ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?

Posted By:
Subscribe to Oneindia Kannada

ಕೇಂದ್ರ ಸರ್ಕಾರವು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಇದರಿಂದಾಗಿ, ಈವರೆಗೆ ವಿವಿಧ ರಾಜ್ಯಗಳಿಗಲ್ಲಿ ಆಯಾ ರಾಜ್ಯಗಳ ನೀತಿ ನಿಯಮಗಳಿಗನುಸಾರವಾಗಿ ಪದಾರ್ಥಗಳ ಮೇಲೆ ವಿಧಿಸಲಾಗುತ್ತಿದ್ದ ಸುಮಾರು 21 ರೀತಿಯ ತೆರಿಗೆಗಳನ್ನು ನಿಷೇಧಿಸಲ್ಪಟ್ಟು ಇನ್ನು ರಾಷ್ಟ್ರಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಹೋಟೆಲ್ ಗಳ ಸೇವೆಗಳಿಗೂ ಈ ತೆರಿಗೆಗಳು ಅನ್ವಯವಾಗುತ್ತವೆ.

ಜನಸಾಮಾನ್ಯರು ನಿತ್ಯ ಬಳಸುವ ವಸ್ತುಗಳನ್ನು ಅವುಗಳ ಉಪಯೋಗ ಹಾಗೂ ಅವುಗಳ ಅಗತ್ಯತೆಯ ಆಧಾರದ ಮೇರೆಗೆ ನಾಲ್ಕು ಮುಖ್ಯ ವಿಭಾಗಳನ್ನಾಗಿ ವಿಂಗಡಿಸಿ ಅವುಗಳಿಗೆ ಈಗಾಗಲೇ ಸಿದ್ಧಗೊಂಡಿರುವ ಮೂರು ಮಾದರಿಯ ಸೇವಾ ತೆರಿಗೆಗಳ ಅಡಿಯಲ್ಲಿ ತರಲಾಗಿದೆ. ಶೇ. 5, ಶೇ. 12, ಶೇ. 18 ಮತ್ತು ಶೇ. 28 ಎಂದು ನಾಲ್ಕು ಮಾದರಿಯ ಸೇವಾ ತೆರಿಗೆಗಳನ್ನು ನಿರ್ಧರಿಸಲಾಗಿದೆ.[GST: ಸೇವಾ ವಲಯದ ತೆರಿಗೆ ಫೈನಲ್; ಶಿಕ್ಷಣ, ಆರೋಗ್ಯಕ್ಕಿಲ್ಲ ಟ್ಯಾಕ್ಸ್]

ಉದಾಹರಣೆಗೆ, ಆಹಾರ ಧಾನ್ಯಗಳನ್ನು ತೆರಿಗೆಯಿಂದ ಮುಕ್ತವಾಗಿಸಿದ್ದರೆ, ಸಕ್ಕರೆ, ಟೀ ಮುಂತಾದ ದಿನಬಳಕೆಯ ವಸ್ತುಗಳ ಮೇಲೆ ಶೇ. 5ರಷ್ಟು, ಬೆಣ್ಣೆ, ತುಪ್ಪ, ಮೊಬೈಲು ಮುಂತಾದ ಅನುಕೂಲಕಾರಿ ವಸ್ತುಗಳ ಮೇಲೆ ಶೇ. 12, ಹೇರ್ ಆಯಿಲ್, ಟೂತ್ ಪೇಸ್ಟ್ ಮಾದರಿಯ ಸರಕುಗಳ ಮೇಲೆ ಶೇ. 18ರಷ್ಟು ಹಾಗೂ ಕಾರು, ಬೈಕು, ಶಾಂಪೂ, ಪಟಾಕಿ, ಹೈರ್ ಡೈ ಮುಂತಾದ ವಸ್ತುಗಳ ಮೇಲೆ ಶೇ. 28ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತದೆ.[GST: ಆಹಾರೋತ್ಪನ್ನಗಳಿಗಿಲ್ಲ ಕರ, ಐಷಾರಾಮಿ ವಾಹನಗಳಿಗೆ ಸೆಸ್ ಬರೆ]

ಹಾಗಾದರೆ, ಯಾವ್ಯಾವ ಪರಿಕರಗಳು, ಸಾಮಗ್ರಿಗಳು ಯಾವ್ಯಾವ ರೀತಿಯ ಸೇವಾ ತೆರಿಗೆಗಳಿಗೆ ಒಳಪಡುತ್ತವೆ ಎಂಬುದರ ಮಾಹಿತಿ ಇಲ್ಲಿದೆ. ದರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮನೆ ಬಜೆಟ್ ಗೆ ಅನುಕೂಲ

ಮನೆ ಬಜೆಟ್ ಗೆ ಅನುಕೂಲ

ದಿನನಿತ್ಯದ ಅತ್ಯುಪಯುಕ್ತವಾದ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ತೆರಿಗೆ ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಆಹಾರ ಧಾನ್ಯಗಳು, ಹಾಲು, ಮೊಟ್ಟೆಗಳು, ಪ್ಯಾಕ್ ಮಾಡಿದರ ಪನ್ನೀರ್, ನೈಸರ್ಗಿಕ ಜೇನು, ತಾಜಾ ಹಣ್ಣು-ತರಕಾರಿಗಳು, ಗೋಧಿ, ಮೈದಾ, ವೆಜಿಟೇಬಲ್ ಆಯಿಲ್, ಉಪ್ಪು, ಮೊಸರು, ಗರ್ಭ ನಿರೋಧಕ ಔಷಧಿ, ಮೀನು, ಅಡಕೆ ಸೊಪ್ಪು, ಬೆಲ್ಲ ಮುಂತಾದವು.[ಮಂಗಳೂರಿನಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘಾವಲ್]

ಸಕ್ಕರೆಗಿರಲಿ ಇತಿ ಮಿತಿ

ಸಕ್ಕರೆಗಿರಲಿ ಇತಿ ಮಿತಿ

ಸಕ್ಕರೆ, ಟೀ, ಕಾಫಿ, ಅಡುಗೆ ಎಣ್ಣೆ, ಮಜ್ಜಿಗೆ, ಮಕ್ಕಳಿಗಾಗಿ ಬಳಸುವ ಹಾಲಿನ ಪುಡಿ, ಪ್ಯಾಕ್ ಮಾಡಲಾದ ಪನ್ನೀರ್, ನ್ಯೂಸ್ ಪ್ರಿಂಟ್, ಛತ್ರಿ, ಸೀಮೆ ಎಣ್ಣೆ, ಎಲ್ ಪಿಜಿ, ಪೊರಕೆ, ನೈಸರ್ಗಿಕ ಗ್ರಾಫೈಟ್, ಸೀಮೆ ಸುಣ್ಣ, ನೈಸರ್ಗಿಕ ಕ್ಯಾಲ್ಶಿಯಂ ಫಾಸ್ಪೇಟ್ (ವೈದ್ಯಕೀಯವಾಗಿ ಬಳಸಲಾಗುತ್ತದೆ), ಥೋರಿಯಂ ಆಕ್ಸಲೇಟ್ (ಟೆಲಿವಿಷನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ).[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]

ಬೆಣ್ಣೆ, ತುಪ್ಪ ಇನ್ನಷ್ಟು ಭಾರ

ಬೆಣ್ಣೆ, ತುಪ್ಪ ಇನ್ನಷ್ಟು ಭಾರ

ಬೆಣ್ಣೆ, ತುಪ್ಪ, ಮೊಬೈಲ್, ಗೋಡಂಬಿ, ಬಾದಾಮಿ, ಹಣ್ಣಿನ ರಸ, ಸಂಸ್ಕರಿತ ಕೊಬರಿ, ಸಂಸ್ಕರಿತ ನೀರು, ಅಗರ್ಬತ್ತಿ, ಬಯೋ ಗ್ಯಾಸ್, ವೈದ್ಯಕೀಯ ಉಪಯೋಗಕ್ಕಾಗಿ ಬಳಸುವ ಹೈಡ್ರೋಜನ್ ಪೆರಾಕ್ಸೈಡ್, ಅಯೋಡಿನ್ ಮುಂತಾದವು.

ಐಸ್ ಕ್ರೀಂಗಳಿಗೆ ತೆರಿಗೆ ಬಿಸಿ

ಐಸ್ ಕ್ರೀಂಗಳಿಗೆ ತೆರಿಗೆ ಬಿಸಿ

ಹೇರ್ ಆಯಿಲ್, ಸೋಪು, ಟೂತ್ ಪೇಸ್ಟ್, ಕ್ಯಾಪಿಟಲ್ ಗೂಡ್ಸ್, ಕೈಗಾರಿಕಾ ಕಚ್ಚಾ ವಸ್ತುಗಳು, ಪಾಸ್ತಾ, ಮೆಕ್ಕೆ ಜೋಳ, ಐಸ್ ಕ್ರೀಮ್, ಟಾಯ್ಲೆಟ್, ಟಿಶ್ಯೂಗಳು, ಕಬ್ಬಿಣ ಹಾಗೂ ಉಕ್ಕು, ಇಂಕ್ ಪೆನ್, ಫ್ಲೋರಿನ್, ಕ್ಲೋರಿನ್, ಬ್ರೊಮೈನ್, ಕೃತಕ ವ್ಯಾಕ್ಸ್ ಮುಂತಾದವು.

ಕಾರು ಕೊಳ್ಳೋರು ಬೇಗನೇ ಯೋಚಿಸಿ

ಕಾರು ಕೊಳ್ಳೋರು ಬೇಗನೇ ಯೋಚಿಸಿ

ಕನ್ಸೂಮರ್ ಡ್ಯೂರಬಲ್ಸ್, ಕಾರುಗಳು, ಸಿಮೆಂಟ್, ಚೀವಿಂಗ್ ಗಮ್, ಕಸ್ಟರ್ಡ್ ಪೌಡರ್, ಪಾನ್ ಮಸಾಲಾ, ಪಫ್ಯೂ್ಮ್, ಶಾಂಪೂ, ಮೇಕಪ್ ಪರಿಕರಗಳು, ಪಟಾಕಿ, ಮೊಲಾಸಸ್, ಹೇರ್ ಕ್ರೀಂ, ಹೇರ್ ಡೈ, ಕೃತಕ ಸ್ಫೋಟಕಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four tax rates will apply to services such as telecom, hotels and transport under the Goods and Services Tax (GST).
Please Wait while comments are loading...