ಕಾರು ಖರೀದಿಗೆ ಸಾಲ: ಮಾರುತಿ ಸುಜೂಕಿಯೊಂದಿಗೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ
ಹೊಸದಾಗಿ ವಾಹನ ಖರೀದಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೊಸದಾಗಿ ಕಾರು ಖರೀದಿಸುವವರಿಗೆ ವಾಹನ ಸಾಲ ನೀಡಲು ಭಾರತೀಯ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
Recommended Video
Solar Eclipse June 21 2020 : Sunday darshan timing changed in Kukke Subramanya | Oneindia Kannada
ಈಗಿರುವ ಗ್ರಾಹಕರಷ್ಟೇ ಅಲ್ಲದೇ ಹೊಸ ಗ್ರಾಹಕರಿಗೂ ಸಹ ವಾಹನ ಖರೀದಿಗೆ ಕರೂರ್ ವೈಶ್ಯ ಬ್ಯಾಂಕ್ ಸಾಲ ನೀಡಲಿದೆ. ಆಕರ್ಷಕ ಬಡ್ಡಿ ದರ, ಆರು ತಿಂಗಳ ಹಾಲಿಡೆ ಅವಧಿಯೊಂದಿಗೆ 100 ಪರ್ಸೆಂಟ್‌ರಷ್ಟು ಆನ್ ರೋಡ್ ಫೈನಾನ್ಸ್ ನೀಡಲು ಕರೂರ್ ವೈಶ್ಯ ಬ್ಯಾಂಕ್ ಮುಂದಾಗಿದೆ.
ಮಾರುತಿ ಸುಜೂಕಿ ಸಂಸ್ಥೆಯ ಓಮ್ನಿ ಹಾಗೂ ಮಾರುತಿ ಇಕೋ ಕಾರುಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. 84 ತಿಂಗಳವರೆಗೆ ಮರುಪಾವತಿ ಅವಧಿಯೊಂದಿಗೆ ವೇತನ ಹಾಗೂ ಸ್ವಯಂ ಉದ್ಯೋಗಿಗಳಿಗೆ ಈ ಸಾಲ ಲಭ್ಯವಿದೆ. ಆದಾಯರಹಿತ ಪುರಾವೆ ಗ್ರಾಹಕರಿಗೂ ಸಾಲಗಳು ಲಭ್ಯವಿದೆ.

ಇನ್ನು ಸಾಲ ಪ್ರಕ್ರಿಯೆಯು ಬಹಳ ವೇಗವಾಗಿ ಮುಗಿಯಲಿದ್ದು, ಡಿಜಿಟಲ್ ಮೂಲಕ 15 ನಿಮಿಷಗಳಲ್ಲಿ ಸಿಗಲಿದೆ. ಚಾಲ್ತಿಯಲ್ಲಿರುವ ಗ್ರಾಹಕರಿಗೆ ಅದೇ ದಿನದಂದು ಸಾಲ ನೀಡಲಾಗುತ್ತದೆ.












Click it and Unblock the Notifications