ಇನ್ನು ಮುಂದೆ ಮಕ್ಕಳೇ ಉಳಿತಾಯ ಖಾತೆ ತೆರೆಯಬಹುದು!

Minors over 10 years can operate bank
ಮುಂಬೈ, ಮೇ. 7: ಇನ್ನು ಮುಂದೆ ಹತ್ತು ವರ್ಷ ದಾಟಿದ ಮಕ್ಕಳು ಮನೆಯ ಹಿರಿಯರನ್ನು ಅವಲಂಬಿಸದೇ ಸ್ವತ: ಉಳಿತಾಯ ಖಾತೆಯನ್ನು ತೆರೆಯಬಹುದು. ಸ್ವತಂತ್ರವಾಗಿಯೇ ಖಾತೆಯನ್ನು ನಿರ್ವಹಿಸಬಹುದು!

ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ಮಹತ್ವದ ಸೂಚನೆಯನ್ನು ಹೊರಡಿಸಿದ್ದು, 10 ವರ್ಷ ದಾಟಿದ ಮಕ್ಕಳು ಬ್ಯಾಂಕಿಂಗ್‌ ವಹಿವಾಟು ನಡೆಸಲು ಸಮರ್ಥರಿದ್ದಾರೆ. ಇಂಟರ್‌ನೆಟ್‌ ಬ್ಯಾಂಕಿಂಗ್‌, ಚೆಕ್‌ ಬುಕ್‌, ಎಟಿಎಂ ಸೇರಿದಂತೆ ಬ್ಯಾಂಕ್‌ನ ಸೇರಿದಂತೆ ಇತರೆ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಪಡೆಯಲು ಅರ್ಹರು ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ ಈ ಸಂಬಂಧ ಎಲ್ಲಾ ಬ್ಯಾಂಕುಗಳಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಇಲ್ಲಿಯವರೆಗೆ 18 ವರ್ಷ ಒಳಗಿನ ಅಪ್ರಾಪ್ತ ವಯಸ್ಕರು ತಾಯಿಯನ್ನು ಪೋಷಕರು ಎಂದು ಪರಿಗಣಿಸಿ ಸ್ಥಿರ ಠೇವಣಿ ಅಥವಾ ಉಳಿತಾಯ ಖಾತೆಯನ್ನು ತೆರೆಯಬೇಕಿತ್ತು. ಈಗ ಈ ನಿಯಮಾವಳಿಗೆ ತಿದ್ದುಪಡಿ ತಂದಿದ್ದು ಮಕ್ಕಳು ಸ್ವತಂತ್ರವಾಗಿ ಉಳಿತಾಯ / ಮರುಕಳಿಸುವ / ಸ್ಥಿರ ಖಾತೆಯನ್ನು ತೆರೆಯಬಹುದಾಗಿದೆ.[ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]

ಒಂದು ವೇಳೆ ಮಕ್ಕಳ ಖಾತೆಗಳನ್ನು ಫೋಷಕರು ನಿರ್ವ‌ಹಿಸುತ್ತಿದ್ದರೆ, ಇನ್ನು ಮುಂದೆ ಎಲ್ಲ ವ್ಯವಹಾರಗಳ ಖಾತರಿಗಾಗಿ ಮಕ್ಕಳ ಸಹಿ ಬೇಕಾಗುತ್ತದೆ. ಇದಕ್ಕಾಗಿ ಮಕ್ಕಳ ಸಹಿ ದಾಖಲಿಸಿಕೊಳ್ಳುವಂತೆಯೂ ಆರ್‌ಬಿಐ ಬ್ಯಾಂಕುಗಳಿಗೆ ಸೂಚಿಸಿದೆ.[ಬ್ಯಾಂಕಿಂಗ್‌ ಪರೀಕ್ಷೆಗಾಗಿ ಆನ್‌ಲೈನ್‌‌ ಕೋಚಿಂಗ್‌]

ಮಕ್ಕಳ ಖಾತೆಯಲ್ಲಿ ಕನಿಷ್ಠ ಠೇವಣಿ ಎಷ್ಟಿರಬೇಕು ಎಂಬುದನ್ನು ಆರ್‌‌‌ಬಿಐ ನಿಗದಿಪಡಿಸಿಲ್ಲ. ಈ ವಿಚಾರವನ್ನು ಬ್ಯಾಂಕ್‌ಗಳ ವಿವೇಚನೆಗೆ ಬಿಟ್ಟಿದ್ದು ಅವುಗಳೇ ಕನಿಷ್ಠ ಠೇವಣಿಯನ್ನು ನಿರ್ಧರಿಸಬಹುದು ಎಂದು ಆರ್‌‌ಬಿಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+