ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್20ರಿಂದ ಟಿವಿ, ಫ್ರಿಜ್, ಫೋನ್ ಆನ್ಲೈನ್ ಖರೀದಿ ಶುರು

|
Google Oneindia Kannada News

ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಎರಡನೇ ಅವಧಿಯಲ್ಲಿ ಏಪ್ರಿಲ್ 20ರ ನಂತರ ಇ ಕಾಮರ್ಸ್ ಸಂಸ್ಥೆಗಳಿಗೆ ವಿನಾಯತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಯಲ್ಲಿ ಹೇಳಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಸೇವಾ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.

ಏಪ್ರಿಲ್ 20ರ ನಂತರ ಇ ಕಾಮರ್ಸ್ ವೆಬ್ ತಾಣಗಳ ಸೇವೆ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಆನ್ ಲೈನ್ ಶಾಪಿಂಗ್ ತಾಣಗಳದ ಅಮೆಜಾನ್, ಫ್ಲಿಪ್ ಕಾರ್ಟ್ ಮುಂತಾದ ತಾಣಗಳ ಸೇವೆ ಲಭ್ಯವಿರುವುದಿಲ್ಲ.

ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು! ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!

ಎಲೆಕ್ಟ್ರಾನಿಕ್ ಸಾಮಾಗ್ರಿಗಳಾದ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮುಂತಾದವು ಏಪ್ರಿಲ್ 20ರ ನಂತರ ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.

Mobiles, TVs, refrigerators to be available on e-commerce platforms from April 20

ಕರ್ನಾಟಕದಲ್ಲಿ ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ಮುಂದುವರೆಸಬಹುದಾಗಿದೆ.

ಕೊರೊನಾ ಲಾಕ್‌ಡೌನ್: ಮೇ 3ರ ವರೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದು ಕೊರೊನಾ ಲಾಕ್‌ಡೌನ್: ಮೇ 3ರ ವರೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದು

ಆದರೆ, ಆದೇಶದಲ್ಲಿ ಸೂಚಿಸಿದಂತೆ, ದಿನಸಿ, ಡೆಲವರಿ ಬಾಯ್ಸ್, ಟೆಲಿಕಾಂ, ವೈದ್ಯಕೀಯ, ಡೇಟಾ ಸೆಂಟರ್, ಬ್ಯಾಂಕ್, ವಿಮೆ, ಕೆಲವು ಸೆಕ್ಯುರಿಟಿ ಏಜೆನ್ಸಿ ಕಾರ್ಯ ನಿರ್ವಹಿಸಲು ಅನುಮತಿ ಇದ್ದು ,ಎಲ್ಲರಿಗೂ ಪಾಸ್ ಅಗತ್ಯವಿದೆ. ಈಗ ಆನ್ ಲೈನ್ ನಲ್ಲಿ ಇ ಪಾಸ್ ವಿತರಣೆ ಆರಂಭವಾಗಿದೆ. ಇದಲ್ಲದೆ ಎಮರ್ಜೆನ್ಸಿ ಪಾಸ್ ಪಡೆದುಕೊಳ್ಳಬಹುದು. ಸಾಮಾಗ್ರಿ ವಿತರಣೆ ಮಾಡುವ ವಾಹನದಲ್ಲಿ ಮೂವರಿಗೆ ಒಮ್ಮೆಗೆ ತೆರಳಲು ಅನುಮತಿ ಇದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

English summary
The government on Thursday allowed the sale of mobile phones, televisions, refrigerators, laptops and stationary from April 20 during the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X