ಬೆಂಗಳೂರಿಗೆ ಬಂದ ದೇಶದ ಮೊದಲ 'ಮೊಟೊ ಕೇರ್'
ಬೆಂಗಳೂರು, ಏ.1: ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವುದಕ್ಕೆ ನಮ್ಮ ಮೊದಲ ಆದ್ಯತೆ ಮತ್ತು ಅತ್ಯುತ್ತಮ ಗ್ರಾಹಕ ಸೇವೆ ಇದರ ಒಂದು ಭಾಗ. ಹೀಗಾಗಿ ಭಾರತದಲ್ಲಿ ಮೊಟ್ಟ ಮೊದಲ 'ಮೊಟೊ ಕೇರ್' ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಮೊಟೊರೊಲಾ ಸಂಸ್ಥೆ ಹೇಳಿದೆ. ಬೆಂಗಳೂರಿನ ಜಯನಗರದಲ್ಲಿ ಈ ವಿಶಿಷ್ಟ ಕಸ್ಟಮರ್ ಕೇರ್ ಸೆಂಟರ್ ಆರಂಭಗೊಂಡಿದೆ.
ಬೆಂಗಳೂರಿನ ಜಯನಗರದಲ್ಲಿ ಆರಂಭಗೊಂಡಿರುವ ಈ ಕೇಂದ್ರ ಗ್ರಾಹಕರಿಗೆ ಅತ್ಯುತ್ತಮ ಸೇವೆ ಮತ್ತು ಬೆಂಬಲ ನೀಡಲಿದೆ. ಇಲ್ಲಿನ 'ಅನುಭವ ವಲಯ' ಗ್ರಾಹಕರಿಗೆ ಹೊಚ್ಚ ಹೊಸ ಉತ್ಪನ್ನಗಳನ್ನು ಕೈಯಲ್ಲಿ ಹಿಡಿದು ನೋಡುವ ಅವಕಾಶ, ಅನುಭವ ನೀಡಲಿದೆ. ಇದು ನಮಗೆ ಭಾರತೀಯ ಗ್ರಾಹಕರು ಎಷ್ಟು ಮಹತ್ವ ಮತ್ತು ನಾವೆಷ್ಟು ಆದ್ಯತೆ ನೀಡುತ್ತೇವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದು ಮೊಟೊರೊಲಾ ಹೇಳಿದೆ.
ಕೇಂದ್ರದ ವಿಳಾಸ: Moto Care Centre, ವಿಜಯ ಜ್ಯೂನಿಯರ್ ಕಾಲೇಜ್ ಎದುರು, 4ನೇ ಬ್ಲಾಕ್, 11ನೇ ಮುಖ್ಯರಸ್ತೆ, ಬೆಂಗಳೂರು -560 011.
ಸುಮಾರು 3000 ಚದರ ಅಡಿ ವಿಸ್ತೀರ್ಣದ ಕೇಂದ್ರ ಅತ್ಯಾಧುನಿಕ ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರಿಗೆ ಮೊಟೊರೋಲಾದ ಭಿನ್ನ ಅನುಭವ ನೀಡಲಿದೆ. ದೇಶದ ಮೊದಲ ಮೊಟೊ ಕೇರ್ ಕೇಂದ್ರದ ಇನ್ನಷ್ಟು ವಿವರ ಮುಂದಿದೆ...

'ಮೊಟೊ ಕೇರ್' ಸೇವಾ ಬೆಂಬಲ
* ಸೇವೆ ಮತ್ತು ಬೆಂಬಲ ವಲಯ ಗ್ರಾಹಕರಿಗೆ ಉತ್ಕೃಷ್ಟ ಸೇವೆಯ ಅನುಭವ ನೀಡುತ್ತದೆ. ಅತ್ಯುತ್ತಮ ತರಬೇತಿ ಹೊಂದಿದ ಸಿಬ್ಬಂದಿ ಹೊಂದಿದೆ.
* ಸಾಫ್ಟ್ ವೇರ್ ಅಪ್ಡೇಟ್ ಮತ್ತು ಸಾಧನಗಳ ಹಾರ್ಡ್ ವೇರ್ ರಿಪೇರಿ ಮತ್ತು ಗ್ರಾಹಕರ ಅಗತ್ಯತೆಗಳನ್ನು ಪೂರೈಸಲಿದೆ.

ಹೊಸ ಅನುಭವ ವಲಯ
ಈ ವಲಯ ಗ್ರಾಹಕರಿಗೆ ಉತ್ಪನ್ನಗಳ ಅನುಭವ ಪಡೆಯುವ ಅವಕಾಶ ನೀಡುತ್ತದೆ. ಇದು ನಮ್ಮ ಮೊಟೊ ಎಕ್ಸ್ (ಎಲ್ಲ ಆವೃತಿಗಳು), ಮೊಟೊ ಜಿ, ಮೊಟೊ ಇ, ಮೊಟೊ ಟರ್ಬೊ, ಮೊಟೊ ಗೂಗಲ್ ನೆಕ್ಸಸ್ ಮತ್ತು ಮೊಟೊ 360 ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ.
ಈ ವಲಯ ನಮ್ಮ ಎಕ್ಸ್ ಕ್ಲೂಸಿವ್ ಪಾಲುದಾರ ಫ್ಲಿಫ್ ಕಾರ್ಟ್ ಮೂಲಕ ಆನ್‍ಲೈನ್ ಆರ್ಡರ್ ಮಾಡುವ ಅವಕಾಶ ನೀಡುತ್ತದೆ. ಸಿಬ್ಬಂದಿ ಗ್ರಾಹಕರಿಗೆ ಮಾಗದರ್ಶನ ನೀಡುತ್ತಾರೆ.
ಹೆಚ್ಚುವರಿ ಗ್ರಾಹಕ ಸೇವಾ ಸೌಲಭ್ಯಗಳು
* ನಿಮ್ಮ ಸಾಧನದಲ್ಲಿ ಮೊಟೊಕೇರ್ App ಅಥವಾ ಗ್ರಾಹಕ ಸಹಾಯವಾಣಿ
* ಮೊಟೊ ಕೇರ್ ಆನ್ ವೀಲ್ಸ್ ಪ್ರಾಯೋಗಿಕ ಯೋಜನೆ ದಿಲ್ಲಿಯಲ್ಲಿ ಆರಂಭಗೊಂಡಿದೆ.
* ಈ ಯೋಜನೆಯ ಭಾಗವಾಗಿ ಖರೀದಿಸಿದ 30 ದಿನಗಳವರೆಗೆ ಮೊಟೊ ವ್ಯಾನ್ ಗಳು ಗ್ರಾಹಕರ ಮನೆಬಾಗಿಲಿಗೆ ಬಂದು ಕೆಲ ಘಂಟೆಗಳಲ್ಲಿ ಸೇವಾ ಕುಂದುಕೊರತೆಗಳನ್ನು ನೀಗಿಸಲಿದ್ದಾರೆ.
* ಆನ್‍ಲೈನ್ ಪೋರ್ಟಲ್ ಮೂಲಕ ಸೇವೆ
* ಭಾರತದಲ್ಲಿ 150ಕ್ಕೂ ಹೆಚ್ಚು ರಿಪೇರಿ ಕೇಂದ್ರಗಳು. ಅದರ ಪೂರ್ತಿ ಪಟ್ಟಿ motorola.com ತಾಣದಲ್ಲಿದೆ.

ಮೊಟೊರೋಲಾ ಮೊಬಿಲಿಟಿ ಕುರಿತು
ಮೊಟೊರೋಲಾ ಮೊಬಿಲಿಟಿ ಕೇಂದ್ರ ಜನರನ್ನು ಮೊಬೈಲ್ ಇಂಟರ್ನೆಟ್ ನೊಂದಿಗೆ ಕೈಗೆಟಕುವ ದರದ ಸಾಧನಗಳೊಂದಿಗೆ ಸಂಪರ್ಕಿಸುತ್ತದೆ. ಗುಣಮಟ್ಟ, ಅನುಭವಗಳೊಂದಿಗೆ ರಾಜಿಯಾಗುವುದಿಲ್ಲ.
ಜಯನಗರದಲ್ಲಿನ ಗ್ರಾಹಕರಿಗೆ ನೇರ ಸೇವೆ ಒದಗಿಸುವುದರ ಜೊತೆಗೆ ಮೊಟೊರೋಲಾ ಹತ್ತಿರದ ಪ್ರದೇಶಗಳಾದ ಎಂಜಿ ರಸ್ತೆ, ಕೋರಮಂಗಲ, ಇಂದಿರಾ ನಗರ ಮತ್ತು ರಾಜೇಂದ್ರ ನಗರದ ಗ್ರಾಹಕರಿಗೂ ಇನ್ನಷ್ಟು ಹತ್ತಿರವಾಗಲಿದೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications