March 27 Gold Price: ಚಿನ್ನದ ಬೆಲೆ ಮತ್ತೆ ಭರ್ಜರಿ ಏರಿಕೆ.. ಇಂದಿನ ದರ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 27: ಕಳೆದ ಒಂದು ವರ್ಷದಿಂದ ಚಿನ್ನ ಮತ್ತು ಬೆಳ್ಳಿಯ ದರ ಒಂದೇ ಸಮನೇ ಏರಿಕೆ ಕಾಣುತ್ತಿದ್ದು, ಈಗಂತೂ ಬಂಗಾರದ ಬೆಲೆ ಗಗನಕ್ಕೇರಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ತುಸು ಇಳಿಕೆ ಕಾಣುತ್ತಿತ್ತು ಆದರೆ ನಿನ್ನೆಗಿಂತ ಚಿನ್ನದ ಬೆಲೆ ಇಂದು ಮತ್ತೆ ಜಾಸ್ತಿಯಾಗಿದೆ. ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ತೂಕದ ಬೆಲೆ 82,350 ರೂಪಾಯಿ ಇದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 89,840 ರೂಪಾಯಿ ಇದೆ. ಅಲ್ಲದೇ 18 ಕ್ಯಾರಟ್‌ನ 10 ಗ್ರಾಂ ತೂಕದ ಚಿನ್ನದ ಬೆಲೆ 67,380 ರೂಪಾಯಿಗೆ ಇದೆ.

ಇನ್ನು ಬೆಳ್ಳಿ ದರ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಭಾರತದಲ್ಲಿ 100 ಗ್ರಾಂ ತೂಕದ ಬೆಳ್ಳಿಯ ಬೆಲೆ 10,200 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 27) ಗುರುವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 8,235 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 8,984 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 82,350 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) -89,840 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 65,880 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 71,872 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 82,350 ರೂಪಾಯಿ
* ಚೆನ್ನೈ- 82,350 ರೂಪಾಯಿ
*ಮುಂಬೈ- 82,350 ರೂಪಾಯಿ
* ಕೇರಳ - 82,350 ರೂಪಾಯಿ
* ಕೋಲ್ಕತ್ತಾ- 82,350 ರೂಪಾಯಿ
* ಜೈಪುರ್- 82,500 ರೂಪಾಯಿ
* ಭುವನೇಶ್ವರ್- 82,350 ರೂಪಾಯಿ
*ಅಹ್ಮದಾಬಾದ್- 82,400 ರೂಪಾಯಿ
*ಲಕ್ನೋ- 82,500 ರೂಪಾಯಿ
* ನವದೆಹಲಿ- 82,500 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 10,200 ರೂಪಾಯಿ
* ಚೆನ್ನೈ- 11,100 ರೂಪಾಯಿ
* ಮುಂಬೈ-10,200 ರೂಪಾಯಿ
* ಕೋಲ್ಕತ್ತಾ- 10,200 ರೂಪಾಯಿ
* ನವದೆಹಲಿ- 10,200 ರೂಪಾಯಿ
*ಕೇರಳ- 11,100 ರೂಪಾಯಿ
*ಅಹ್ಮದಾಬಾದ್- 10,200 ರೂಪಾಯಿ












Click it and Unblock the Notifications