Gold Price: 1,00,000ಕ್ಕೆ ಸಮೀಪಿಸಿದ ಅಪರಂಜಿ ಚಿನ್ನದ ದರ: ಇಂದಿನ ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 28: ಕಳೆದ ಒಂದು ವರ್ಷದಿಂದ ಚಿನ್ನ ಮತ್ತು ಬೆಳ್ಳಿಯ ದರ ಒಂದೇ ಸಮನೇ ಏರಿಕೆ ಕಾಣುತ್ತಿದ್ದು, ಈಗಂತೂ ಬಂಗಾರದ ಬೆಲೆ ಗಗನಕ್ಕೇರಿದೆ. ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದ್ದು, ನಿನ್ನೆಗಿಂತ ಚಿನ್ನದ ಬೆಲೆ ಇಂದು ಮತ್ತೆ ಜಾಸ್ತಿಯಾಗಿದೆ. ಹತ್ತು ಗ್ರಾಮ್ ಅಪರಂಜಿ ಚಿನ್ನದ ದರ ಒಂದು ಲಕ್ಷ ರೂಪಾಯಿ ಸಮೀಪಿಸಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ತೂಕದ ಬೆಲೆ 83,400 ರೂಪಾಯಿ ಇದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 90,980 ರೂಪಾಯಿ ಇದೆ. ಅಲ್ಲದೇ 18 ಕ್ಯಾರಟ್‌ನ 10 ಗ್ರಾಂ ತೂಕದ ಚಿನ್ನದ ಬೆಲೆ 68,240 ರೂಪಾಯಿಗೆ ಇದೆ.

ಇನ್ನು ಬೆಳ್ಳಿ ದರ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಭಾರತದಲ್ಲಿ 100 ಗ್ರಾಂ ತೂಕದ ಬೆಳ್ಳಿಯ ಬೆಲೆ 10,800 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 28) ಶುಕ್ರವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 8,340 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 9,098 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 83,400 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) -90,980 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 66,720 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 72,784 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 83,400 ರೂಪಾಯಿ
* ಚೆನ್ನೈ- 83,400 ರೂಪಾಯಿ
*ಮುಂಬೈ- 83,400 ರೂಪಾಯಿ
* ಕೇರಳ - 83,400 ರೂಪಾಯಿ
* ಕೋಲ್ಕತ್ತಾ- 83,400 ರೂಪಾಯಿ
* ಜೈಪುರ್- 83,550 ರೂಪಾಯಿ
* ಭುವನೇಶ್ವರ್- 83,400 ರೂಪಾಯಿ
*ಅಹ್ಮದಾಬಾದ್- 83,450 ರೂಪಾಯಿ
*ಲಕ್ನೋ- 83,550 ರೂಪಾಯಿ
* ನವದೆಹಲಿ- 83,550 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 10,800 ರೂಪಾಯಿ
* ಚೆನ್ನೈ- 11,400 ರೂಪಾಯಿ
* ಮುಂಬೈ- 10,500 ರೂಪಾಯಿ
* ಕೋಲ್ಕತ್ತಾ- 10,500 ರೂಪಾಯಿ
* ನವದೆಹಲಿ- 10,500 ರೂಪಾಯಿ
*ಕೇರಳ- 11,400 ರೂಪಾಯಿ
*ಅಹ್ಮದಾಬಾದ್- 10,500 ರೂಪಾಯಿ












Click it and Unblock the Notifications