ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST: ಆಹಾರೋತ್ಪನ್ನಗಳಿಗಿಲ್ಲ ಕರ, ಐಷಾರಾಮಿ ವಾಹನಗಳಿಗೆ ಸೆಸ್ ಬರೆ

“ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿಲ್ಲ. ಹೆಚ್ಚಿನ ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಲಾಗಿದೆ. ಒಟ್ಟಾರೆ ತೆರಿಗೆ ಕಡಿತಗೊಳಿಸಲಾಗಿದೆ," ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 18: ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಹಾರೋತ್ಪನ್ನಗಳನ್ನು ಜಿಎಸ್ಟಿಯಿಂದ ಹೊರಗಿಡುವ ಜಂಟಿ ತೀರ್ಮಾನಕ್ಕೆ ಬಂದಿವೆ. ಜತೆಗೆ ದಿನ ಬಳಕೆಯ ವಸ್ತುಗಳಿಗೆ ಕಡಿಮೆ ಟ್ಯಾಕ್ಸ್ ನಿಗದಿ ಮಾಡಲು ನಿರ್ಧರಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ದಿನಗಳಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.

ಇಂದು ನಡೆದ ಸಭೆಯಲ್ಲಿ ಆಹಾರ ಉತ್ಪನ್ನಗಳು ಹಾಗೂ ಬೆಲ್ಲವನ್ನೂ ಪೂರ್ತಿಯಾಗಿ ಲೆವಿಯಿಂದ ಹೊರಗಿಡಲು ಎರಡೂ ಸರಕಾರಗಳು ಒಪ್ಪಿವೆ. ಜತೆಗೆ ಮಿಠಾಯಿ ತಿಂಡಿಗಳು, ಅಡುಗೆ ಎಣ್ಣೆ, ಸಕ್ಕರೆ, ಟೀ, ಕಾಫೀ ಮತ್ತು ಕಲ್ಲಿದ್ದಲಿನ ಮೇಲೆ ಕೇವಲ ಶೇಕಡಾ 5ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]

Foodgrains exempted from levy, luxury vehicles to attract 15% cess in GST

ಇನ್ನು ಕೂದಲೆಣ್ಣೆ, ಹಲ್ಲುಜ್ಜುವ ಪೇಸ್ಟ್ ಮತ್ತು ಸೋಪ್ ಗಳು ಶೇಕಡಾ 18 ತೆರಿಗೆ ವಿಭಾಗದಲ್ಲಿ ಬರುತ್ತವೆ. ಇನ್ನು ಸಣ್ಣ ಕಾರುಗಳ ಮೇಲೆ ಶೇಕಡಾ 28 ತೆರಿಗೆ ಹೊರೆ ಬೀಳಲಿದೆ. ಜತೆಗೆ ಸ್ವಲ್ಪ ಸೆಸ್ ಕೂಡಾ ಬೀಳಲಿದೆ. ಇನ್ನು ಐಶಾರಾಮಿ ಕಾರುಗಳು ಶೇಕಡಾ 15 ಸೆಸ್ ಎದುರಿಸಲಿವೆ. ಇದೇ ರೀತಿ ಏರ್ ಕಂಡೀಷನ್, ಫ್ರಿಡ್ಜ್ ಗಳು ಕೂಡಾ ಶೇಕಡಾ 28ರ ತೆರಿಗೆ ವ್ಯಾಪ್ತಿಯೊಳಕ್ಕೆ ಬರುತ್ತವೆ. ಸದ್ಯ ಇವುಗಳಿಗೆ 30-31 ರಷ್ಟು ತೆರಿಗೆ ಇರುವುದರಿಂದ ಜಿಎಸ್ಟಿ ಬಂದರೆ ಕಡಿಮೆ ತೆರಿಗೆ ಬೀಳಲಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

"ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿಲ್ಲ. ಹೆಚ್ಚಿನ ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಲಾಗಿದೆ. ಒಟ್ಟಾರೆ ತೆರಿಗೆ ಕಡಿತಗೊಳಿಸಲಾಗಿದೆ. ಒಂದೇ ಏನೆಂದರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಇವನ್ನೆಲ್ಲಾ ಮಾಡಲಾಗಿದೆ," ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಇನ್ನು ವರದಿಗಾರರಿಗೆ ಉತ್ತರಿಸಿದ ಕಂದಾಯ ಇಲಾಖೆ ಕಾರ್ಯದರ್ಶಿ ಹಶ್ಮುಖ್ ಅಧಿಯಾ, 1211 ವಸ್ತುಗಳಲ್ಲಿ ಶೇಕಡಾ 7 ವಸ್ತುಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ. ಇನ್ನು ಶೇಕಡಾ 14 ವಸ್ತುಗಳು ಶೇಕಡಾ 5 ತೆರಿಗೆ ವರ್ಗಕ್ಕೆ ಬರುತ್ತವೆ. ಶೇ. 17 ವಸ್ತುಗಳು ಶೇ. 12 ತೆರಿಗೆ ವ್ಯಾಪ್ತಿಯಲ್ಲಿವೆ. ಶೇಕಡಾ 43 ವಸ್ತುಗಳು ಶೇಕಡಾ 18 ತೆರಿಗೆ ಅಡಿಯಲ್ಲಿ ಬರುತ್ತವೆ. ಶೇಕಡಾ 19 ವಸ್ತುಗಳು ಶೇಕಡಾ 28 ತೆರಿಗೆ ವ್ಯಾಪ್ತಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
Foodgrains and gur have been completely exempted from the levy, while products such as mithai, edible oil, sugar, tea, coffee and coal will attract 5% Goods and Service Tax as Centre and the states agreed on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X