7 ವರ್ಷದಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು, ತೈಲ ತೆರಿಗೆ ಸಂಗ್ರಹ 459% ಪಟ್ಟು ಹೆಚ್ಚು: ಪೆಟ್ರೋಲಿಯಂ ಸಚಿವ
ನವದೆಹಲಿ, ಮಾರ್ಚ್ 9: ಅಡುಗೆ ಅನಿಲದ ಬೆಲೆ ಕಳೆದ ಏಳು ವರ್ಷಗಳಲ್ಲಿ ಎರಡುಪಟ್ಟು ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್‌ಗೆ 819 ರೂ. ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳಲ್ಲಿನ ಹೆಚ್ಚಳದಿಂದ ಸಂಗ್ರಹವು ಸೇ 459ರಷ್ಟು ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸೋಮವಾರ ವಿರೋಧಪಕ್ಷಗಳ ಸದಸ್ಯರು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಲಿಖಿತ ಉತ್ತರ ನೀಡಿದರು. 2014ರ ಮಾರ್ಚ್ 1ರಂದು ಅಡುಗೆ ಅನಿಲದ ಚಿಲ್ಲರೆ ಮಾರಾಟ ಬೆಲೆಯು ಪ್ರತಿ 14.2 ಕೆಜಿ ಸಿಲಿಂಡರ್ ಮೇಲೆ 410.5 ರೂ ಇತ್ತು. ಈಗ ಈ ತಿಂಗಳು ಅದೇ ಸಿಲಿಂಡರ್ ಬೆಲೆ 819ಕ್ಕೆ ತಲುಪಿದೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿನ ಬೆಲೆ ಏರಿಕೆಯು ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಿದೆ. ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನೂ ತೆಗೆದುಹಾಕಲಾಗಿದೆ. ಮುಂದೆ ಓದಿ.

ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್
ಕಳೆದ ಕೆಲವು ತಿಂಗಳಿನಿಂದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳವಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಬೆಲೆ 594 ರೂ ಇದ್ದರೆ, ಈಗ ಅದು 819 ರೂ, ತಲುಪಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

ಸೀಮೆ ಎಣ್ಣೆ ದರ ಏರಿಕೆ
ಇದೇ ರೀತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ಮಾರಾಟ ಮಾಡುತ್ತಿದ್ದ ಸೀಮೆ ಎಣ್ಣೆಯ ಬೆಲೆಯು 2014ರ ಮಾರ್ಚ್ ತಿಂಗಳಲ್ಲಿ ಪ್ರತಿ ಲೀಟರ್‌ಗೆ 14.96 ರೂ ಇತ್ತು. ಅದೀಗ ಲೀಟರ್‌ಗೆ 35.35 ರೂ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳು ಸಹ ದೇಶದಲ್ಲಿ ಸಾರ್ವಕಾಲಿಕ ಏರಿಕೆ ಕಂಡಿವೆ ಎಂದರು.

ಮಾರುಕಟ್ಟೆ ಆಧಾರಿಯ ಬೆಲೆ
'ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು 2010ರ ಜೂನ್ 26 ಮತ್ತು 2014ರ ಅಕ್ಟೋಬರ್ 19ರಿಂದ ಕ್ರಮವಾಗಿ ಮಾರುಕಟ್ಟೆ ಆಧಾರಿತವಾಗುವಂತೆ ಸರ್ಕಾರ ಮಾಡಿತ್ತು. ಅಲ್ಲಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಮ್ಮ ಅಂತಾರಾಷ್ಟ್ರೀಯ ಉತ್ಪನ್ನ ಬೆಲೆಗಳು, ವಿನಿಮಯ ದರ, ತೆರಿಗೆ ರಚನೆ, ಒಳನಾಡು ಸಾಗಣೆ ಮತ್ತು ಇತರೆ ವೆಚ್ಚದ ಅಂಶಗಳಿಗೆ ಅನುಗುಣವಾಗಿ ನಿಗದಿಪಡಿಸುವ ನಿರ್ಧಾರ ತೆಗೆದುಕೊಳ್ಳುತ್ತವೆ' ಎಂದು ತಿಳಿಸಿದರು.

2.94 ಲಕ್ಷ ಕೋಟಿ ರೂ.ಗೆ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ ಒಟ್ಟಾರೆ ಚಿಲ್ಲರೆ ಮಾರಾಟ ದರವನ್ನು ತೆರಿಗೆಗಳು ನಿರ್ಧರಿಸುತ್ತಿವೆ. ಈ ಎರಡೂ ತೈಲಗಳ ಮಾರಾಟದ ತೆರಿಗೆಗಳಿಂದ 2013ರಲ್ಲಿ 52,537 ಕೋಟಿ ರೂ ಸಂಗ್ರಹಿಸಿದ್ದರೆ, 2019-20ರಲ್ಲಿ 2.13 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು. ಪ್ರಸಕ್ತ ಹಣಕಾಸು ವರ್ಷದ 11 ತಿಂಗಳಲ್ಲಿ 2.94 ಲಕ್ಷ ಕೋಟಿ ರೂ.ಗೆ ಈ ಸಂಗ್ರಹ ಹೆಚ್ಚಳ ಕಂಡಿದೆ ಎಂದು ಮಾಹಿತಿ ನೀಡಿದರು.

ಸುಂಕ ಸಂಗ್ರಹ ಭಾರಿ ಏರಿಕೆ
ಸರ್ಕಾರವು ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ 32.90 ರೂ ಹಾಗೂ ಡೀಸೆಲ್ ಮೇಲೆ 31.80 ರೂ ಅಬಕಾರಿ ಸುಂಕ ವಿಧಿಸುತ್ತಿದೆ. 2018ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ 17.98 ರೂ ಇದ್ದರೆ, ಡೀಸೆಲ್ ಮೇಲೆ 13.83 ರೂ ಇತ್ತು ಎಂದು ಸಚಿವರು ತಿಳಿಸಿದರು.
ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲ ಮತ್ತು ಕಚ್ಚಾತೈಲಗಳಿಂದ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟಾರೆ ಅಬಕಾರಿ ಸುಂಕವು 2016-17ರಲ್ಲಿ 2.37 ಲಕ್ಷ ಕೋಟಿ ಇದ್ದರೆ, 2020-21ರ ಏಪ್ರಿಲ್-ಜನವರಿ ಅವಧಿಯಲ್ಲಿ 3.01 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ ಎಂದರು.
-
Petrol Price: ಪೆಟ್ರೋಲ್-ಡೀಸೆಲ್ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆ: ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗಲಿದೆಯೇ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಕಡಿತ; ಗ್ರಾಹಕರಿಗೆ ಇಳಿಯುತ್ತಾ ಕಚ್ಚಾ ತೈಲ ಬೆಲೆ? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications