ನಿದ್ದೆಯಲ್ಲಿದ್ದ ಉದ್ಯೋಗಿಯನ್ನು ಬಡಿದೆಬ್ಬಿಸಿದ ಮೀನು

ಬೆಂಗಳೂರು, ಡಿ. 13 : ಕೆಲವರು ಕುಂಭಕರ್ಣನ ವಂಶದಲ್ಲಿ ಹುಟ್ಟಿರುತ್ತಾರೆ. ಅವರು ಮನೆಯಲ್ಲಿ ಇರಲಿ ಕಚೇರಿಯಲ್ಲಿ ಕೂಡ ನಿದ್ದೆ ಗುಂಗಿನಲ್ಲಿಯೇ ಇರುತ್ತಾರೆ. ಕೆಲಸವೂ ಅಂಥದೇ ಇರುತ್ತದೆ, ಇವರೂ ಅಂಥವರೇ ಇರುತ್ತಾರೆ. ಅವರನ್ನು ಎಬ್ಬಿಸುವುದು ಬಲು ಕಷ್ಟ. ಈ ಉದ್ಯೋಗಿಯ ಕಥೆಯೂ ಅದೇ. ಈ ನಿದ್ದೆಬಡಕ ಉದ್ಯೋಗಿಯನ್ನು ಕಡೆಗೂ ಎಚ್ಚರಿಸಿದ್ದು ಯಾರು ಗೊತ್ತಾ?

ಅದು ಒಂದು ಮೀನು! ಹೌದು, ಅದೊಂದು ಮೀನು. ಅಂತಿಂಥ ಮೀನಲ್ಲ, ಮಾತಾಡುವ ಮೀನು. ಆತನ ಲಂಚ್ ಬಾಕ್ಸ್ ನಲ್ಲಿದ್ದ ಆತನ ಹೊಟ್ಟೆ ಸೇರಬೇಕಾಗಿದ್ದ ಮೀನೊಂದು ಆ ಕುಂಭಕರ್ಣ ಉದ್ಯೋಗಿಯನ್ನು ಎಚ್ಚರಿಸಿದ್ದು ಮಾತ್ರವಲ್ಲ, ಬೇರೆ ಹೆಚ್ಚು ಲಾಭ ನೀಡುವ ಕೆಲಸ ಹುಡುಕಿಕೊಳ್ಳು ಎಂದು ಉಪದೇಶವನ್ನೂ ನೀಡಿತು.

ಮೀನಿನ ಮಾತು ಕೇಳಿ ಆ ಉದ್ಯೋಗಿಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ಹೌದಲ್ಲ, ವೃತ್ತಿಗೆ ಸಹಕಾರಿಯಾಗದ, ಹೆಚ್ಚು ಹಣವನ್ನೂ ತಂದುಕೊಡದ ಕೆಲಸದಲ್ಲಿ ಎಷ್ಟೊಂದು ದಿನಗಳಿಂದ ಕಾಲ ವ್ಯರ್ಥ ಮಾಡಿದೆನಲ್ಲ ಎಂದು ಆತ ಅಚ್ಚರಿಗೊಂಡಿದ್ದ. ಆತನಿಗೆ ತನ್ನ ಕಾಲಹರಣದ ಬಗ್ಗೆ, ಕೆಲಸಕ್ಕೆ ಬಾರದ ಉದ್ಯೋಗದ ಬಗ್ಗೆ ಜ್ಞಾನೋದಯವಾಗಿತ್ತು. [ಒನ್ಇಂಡಿಯಾದಿಂದ ಉದ್ಯೋಗ ಸೇವೆ]

Monster Fish: Talking fish gives man a reality check

ಮೀನಿನ ಉದ್ದೇಶವೂ ಅದೇ ಆಗಿತ್ತು. ಆ ಉದ್ಯೋಗಿಯನ್ನು ಬಡಿದೆಬ್ಬಿಸಿ ಆತನಲ್ಲಿ ವೃತ್ತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು. ಉದ್ಯೋಗಿಗೆ ಕೂಡ ಇದರ ಅಗತ್ಯವಿತ್ತು. ಮೀನಿನ ಮಾತು ಕೇಳಿ ಆ ಉದ್ಯೋಗಿ ನಿದ್ದೆಯಿಂದ ಎದ್ದು ಹೊಸ ವೃತ್ತಿಯನ್ನೂ ಹುಡುಕಿಕೊಂಡ.

ಮೀನು ನಿದ್ದೆಯಲ್ಲಿದ್ದ ಉದ್ಯೋಗಿಯನ್ನು ಎಬ್ಬಿಸಿದ ವಿಡಿಯೋ ಯಾವ ಪರಿ ಜಾಲತಾಣದಲ್ಲಿ ಹಬ್ಬಿದೆಯೆಂದರೆ, ಇದು ಆ ಉದ್ಯೋಗಿಯಂತೆಯೆ ನಿದ್ದೆಯಲ್ಲಿ ಕಾಲ ಕಳೆಯುತ್ತ ವ್ಯರ್ಥ ಜೀವನ ನಡೆಸುತ್ತಿದ್ದ ನೂರಾರು ಯುವಕರನ್ನು ಬಡಿದೆಬ್ಬಿಸಿದೆ, ಅವರಲ್ಲಿ ವೃತ್ತಿಯ ಬಗ್ಗೆ ಜಾಗೃತಿ ಮೂಡಿಸಿದೆ.

ಆ ಮೀನಿಗೆ ಕೆಲವರು 'ಸಾಲ್ಮನ್ ರಶ್ದೀ' ಎಂದು ಕರೆದಿದ್ದರೆ, ಕೆಲವರು 'ತೂನಾ ಪಾಟೇಕರ್' ಎಂದು ಹೆಸರಿಟ್ಟಿದ್ದಾರೆ. ಆದರೆ, ಆ ಮೀನಿನ ನಿಜವಾದ ಹೆಸರು ಇನ್ನೂ ನಿಗೂಢವಾಗಿಯೇ ಉಳಿದಿದೆ. ನೀವೂ ಬೇಕಾದರೆ ಇಲ್ಲಿರುವ ಈ ವಿಡಿಯೋವನ್ನು ನೋಡಿ, ಅಲ್ಲಿ ಏನಾಗಿದೆ ಎನ್ನುವುದನ್ನು ನೋಡಿರಿ, ಜಾಗೃತರಾಗಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+