ಮಾಡಲು ಕಾರಣ ಅವರ ಮಗಳಿಗೆ ನೆಟ್‌ವರ್ಕ್ ಸಮಸ್ಯೆ ನಿವಾರಿಸಲು ಆಗಿದೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಭಾರತದ ಮೊಬೈಲ್ ಬ್ರಾಡ್‌ಬ್ಯಾಂಡ್ ಡೇಟಾ ಬಳಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಟೆಲಿಕಾಂ ದೈತ್ಯ ಜಿಯೋ ಹಿಂದಿನ ಮುಖ್ಯವಾಗಿರುವ ಮುಖೇಶ್ ಅಂಬಾನಿ, 2018ರಲ್ಲಿ ಲಂಡನ್‌ನಲ್ಲಿ ನಡೆದ ಫೈನಾನ್ಶಿಯಲ್ ಟೈಮ್ಸ್ ಆರ್ಸೆಲರ್ ಮಿತ್ತಲ್ ಬೋಲ್ಡ್‌ನೆಸ್ ಇನ್ ಬ್ಯುಸಿನೆಸ್ ಅವಾರ್ಡ್ಸ್ ಸಮಯದಲ್ಲಿ ತಮ್ಮ ಭಾಷಣದಲ್ಲಿ ಆಸಕ್ತಿದಾಯಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2011ರಲ್ಲಿ ಜಿಯೋ ಪ್ರಾರಂಭಿಸಲು ತಮ್ಮ ಮಗಳು ಇಶಾ ಕಾರಣ. ಇದು ಆಕೆಯ ಕಲ್ಪನೆ ಎಂದಿದ್ದಾರೆ ಮುಖೇಶ್ ಅಂಬಾನಿ. ಮಗಳು ಆಗ ಯೇಲೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಳು ಮತ್ತು ರಜೆಗಾಗಿ ಮನೆಗೆ ಮರಳಿದ್ದಳು. ಆಗ ಮನೆಯಲ್ಲಿದ್ದ ಕಳಪೆ ನೆಟ್‌ವರ್ಕ್ ಆಕೆಯ ಹತಾಶೆಗೆ ಕಾರಣವಾಯಿತು. ಮನೆಯಲ್ಲಿರುವ ಸಮಯದಲ್ಲಿ ಕೆಲ ಕೋರ್ಸ್‌ಗಳನ್ನು ಮುಗಿಸಿಕೊಳ್ಳಲು ಬಯಸಿದ್ದ ಇಶಾಗೆ ಇಂಟರ್‌ನೆಟ್‌ದೇ ದೊಡ್ಡ ಸಮಸ್ಯೆಯಾಯಿತು. ಆಕೆ ಈ ವಿಷಯವನ್ನು ತಂದೆಗೆ ಹೇಳಿಕೊಂಡಳು.
ಮಗಳ ಈ ಸಮಸ್ಯೆ ಕೇಳಿದ ಅಂಬಾನಿ, ಕೇವಲ ಮಗಳಿಗಲ್ಲ, ಕೋಟ್ಯಂತರ ಭಾರತೀಯರಿಗೆ ಕೈಗೆಟುಕುವ, ಹೆಚ್ಚಿನ ವೇಗದ ಇಂಟರ್‌ನೆಟ್‌ಟ್ ಒದಗಿಸಲು ಜಿಯೋ ಲಾಂಚ್ ಮಾಡಿದರು. ಈ ಭಾಷಣದಲ್ಲಿ ಮುಖೇಶ್ ಅವರ ಮಕ್ಕಳಾದ ಇಶಾ ಮತ್ತು ಆಕಾಶ್ ಅವರು ಅಸಾಧಾರಣವಾದ ಸೃಜನಶೀಲ, ಮಹತ್ವಾಕಾಂಕ್ಷೆಯ ಮತ್ತು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಅಸಹನೆ ಹೊಂದಿರುವ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ ಅಂತಾ ಸುವರ್ಣ ನ್ಯೂಸ್‌ನಲ್ಲಿ ವರದಿಯಾಗಿದೆ.












Click it and Unblock the Notifications