ಬರೀ ಚಹಾ ಮಾರಿಯೇ ತಿಂಗಳಿಗೆ 9 ಲಕ್ಷ ಸಂಪಾದನೆ : ಮೋದಿ, ಎಲಾನ್ ಮಸ್ಕೇ ಇವರ ಪ್ರೇರಣೆಯಂತೆ!
Tea Business : ಬ್ಯುಸಿನೆಸ್ ಅಂದರೆ ದೊಡ್ಡ ಆಫೀಸು, ಕಾರ್ಖಾನೆ, ಕಂಪನಿಯೇ ಆಗಬೇಕೆಂದಿಲ್ಲ. ಸಣ್ಣದಾಗಿಯೂ ಬ್ಯುಸಿನೆಸ್ ಶುರು ಮಾಡಬಹುದು. ಚಹಾ, ಟೀ ಅಂಗಡಿ ತೆರೆಯುವುದು ಕೂಡಾ ಒಂದು ವ್ಯವಹಾರವೇ. ಇದನ್ನು ಲಾಭದಲ್ಲಿ ನಡೆಸುವ ತಂತ್ರ ಗೊತ್ತಿರಬೇಕು ಅಷ್ಟೇ. ಕೆಲವರು ಚಹಾ ಅಥವಾ ಕಾಫಿ ಸ್ಟಾಲ್ ಎಂದರೆ ಅದರಲ್ಲಿ ಎಷ್ಟು ಲಾಭ ಬರಬಹುದು ಅಂದು ಕೊಳ್ಳಬಹುದು. ಬರೀ ಚಹಾ ಮಾರಿಯೇ ತಿಂಗಳಿಗೆ 9 ಲಕ್ಷ ದುಡಿಯಬಹುದು ಎಂದರೆ ನಂಬುತ್ತೀರಾ? ನಂಬಲೇ ಬೇಕು.

ದಿನಕ್ಕೆ 3000 ಕಪ್ ಚಹಾ ಮಾರಾಟ :
ಶರ್ಮಾ ಕೆಫೆ ರೆಸ್ಟೋರೆಂಟ್ ನಡೆಸುತ್ತಿರುವ ವ್ಯಕ್ತಿ ತಮ್ಮ ಕೆಫೆಯಲ್ಲಿ ಚಹಾ ಮಾರುತ್ತಿದ್ದಾರೆ. ಕಳೆದ 55 ವರ್ಷಗಳಲ್ಲಿ ತಮ್ಮ ಚಹಾ ಅಂಗಡಿ ಹೇಗೆ ವಿಸ್ತರಿಸಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಅವರ ಕೆಫೆಯಲ್ಲಿ ದಿನಾಲೂ ಸುಮಾರು 3000 ಕಪ್ ಚಹಾವನ್ನು ಮಾರಾಟವಾಗುತ್ತದೆ. ಚಹಾದಿದಲೇ ಪ್ರತಿ ತಿಂಗಳು ಉತ್ತಮ ಆದಾಯ ಗಳಿಸುತ್ತಾರೆ. ಸ್ವಂತ ವ್ಯವಹಾರ ಶುರು ಮಾಡಬೇಕು ಅಂದುಕೊಳ್ಳುವವರು ದೊಡ್ಡ ಮಟ್ಟದಲ್ಲಿ ಇನ್ವೆಸ್ಟ್ ಮಾಡುವ ಬದಲು ಸಣ್ಣ ಮಟ್ಟದಿಂದ ಏಕೆ ಪ್ರಾರಂಭಿಸಬೇಕು ಎನ್ನುವುದನ್ನು ಅವರು ಹೇಳಿದ್ದಾರೆ. ಆರಂಭದಲ್ಲಿಯೇ ಯಾಕೆ ರಿಸ್ಕ್ ತೆಗೆದುಕೊಳ್ಳಬಾರದು, ವ್ಯವಹಾರವನ್ನು ಯಾವಾಗ ಹೇಗೆ ವಿಸ್ತರಿಸಬೇಕು ಎನ್ನುವುದನ್ನು ಅನುಭವದಿಂದ ಕಲಿಯಬೇಕು ಎಂದು ಅವರು ವಿವರಿಸಿದ್ದಾರೆ.
55 ವರ್ಷಗಳಿಂದ ಟೀ ವ್ಯವಹಾರ :
ಶರ್ಮಾ ಕೆಫೆ ರೆಸ್ಟೋರೆಂಟ್ ಎಂಬ ಚಹಾ ಅಂಗಡಿಯನ್ನು ನಡೆಸುತ್ತಿರುವ ವ್ಯಕ್ತಿ, ಕಂಟೆಂಟ್ ಕ್ರಿಯೇಟರ್ ಆಯುಷ್ ಗೋಸ್ವಾಮಿ ಜೊತೆ ತಮ್ಮ ಬ್ಯುಸಿನೆಸ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಟೀ ಬ್ಯುಸಿನೆಸಿನಿಂದ ತಿಂಗಳಿಗೆ ಸುಮಾರು 9 ಲಕ್ಷ ರೂ.ಗಳನ್ನು ಗಳಿಸುವ ಬಗ್ಗೆಯೂ ಹೇಳಿದ್ದಾರೆ. ಕಳೆದ 55-56 ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದೇವೆ. ಗ್ರಾಹಕರಿಗೆ ಅತ್ಯುತ್ತಮ ಚಹಾ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ತಿಂಗಳಿಗೆ 9 ಲಕ್ಷದ ವ್ಯಾಪಾರ :
ಶಾಪಿನಲ್ಲಿ ದಿನಕ್ಕೆ ಸುಮಾರು 3000 ಕಪ್ ಚಹಾ ಮಾರಾಟವಾಗುತ್ತದೆ. ಒಂದು ಕಪ್ ಚಹಾದ ಬೆಲೆ 10 ರೂ. ಇದರ ಪ್ರಕಾರ, ಚಹಾ ಮಾರಿಯೇ ದಿನಕ್ಕೆ ಸುಮಾರು 25000 ರಿಂದ 30000 ರೂಪಾಯಿಗಳನ್ನು ಗಳಿಸುತ್ತಾರೆ. ಇದನ್ನು ತಿಂಗಳಿನ ಆಧಾರದಲ್ಲಿ ಲೆಕ್ಕ ಹಾಕಿ ನೋಡಿದರೆ ಆದಾಯ 7.5 ಲಕ್ಷ ರೂ.ಗಳಿಂದ 9 ಲಕ್ಷ ರೂ.ವರೆಗೆ ಹೋಗುತ್ತದೆ. ಆದರೆ ಈ 9 ಲಕ್ಷ ಬರೀ ಲಾಭ ಖಂಡಿತಾ ಅಲ್ಲ. ಇದು ವ್ಯಾಪಾರ ಅಷ್ಟೇ. ಚಹಾ ಪುಡಿ, ಹಾಲು, ಸಕ್ಕರೆ, ಕೆಲಸದವರ ಸಂಬಳ, ಬಾಡಿಗೆ, ಕರೆಂಟ್ ಮತ್ತು ಬೇರೆ ಬೇರೆ ಖರ್ಚನ್ನು ಲೆಕ್ಕಹಾಕಬೇಕಾಗುತ್ತದೆ. ಇವರ ಕೆಫೆಯಲ್ಲಿ ಸುಮಾರು 30-35 ಜನರು ಕೆಲಸ ಮಾಡುತ್ತಾರೆ. ತಮ್ಮ ಕೆಫೆಯಲ್ಲಿ ಉತ್ತಮ ವ್ಯಾಪಾರ ಆಗುತ್ತಿದೆ ಎನ್ನುವ ಬಗ್ಗೆ ಸಂತೋಷ ಹೆಮ್ಮೆ ಅವರಿಗಿದೆ.
ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ಪ್ರೇರಣೆ :
ಯುವಕರು ಕಡಿಮೆ ಹೂಡಿಕೆಯಲ್ಲಿ ದೊಡ್ಡ ವ್ಯವಹಾರ ನಿರ್ಮಿಸಬಹುದೇ ಎಂದು ಗೋಸ್ವಾಮಿ ಕೆಫೆ ಮಾಲೀಕರನ್ನು ಕೇಳಿದಾಗ ಈ ಮಾತುಕತೆ ಬೇರೆಯೇ ಟ್ವಿಸ್ಟ್ ತೆಗೆದುಕೊಂಡಿದೆ. ಈ ಕೆಫೆ ಮಾಲೀಕರು ಅತ್ಯಂತ ಸಾಮಾನ್ಯ ಆರಂಭದಿಂದ ದೊಡ್ಡ ಮಟ್ಟಕ್ಕೆ ಏರಿದವರನ್ನು ಉದಾಹರಣೆಯಾಗಿ ನೀಡುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಪ್ರತಿಯೊಬ್ಬರೂ ಅತ್ಯಂತ ಕೆಳಮಟ್ಟದಿಂದಲೇ ಮೇಲೇರುತ್ತಾರೆ. ಉದಾಹರಣೆಗೆ, ಎಲೋನ್ ಮಸ್ಕ್ ಮತ್ತು ನರೇಂದ್ರ ಮೋದಿ ಹೀಗೆ ಸಾಕಷ್ಟು ಹೆಸರುಗಳಿವೆ ಅಂತ ಹೇಳಿದ್ದಾರೆ.
ಈ ಇಬ್ಬರು ಸೆಲೆಬ್ರಿಟಿಗಳು ತಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಅಲ್ಲದೆ ಯಾಕೆ ಇವರಿಬ್ಬರು ತಮ್ಮ ಸ್ಪೂರ್ತಿ ಎನ್ನುವುದನ್ನು ಕೂಡಾ ವಿವರಿಸಿದ್ದಾರೆ. ಮೋದಿ (narendra modi) ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದರು. ಇವತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ. ಎಲಾನ್ ಮಸ್ಕ್ (elon musk) ಕೂಡಾ ಒಂದು ಕಾಲದಲ್ಲಿ ಸಣ್ಣ ಉದ್ಯಮಿಯಾಗಿದ್ದರು. ಇಂದು, ಅವರು ಶತಕೋಟಿ ಮತ್ತು ಟ್ರಿಲಿಯನ್ ರೂಪಾಯಿಗಳನ್ನು ಗಳಿಸುವ ಕಂಪನಿ ಹೊಂದಿದ್ದಾರೆ. ಅಂದರೆ ಒಡ್ಡ ಮಟ್ಟಕ್ಕೆ ಏರಬೇಕಾದರೆ ಪೂರ್ವಜರ ಆಸ್ತಿ ಅಥವಾ ಸಂಪತ್ತು ಇರಲೇ ಬೇಕು ಎಂದೇನಿಲ್ಲ. ಅತ್ಯಂತ ಕೆಳಮಟ್ಟದಿಂದ ಬ್ಯುಸಿನೆಸ್ ಶುರು ಮಾಡುವ ಮೂಲಕವೂ ದೊಡ್ಡ ಯಶಸ್ಸು ಕಂಡುಕೊಳ್ಳಬಹುದು.


Click it and Unblock the Notifications
