Gold Rate Today: ಬಂಗಾರ ಖರೀದಿಸುವವರಿಗೆ ಭರ್ಜರಿ ಸಿಹಿಸುದ್ದಿ; ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ

ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಎಂದು ಪ್ಲಾನ್‌ ಮಾಡುತ್ತಿದ್ದೀರಾ? ಹಾಗಾದ್ರೆ ಇಂದು ಸರಿಯಾದ ಸಮಯ ಎನ್ನಬಹುದು. ಈ ವಿಷಯ ತಿಳಿದರೇ ನಿಮಗೂ ಖುಷಿಯಾಗಬಹುದು. ಹೌದು ಏಕೆಂದರೆ, ಇಂದು ಅಂದರೆ ಜುಲೈ 24ರಂದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಮಾರುಕಟ್ಟೆಯಿಂದ ಅತ್ಯಂತ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಅದೆನೆಂದರೆ, ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಸತತ ಬದಲಾವಣೆಗಳಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಚಿನ್ನ, ಬೆಳ್ಳಿ ಬೆಲೆ ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಭಾರಿ ಕುಸಿತ ಕಂಡಿದೆ. ಗ್ರಾಹಕರಿಗೆ ಇದುಆಭರಣ ಖರೀದಿಸಲು ಇದು ಒಳ್ಳೆಯ ಅವಕಾಶ. ಇಂದಿನ ಮಾರುಕಟ್ಟೆ ವರದಿಯ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 13,230 ರೂ. ಇದ್ದರೆ, 10 ಗ್ರಾಂ ಚಿನ್ನದ ಬೆಲೆ 1,32,300 ರೂಪಾಯಿ ಇದೆ.

Gold Rate Today

ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 14,433 ರೂ. ಹಾಗೂ 10 ಗ್ರಾಂಗೆ 1,44,330 ರೂಪಾಯಿಗಳಿಗೆ ಇಳಿಕೆಯಾಗಿದೆ. ಇನ್ನು 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 10,825 ರೂ. ದಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಗಣನೀಯ ಇಳಿಕೆಯಾಗಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಓಡಾಟ ಹೆಚ್ಚಾಗಲು ಕಾರಣವಾಗಿದೆ.

ನಿನ್ನೆ ಹಾಗೂ ಇವತ್ತಿನ ಚಿನ್ನದ ದರಗಳ ಹೋಲಿಕೆ

ನಿನ್ನೆಯ ದರಗಳಿಗೆ ಹೋಲಿಸಿದರೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕಡಿತ ಕಂಡುಬಂದಿದೆ. ನಿನ್ನೆ (ಜುಲೈ 23ರಂದು) 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 13,400 ರೂ. ಇತ್ತು, ಆದರೆ ಇಂದು ಅದು 13,230 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ ಪ್ರತಿ ಗ್ರಾಂಗೆ ಬರೋಬ್ಬರಿ 170 ರೂಪಾಯಿ ಹಾಗೂ 10 ಗ್ರಾಂಗೆ 1,700 ರೂ. ಕಡಿಮೆಯಾಗಿದೆ. ಹಾಗೆಯೇ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 14,618 ರೂ. ನಿಂದ 14,433 ರೂಪಾಯಿಗೆ ಇಳಿದಿದ್ದು, ಅಂದರೆ 1ಗ್ರಾಂಗೆ 185 ರೂಪಾಯಿ ಅದರಂತೆ 10 ಗ್ರಾಂಗೆ 1,850 ರೂಪಾಯಿ ಕಡಿಮೆಯಾಗಿದೆ. ಬೆಳ್ಳಿಯ ದರ ಕೂಡ ನಿನ್ನೆಗೆ ಹೋಲಿಸಿದರೆ ಪ್ರತಿ ಕೆಜಿಗೆ ಸರಿಸುಮಾರು 1,800 ರೂ. ಗಳಷ್ಟು ಕುಸಿದಿದೆ.

ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ 10 ಗ್ರಾಂಗೆ 1.42 ಲಕ್ಷ ರೂ. ಗಿಂತ ಕೆಳಗೆ ವಹಿವಾಟು ನಡೆಸುತ್ತಿದ್ದರೆ, ಎಂಸಿಎಕ್ಸ್ ಬೆಳ್ಳಿ ಫ್ಯೂಚರ್ಸ್ ಕೂಡ 1 ಕೆಜಿಗೆ 2.19 ಲಕ್ಷ ರೂ. ಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಇದು ಆಭರಣ ಖರೀದಿದಾರರಿಗೆ ಅತ್ಯಂತ ನಿರಾಳತೆ ತಂದಿದೆ.

ನಗರವಾರು 22 ಕ್ಯಾರಟ್ 1ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು: 13,230 ರೂಪಾಯಿ

ದೆಹಲಿ: 13,245 ರೂಪಾಯಿ

ಚೆನ್ನೈ: 13,230 ರೂಪಾಯಿ

ಮುಂಬೈ: 13,230 ರೂಪಾಯಿ

ಹೈದರಾಬಾದ್: 13,230 ರೂಪಾಯಿ

ಅಹಮದಾಬಾದ್: 13,235 ರೂಪಾಯಿ

ಪುಣೆ: 13,230 ರೂಪಾಯಿ

ಕೋಲ್ಕತ್ತಾ: 13,230 ರೂಪಾಯಿ

ಒಟ್ಟಿನಲ್ಲಿ, ಸತತ ಎರಡನೇ ದಿನವೂ ಚಿನ್ನದ ದರ ಭಾರಿ ಇಳಿಕೆಯ ಹಾದಿ ಹಿಡಿದಿದ್ದು, ಹೂಡಿಕೆದಾರರಿಗೆ ಮತ್ತು ಆಭರಣ ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳಲ್ಲಿನ ಏರಿಳಿತ, ಅಮೆರಿಕ-ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಮುಂಬರುವ ವಾರದಲ್ಲಿ ಬಡ್ಡಿದರ ಹೆಚ್ಚಿಸುವ ಮುನ್ಸೂಚನೆಗಳು ಹೂಡಿಕೆದಾರರ ಮೇಲೆ ತೀವ್ರ ಪರಿಣಾಮ ಬೀರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+