Get Updates
Get notified of breaking news, exclusive insights, and must-see stories!

ಭಾರೀ ಪ್ರಮಾಣದಲ್ಲಿ ಇಳಿಕೆಗೊಂಡಿದೆ ಗೃಹ ಸಾಲ ಬಡ್ಡಿ ದರ: ದಶಕದಲ್ಲಿ ಕನಿಷ್ಠ ಮಟ್ಟ

ನವದೆಹಲಿ, ನವೆಂಬರ್ 18: ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದಲ್ಲಿ ದೇಶದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಕೋಟ್ಯಾಂತರ ಉದ್ಯೋಗ ನಷ್ಟದ ಜೊತೆಗೆ ಅಪಾರ ಪ್ರಮಾಣದ ನಷ್ಟವು ಉಂಟಾಗಿದೆ. ಇದರ ನಡುವೆ ಸ್ವಂತ ಮನೆ ಕಟ್ಟಬೇಕು ಎನ್ನುವವರಿಗೆ ಈ ಸಂದಿಗ್ಧ ಪರಿಸ್ಥಿತಿಯು ಸುವರ್ಣಾವಕಾಶವನ್ನು ತಂದುಕೊಟ್ಟಿದೆ.

ಹೌದು, ಗೃಹ ಸಾಲದ ಬಡ್ಡಿ ದರಗಳು ಈಗ ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ದರಕ್ಕೆ ತಲುಪಿದೆ. ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸದ್ಯ 30 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಬಡ್ಡಿ ದರವು ಶೇ. 7ಕ್ಕೆ ತಲುಪಿದೆ. ಇದು 2009ರಲ್ಲಿ ಶೇ. 11.75ರಷ್ಟಿತ್ತು.

ಎಸ್‌ಬಿಐ 30 ಲಕ್ಷ ರೂಪಾಯಿವರೆಗಿನ ಗೃಹ ಸಾಲವನ್ನು ಶೇ. 7ರ ಬಡ್ಡಿದರದಲ್ಲಿ ನೀಡುತ್ತದೆ. 30 ರಿಂದ 75 ಲಕ್ಷಗಳವರೆಗಿನ ಸಾಲವನ್ನು ಶೇ. 7.25ರ ಬಡ್ಡಿ ದರ, 75 ಲಕ್ಷ ರೂಪಾಯಿ ಮೇಲ್ಪಟ್ಟ ಗೃಹ ಸಾಲಕ್ಕೆ ಶೇ. 7.35ರ ದರದಲ್ಲಿ ಬಡ್ಡಿಯನ್ನು ವಿಧಿಸುತ್ತದೆ.

Massive Decline in Home Loan Interest Rates Over the Decade

ಈ ಸಲ ಹಬ್ಬದ ಸೀಸನ್‌ನಲ್ಲಿ ಎಚ್‌ಡಿಎಫ್‌ಸಿ, ಎಕ್ಸಿಸ್‌ ಬ್ಯಾಂಕ್‌, ಕೋಟಕ್‌, ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ನಾನಾ ಬ್ಯಾಂಕ್‌ಗಳಲ್ಲಿ ಗೃಹ ಸಾಲ ಬಡ್ಡಿ ಇಳಿಕೆಯಾಗಿದೆ. ಪ್ರೊಸೆಸಿಂಗ್‌ ಶುಲ್ಕ, ಡಿಸ್ಕೌಂಟ್‌, ಮಹಿಳಾ ಸಾಲಗಾರರಿಗೆ ವಿಶೇಷ ಆಫರ್‌ಗಳನ್ನು ಪ್ರಕಟಿಸಿವೆ.

ಎಸ್‌ಬಿಐ ಮಹಿಳಾ ಸಾಲಗಾರರಿಗೆ ಶೇ. 0.05ರಷ್ಟು ರಿಯಾಯಿತಿ ದರದಲ್ಲಿ ಸಾಲ ನೀಡುತ್ತದೆ. ಇಷ್ಟಾದರೂ ಗೃಹ ಸಾಲಕ್ಕೆ ಬೇಡಿಕೆ ಸೃಷ್ಟಿಯಾಗಿಲ್ಲ. ಕೋವಿಡ್-19 ಬಿಕ್ಕಟ್ಟು ತಗ್ಗಿದ ಬಳಿಕ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+