LPG Price Cut: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಭರ್ಜರಿ ಇಳಿಕೆ
LPG Cylinder Price Cut: ಇದೀಗ ಹಬ್ಬಗಳು ಸಮೀಪಿಸುತ್ತಿರುವಾಗಲೇ ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಲಿದೆ. ಇದೀಗ ಅದೇ ರೀತಿ ಶುಕ್ರವಾರ ಆಗಸ್ಟ್ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಹಾಗಾದ್ರೆ ಎಷ್ಟು ಇಳಿಕೆಯಾಗಿದೆ ಹಾಗೂ ಬೆಂಗಳೂರು ಸೇರಿದಂತೆ ಯಾವ್ಯಾವ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ. ಇದೀಗ ಆಗಸ್ಟ್ 1ರಂದು ದರ ಪರಿಷ್ಕರಣೆಯಾಗಿದ್ದು, ಈ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಎಷ್ಟು ಇಳಿಕೆಯಾಗಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತೈಲ ಮಾರುಕಟ್ಟೆ ಕಂಪನಿಗಳು ಜುಲೈ 31ರ ಗುರುವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕಡಿತವನ್ನ ಘೋಷಿಸಿದ್ದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 33.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಈ ಹೊಸ ದರ ದರ ಇಂದಿನಿಂದ ಅಂದರೆ ಆಗಸ್ಟ್ 1ರಿಂದಲೇ ಅನ್ವಯ ಆಗಿದೆ.
ಪರಿಷ್ಕೃತ ದರ ದೈನಂದಿನ ಕಾರ್ಯಾಚರಣೆಗಳಿಗೆ ಈ ಸಿಲಿಂಡರ್‌ಗಳನ್ನು ಬಳಕೆ ಮಾಡುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜ ಆದಂತಾಗಿದೆ. ಇನ್ನು ಮನೆಗಳಲ್ಲಿ ಬಳಕೆ ಮಾಡುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎಲ್ಲೆಲ್ಲಿ ಸಿಲಿಂಡರ್ ದರ ಎಷ್ಟಿದೆ?
* ಹೊಸ ಬೆಲೆಗಳು ಆಗಸ್ಟ್ 1ರಿಂದಲೇ ಬಂದಿದ್ದು, ಈ ಕಡಿತದ ನಂತರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1631.50 ರೂಪಾಯಿ ಆಗಿದೆ. ಇದಕ್ಕೂ ಮೊದಲು ಜುಲೈ 1, 2025 ರಂದು, 58.5 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದ್ದು, ಆ ವೇಳೆ ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ 1,665 ರೂಪಾಯಿ ಇತ್ತು.
* ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪರಿಸಷ್ಟರಣೆ ನಂತರ, ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1769.00 ರೂಪಾಯಿಗಳಿಂದ 1735.50 ರೂಪಾಯಿಗಳಿಗೆ, ಮುಂಬೈನಲ್ಲಿ 1616.50 ರೂಪಾಯಿಗಳಿಂದ 1583.00 ರೂಪಾಯಿಗಳಿಗೆ ಮತ್ತು ಚೆನ್ನೈನಲ್ಲಿ 1823.50 ರೂಪಾಯಿಗಳಿಂದ 1790 ರೂಪಾಯಿಗಳಿಗೆ ಇಳಿಕೆಯಾಗಿದೆ.
ನಗರವಾರು ವಾಣಿಜ್ಯ ಸಿಲಿಂಡರ್ ದರಪಟ್ಟಿ
* ನವದೆಹಲಿ - 1,631.50 ರೂಪಾಯಿ
* ಕೋಲ್ಕತ್ತಾ - 1,783 ರೂಪಾಯಿ
* ಚೆನ್ನೈ - 1,790 ರೂಪಾಯಿ
* ಬೆಂಗಳೂರು - 1,704 ರೂಪಾಯಿ
ತೈಲ ಮಾರುಕಟ್ಟೆ ಕಂಪನಿಗಳು 8 ವರ್ಷಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನ 7 ಬಾರಿ ಕಡಿಮೆ ಮಾಡಿವೆ ಎಂದು ತಿಳಿದುಬಂದಿದೆ. ಅದರಲ್ಲೂ ಮಾರ್ಚ್‌ನಲ್ಲಿ ಒಮ್ಮೆ ಬೆಲೆಯನ್ನು ಹೆಚ್ಚಳ ಮಾಡಲಾಗಿತ್ತು. ಮಾರ್ಚ್ ಬಳಿಕ ಸಿಲಿಂಡರ್ ಬೆಲೆಗಳನ್ನು ಇಳಿಕೆ ಮಾಡುತ್ತಿರುವುದು ಇದು ಸತತ 5ನೇ ಬಾರಿ ಆಗಿದೆ.
ತೈಲ ಕಂಪನಿಗಳು ಜುಲೈ-ಜೂನ್‌ನಲ್ಲಿ ಅನಿಲ ಬೆಲೆಯನ್ನು 24 ರೂಪಾಯಿ ಮತ್ತು ಮೇ ತಿಂಗಳಲ್ಲಿ 14.50 ರೂಪಾಯಿ ಕಡಿಮೆ ಮಾಡಿದ್ದವು. ಏಪ್ರಿಲ್‌ನಲ್ಲಿ 41 ರೂಪಾಯಿ ಕಡಿಮೆ ಮಾಡಲಾಗಿತ್ತು. ಇದೇ ರೀತಿ ಗೃಹಬಳಕೆ ಸಿಲಿಂಡರ್ ಬೆಲೆ ಕಡಿಮೆ ಮಾಡಿದರೆ ತುಂಬಾ ಜನರಿಗೆ ಅನುಕೂಲ ಆಗಲಿದೆ.
ಗೃಹಬಳಕೆ ಗ್ಯಾಸ್ ಸಿಲಿಂಡರ್ ದರ: 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ 855 ರೂಪಾಯಿ, ನವದೆಹಲಿಯಲ್ಲಿ 853 ರೂಪಾಯಿ, ಕೋಲ್ಕತ್ತಾದಲ್ಲಿ 879 ರೂಪಾಯಿ, ಮುಂಬೈ 852.50 ರೂಪಾಯಿ ಮತ್ತು ಚೆನ್ನೈನಲ್ಲಿ 868.50 ರೂಪಾಯಿ ಇದೆ.
ಗೃಹಬಳಕೆ ಗ್ಯಾಸ್ ಸಿಲಿಂಡರ್ ದರಪಟ್ಟಿ
* ನವದೆಹಲಿ - 853 ರೂಪಾಯಿ
* ಕೋಲ್ಕತ್ತಾ - 879 ರೂಪಾಯಿ
* ಚೆನ್ನೈ - 868.50 ರೂಪಾಯಿ
* ಬೆಂಗಳೂರು - 855 ರೂಪಾಯಿ












Click it and Unblock the Notifications