LPG: ಅಕ್ಟೋಬರ್ ಆರಂಭದಲ್ಲೇ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ

LPG: ದೇಶದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಇದೀಗ ಇಂದು (ಅಕ್ಟೋಬರ್ 1, 2026) ದರವನ್ನು ಏರಿಕೆ ಮಾಡಿವೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಕ್ಟೋಬರ್ ತಿಂಗಳ ಆರಂಭದಲ್ಲೇ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಸಿಲಿಂಡರ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಗೃಹಬಳಕೆ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಭಾರಿ ಏರಕೆಯಾಗಿದೆ. ಹಾಗಾದ್ರೆ ಯಾವ್ಯಾವ ನಗರದಲ್ಲಿ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

LPG Price Hike Commercial Gas Cylinder Rates Rise From October 1 2026 in India Including Bengaluru

ಅಕ್ಟೋಬರ್ 1ರಿಂದ ಎಲ್‌ಪಿಜಿ ದರ ಏರಿಕೆ

ಹಬ್ಬದ ದಿನಗಳು ಆರಂಭವಾಗುತ್ತಿರುವ ಬೆನ್ನಲ್ಲೇ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ. ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ (19 ಕೆ.ಜಿ.) ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಿವೆ. ಆದರೆ, ಸಮಾಧಾನಕರ ವಿಷಯವೆಂದರೆ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ದೇಶದ ಯಾವ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಎಷ್ಟಿದೆ?

* ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹62.50ರಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ₹2,747.50 ಇದ್ದ ದರವು ಇದೀಗ ₹2,810ಕ್ಕೆ ತಲುಪಿದೆ.
* ಮುಂಬೈನಲ್ಲಿ 63 ರೂಪಾಯಿ ಹೆಚ್ಚಳವಾಗಿದ್ದು, ಮುಂಚೆ ₹2,701 ಇದ್ದ ಬೆಲೆ ಈಗ ₹2,764 ತಲುಪಿದೆ.
* ಚೆನ್ನೈನಲ್ಲಿ ₹2,916.50 ರಿಂದ 2,983 ರೂಪಾಯಿದೆ ಏರಿಕೆಯಾಗಿದೆ.
* ಹೈದರಾಬಾದ್‌ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹2,996 ರಷ್ಟಿದೆ.
2,898.00
* ಬೆಂಗಳೂರು - ₹2,898

ಪ್ರದೇಶ ಮತ್ತು ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಪ್ರತಿಯೊಂದು ನಗರದಲ್ಲೂ ದರಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಈ ಹಿನ್ನೆಲೆ ಗ್ರಾಹಕರು ತಮ್ಮ ಹತ್ತಿರದ ವಿತರಕರಲ್ಲಿ ನಿಖರ ಬೆಲೆಯನ್ನು ಪರಿಶೀಲಿಸುವುದು ಸೂಕ್ತ. ಆದರೆ ಮತ್ತೊಂದೆಡೆ, ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಾಗಿದ್ದರೂ, 14.2 ಕೆ.ಜಿ.ಯ ಗೃಹಬಳಕೆ ಸಿಲಿಂಡರ್ ದರವನ್ನು ಯಥಾಸ್ಥಿತಿಯಲ್ಲಿದೆ.

ದೇಶದ ಯಾವ ನಗರಗಳಲ್ಲಿ ಗೃಹಬಳಕೆ (14.2 ಕೆ.ಜಿ.) ದರ ಎಷ್ಟಿದೆ?

* ಬೆಂಗಳೂರು - 944.50 ರೂಪಾಯಿ
* ಮುಂಬೈನಲ್ಲಿ ಗೃಹಬಳಕೆ ಸಿಲಿಂಡರ್ ದರ ₹941.50 ಆಗಿದೆ
* ಚೆನ್ನೈನಲ್ಲಿ ಈ ದರ ₹957.50 ರಷ್ಟಿದೆ.
* ಹೈದರಾಬಾದ್‌ನಲ್ಲಿ 14.2 ಕೆಜಿ ಸಿಲಿಂಡರ್ ₹994ಕ್ಕೆ ಲಭ್ಯವಿದೆ.

ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಎಲ್‌ಪಿಜಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಏರಿಳಿತವನ್ನು ಆಧರಿಸಿ ತೈಲ ಮಾರುಕಟ್ಟೆ ಸಂಸ್ಥೆಗಳು ದರ ಪರಿಷ್ಕರಣೆ ಮಾಡುತ್ತವೆ. ಆದರೆ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವಿದ್ದಾಗ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಮಧ್ಯಪ್ರವೇಶಿಸುತ್ತದೆ.

ಅಷ್ಟೇ ಅಲ್ಲದೆ, ಅರ್ಹ ಗ್ರಾಹಕರಿಗೆ ಸರ್ಕಾರವು ನೇರ ಹಣ ವರ್ಗಾವಣೆ ಮೂಲಕ ಸಬ್ಸಿಡಿ ಮೊತ್ತವನ್ನು ತಲುಪಿಸುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ವರ್ಷಕ್ಕೆ ಗರಿಷ್ಠ 12 ಸಿಲಿಂಡರ್‌ಗಳವರೆಗೆ, ಪ್ರತಿ 14.2 ಕೆಜಿ ಸಿಲಿಂಡರ್‌ಗೆ ₹300ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬಳಸುವವರಿಗೆ ಸದ್ಯಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+