• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಕ್ರೋಸಾಫ್ಟ್‌ನಿಂದ ಸರ್ಫೇಸ್ ಲ್ಯಾಪ್‍ಟಾಪ್ 4 ಬಿಡುಗಡೆ

|

ಬೆಂಗಳೂರು,ಮೇ 25: ಮೈಕ್ರೋಸಾಫ್ಟ್ ಇಂಡಿಯಾ ಇಂದು ಶೈಕ್ಷಣಿಕ ಗ್ರಾಹಕರು ಮತ್ತು ಅಧಿಕೃತ ರೀಟೇಲರ್‍ಗಳಿಗೆ ತನ್ನ ಸರ್ಫೇಸ್ ಲ್ಯಾಪ್‍ಟಾಪ್ 4 ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‍ಟಾಪ್ ಅಮೆಜಾನ್.ಇನ್‍ನಲ್ಲಿ ಲಭ್ಯವಿದೆ. ಈ ಆವಿಷ್ಕಾರಕ ಮತ್ತು ವೈವಿಧ್ಯಮಯ ಲ್ಯಾಪ್‍ಟಾಪ್ ನಿರಂತರವಾಗಿ ಕೆಲಸ ಮಾಡುವುದು ಅಥವಾ ಕಲಿಕೆಯಲ್ಲಿ ತೊಡಗುವವರಿಗೆ ಅಥವಾ ಹೈಬ್ರೀಡ್ ಕೆಲಸ ಮಾಡುವ ಬಳಕೆದಾರರಿಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ.

ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ ಅವರು,"ನಾವು ಭಾರತಕ್ಕೆ ಹೊಸ ಸರ್ಫೇಸ್ ಲ್ಯಾಪ್‍ಟಾಪ್ 4 ಅನ್ನು ಬಿಡುಗಡೆ ಮಾಡಲು ಸಂತಸವೆನಿಸುತ್ತಿದೆ. ಈ ಮೂಲಕ ನಾವು ನಮ್ಮ ಆವಿಷ್ಕಾರಕ ಮತ್ತು ನಾವೀನ್ಯತೆಯ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಮ್ಮ ಗ್ರಾಹಕರಿಗೆ ನೀಡಲು ಬಯಸಿದ್ದೇವೆ. ಇದರ ಮೂಲಕ ಗ್ರಾಹಕರು ಅಥವಾ ಬಳಕೆದಾರರು ಹೊಸ ಮಾರ್ಗಗಳಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ.

ಸರ್ಫೇಸ್ ಲ್ಯಾಪ್‍ಟಾಪ್ 4 ಮೈಕ್ರೋಫ್ಟ್ ಹೊಸ ಮೀಟಿಂಗ್ ಮತ್ತು ಸಹಯೋಗಿತ ಅಕ್ಸೆಸರಿಗಳನ್ನು ಹೊಂದಿದೆ. ಇದರಿಂದ ಬಳಕೆದಾರರನ್ನು ಹೈಬ್ರೀಡ್ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಇತ್ತೀಚಿನ ಲೈನ್-ಅಪ್ ಮೊಬಿಲಿಟಿಯನ್ನು ಹೆಚ್ಚು ಮಾಡಲಿದ್ದರೆ, ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ. ಅಲ್ಲದೇ ಎಂಟರ್ ಪ್ರೈಸಸ್ ಗ್ರೇಡ್ ಸೆಕ್ಯೂರಿಟಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಆಧುನಿಕ ಯುಗದ ಬಳಕೆದಾರರು ಹೈಬ್ರೀಡ್ ಯುಗಕ್ಕೆ ರೂಪಾಂತರಗೊಳ್ಳಲು ನೆರವಾಗುತ್ತದೆ" ಎಂದರು.

ಮೈಕ್ರೋಸಾಫ್ಟ್‌ನಿಂದ ಸರ್ಫೇಸ್ ಲ್ಯಾಪ್‍ಟಾಪ್ 4:
* 13.5" ಮತ್ತು 15" ಮಾದರಿಗಳು ಸಿಗ್ನೇಚರ್ 3:2 ಪಿಕ್ಸೆಲ್‍ಸೆನ್ಸ್ ಹೈ-ಕಾಂಟ್ರಾಸ್ಟ್ ಟಚ್‍ಸ್ಕ್ರೀನ್ ಡಿಸ್‍ಪ್ಲೇ
* Dolby® AtmosTM Omnisonic ಸ್ಪೀಕರ್ ಒಳಗೊಂಡಿವೆ.
* ಬಿಲ್ಟ್-ಇನ್ ಎಚ್‍ಡಿ ಫ್ರಂಟ್-ಫೇಸಿಂಗ್ ಕ್ಯಾಮೆರಾ ಇದ್ದು, ಕಡಿಮೆ ಬೆಳಕಿನ ಸಾಮರ್ಥ್ಯವನ್ನು ಹೊಂದಿದ್ದು, ಸ್ಟುಡಿಯೋ ಮೈಕ್ರೋಫೋನ್ ಹೊಂದಿದೆ.
* ಲಾರ್ಜ್ ಟ್ರ್ಯಾಕ್‍ಪ್ಯಾಡ್ ಗೆಸ್ಚರ್ ಸಪೋರ್ಟ್ ಅನ್ನು ಹೊಂದಿದೆ.
* ಪ್ಲಾಟಿನಂ ಅಥವಾ ಬ್ಲ್ಯಾಕ್ ಕಲರ್‌ಗಳಲ್ಲಿ ಅಲ್ಕಾಂಟರ ಅಥವಾ ಮೆಟಲ್ ಫಿನಿಶ್‍ನಲ್ಲಿ ಈ ಲ್ಯಾಪ್‍ಟಾಪ್ ಲಭ್ಯವಿದೆ.
* ಈ ಸಾಧನವು ಪವರ್ ಮಾಡರ್ನ್ ಆಗಿದ್ದು, ಕಚೇರಿ, ಲಿವಿಂಗ್ ರೂಂ, ಕಾಫಿ ಶಾಪ್ ಅಥವಾ ಕ್ಲಾಸ್‍ರೂಂಗಳಲ್ಲಿ ಬಹುಕಾರ್ಯಗಳ ಬೇಡಿಕೆಗಳನ್ನು ಪೂರೈಸಲಿದೆ.
* ಭಾರತದಲ್ಲಿನ ಎಲ್ಲಾ ಗ್ರಾಹಕರು ಸ್ಥಳೀಯ ಮಾರಾಟಗಾರರು, ರೀಟೇಲರ್ ಅಥವಾ ಅಮೆಜಾನ್.ಇನ್‍ನಲ್ಲಿ ಈ ಹೊಸ ಸರ್ಫೇಸ್ ಲ್ಯಾಪ್‍ಟಾಪ್ 4 ಅನ್ನು ಆರ್ಡರ್ ಮಾಡಬಹುದಾಗಿದೆ. 9 ತಿಂಗಳವರೆಗಿನ ನೋ-ಕಾಸ್ಟ್ ಇಎಂಐ ಸೌಲಭ್ಯವು ಕನ್ಸೂಮರ್ ಎಸ್‍ಕೆಯುಗೆ ಲಭ್ಯವಿದೆ. ಇಎಂಐ ಮಾಸಿಕ 11,444 ರೂಪಾಯಿಗಳಿಂದ ಆರಂಭವಾಗಲಿದೆ.

English summary
The Microsoft Surface Laptop 4 with the 11th Gen Intel Core processor launched in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X