ಮೈಕ್ರೋಸಾಫ್ಟ್ ನಿಂದ ಸುಮಾರು 3000 ಉದ್ಯೋಗ ಕಡಿತ!
ನ್ಯೂಯಾರ್ಕ್, ಜುಲೈ 07: ಸಾಫ್ಟ್ ವೇರ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ ಉದ್ಯೋಗ ಕಡಿತ ಆರಂಭಿಸಿದೆ. ಸರಿ ಸುಮಾರು 3,000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಸಿಎನ್ ಬಿಸಿ ವರದಿ ಮಾಡಿದೆ.
ಸಂಸ್ಥೆಯ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಜಾಗತಿಕವಾಗಿ ಅನೇಕ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವುದು ಅನಿವಾರ್ಯ ಎಂದು ಮೈಕ್ರೋಸಾಫ್ಟ್ ವಕ್ತಾರರು ಹೇಳಿದ್ದಾರೆ.

ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು, ಯುಎಸ್ ನಿಂದ ಹೊರಗಿರುವ ಘಟಕಗಳಲ್ಲೇ ಶೇ 75ರಷ್ಟು ಉದ್ಯೋಗಿಗಳನ್ನು ಹೊರದಬ್ಬಲಾಗುತ್ತಿದೆ.
ಮೈಕ್ರೋಸಾಫ್ಟ್ ನ ಯುಎಸ್ ಘಟಕದಲ್ಲಿ 71,000 ಉದ್ಯೋಗಿಗಳಿದ್ದು, ಜಾಗತಿಕವಾಗಿ 1,21,000 ಕೌಶಲ್ಯವುಳ್ಳ ಉದ್ಯೋಗಿಗಳಿದ್ದಾರೆ. ಈಗ ಪಿಂಕ್ ಸ್ಲಿಪ್ ನೀಡುತ್ತಿರುವುದು ಅತಿ ಕಡಿಮೆ ಇದೆ ಎಂದು ಸಂಸ್ಥೆ ಹೇಳಿದೆ. ಮೈಕ್ರೋಸಾಫ್ಟ್ ಸಂಸ್ಥೆ ಈಗ ಕ್ಲೌಡ್ ಕಂಪ್ಯೂಟಿಂಗ್, ಅಜುರ್ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ.(ಪಿಟಿಐ)












Click it and Unblock the Notifications